# ಸಲೂನ್ ಕೃಷ್ಣ ನನ್ನ ಖಾಯಂ ಹೇರ್ ಡ್ರೆಸರ್ #
ಒಂದು ಕಾಲದಲ್ಲಿ ಈ ವೃತ್ತಿಯವರಲ್ಲಿ ಬಲು ಕಷ್ಟದ ಜೀವನ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೂ ಹೋಗಿ ಎಲ್ಲರ ಕಟಿಂಗ್ ಮಾಡಿ ಸುಗ್ಗಿ ಕಾಲದಲ್ಲಿ ಅವರು ನೀಡುವ ಭತ್ತ, ರಾಗಿ ಕಾಳು ಕಡಿ ಪಡೆಯುವ ವತ೯ನೆ ಹೆಸರಿನ ಪದ್ದತಿ ಇತ್ತು ಅದು ಕೃಷ್ಣನ ಆಜ್ಜನ ಕಾಲಕ್ಕೆ ಮುಗಿಯಿತಾ ಬಂದಿತ್ತು, ನಂತರ ಇವರ ತಂದೆ ಮುನಿಯಣ್ಣ ಅದ೯ ವತ೯ನೆ ಅದ೯ ಸೆಲೂನಿನಲ್ಲಿ ದುಡಿಮೆ ಮಾಡಿದರು.
ಆಗೆಲ್ಲ ವೃತ್ತಿಯ ಬಗ್ಗೆ ಕೀಳರಿಮೆ ಬೆಳೆಸಿಕೊಂಡ ಇವರ ಕುಟುಂಬದಲ್ಲಿ ಅನೇಕರು ಬೇರೆ ವೃತ್ತಿ, ಸಕಾ೯ರಿ ಕೆಲಸಕ್ಕೆ ಸೇರಿದರು, ಬೇರೆ ರಾಜ್ಯದವರು ಬಂದು ಇಲ್ಲೆಲ್ಲ ಭರಪೂರ ದಂದೆ ಮಾಡಲು ಶುರು ಮಾಡಿದ್ದು, ಬ್ಯೂಟಿ ಪಾಲ೯ರ್ ಕಾನ್ಸೆಪ್ಟ್ ಗಳು ಪುನಃ ವಂಶಪಾರಿಖ ವೃತ್ತಿಯನ್ನ ಮುಂದುವರೆಸಲು ಇವರಿಗೆಲ್ಲ ಪ್ರೋತ್ಸಾಹ ನೀಡಿರಬಹುದು.
ಇವರ ಮಗ ಕಾಲೇಜು ಓದುತ್ತಾ ಬಿಡುವಿನಲ್ಲಿ ಸೆಲೂನ್ ಕೆಲಸ ಮಾಡುತ್ತಾನೆ.
ಇವರ ಅಜ್ಜ ದಿವಂಗತ ನಾರಾಯಣಪ್ಪ, ಇವರ ತಂದೆ ದಿ.ಮುನಿಯಣ್ಣ ಈಗ ಮಗ ಕೃಷ್ಣ ಆಗಾಗ ಕೃಷ್ಣ ಇಲ್ಲದಾಗ ಇವರ ಮಗ ನನ್ನ ಕೇಶ ಶೃ೦ಗಾರ ಮಾಡುತ್ತಾನೆ ಹಾಗಾಗಿ ಅವರ ನಾಲ್ಕು ತಲೆಮಾರಿನವರ ಹತ್ತಿರ ನಾನು ವ್ಯವಹರಿಸಿದ್ದೇನೆ.
ಕೃಷ್ಣನ ತಾಯಿಯ ತಂದೆ ನೆಲ್ಲಪ್ಪನವರು ದೂರದ ಕೋಲಾರದ ಆಂದ್ರ ಪ್ರದೇಶದ ಬಾಡ೯ರ್ ನಿಂದ ಬಂದು ನೆಲೆಸಿದವರು, ಬಹಳ ಸಾಹಸಿ ಮತ್ತು ದಯಾಮಯಿ ಅಂತೆ, ಹಾಗೆಯ ಅನ್ಯಾಯದ ವಿರುದ್ದ ಅವರದ್ದೇ ಆದ ಮಾಗ೯ದಲ್ಲಿ ಹೋರಾಟಗಾರರು, ಆನಂದಪುರಂ ಪೇಟೆಯಲ್ಲಿ ಎರಡು ಅಂತಸ್ತಿ ಅತಿ ದೊಡ್ಡ ಕಟ್ಟಡ ಇವರದ್ದೇ ಆಗಿತ್ತು, ಕೃಷಿ ಜಮೀನು ಹೊಂದಿದ್ದರು, ಆಗಿನ ಭೂ ಮಾಲಿಕರು ಮತ್ತು ಸಂಸದರಾಗಿದ್ದ ಬದರಿನಾರಾಯಣ ಅಯ್ಯOಗಾರರ ಕುಟುಂಬದವರು ನೆಲ್ಲಪ್ಪರನ್ನ ಕಂಡರೆ ಭಯ ಪಡುತ್ತಿದ್ದರಂತೆ.
ಈ ನೆಲ್ಲಪ್ಪ ಇಲ್ಲದಿದ್ದರೆ ಅವತ್ತು ಆ ದೊಡ್ಡ ಸಹಾಯ ಮಾಡದಿದ್ದರೆ ನಮ್ಮ ತಂದೆ ಇರುತ್ತಿರಲಿಲ್ಲ, ನಾವು ಹುಟ್ಟುತ್ತಿರಲಿಲ್ಲ ಅವರು ಜೀವದಾನ ಪಡೆದ ಕಥೆ ಕೂಡ ಇದೆ.
ಇವತ್ತು ಕೃಷ್ಣ ಮನೆಗೆ ಬಂದು ಕೇಶ ವಿನ್ಯಾಸ ಮಾಡುವಾಗ ಇದೆಲ್ಲ ನೆನಪಾಯಿತು ಇವರ ಅಜ್ಜ ನೆಲ್ಲಪ್ಪರ ಬಗ್ಗೆ ಮುಂದೆ ಬರೆಯಬೇಕು.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment