# ಸಾಹಸದಿಂದ ನೆರೆಯಲ್ಲಿ ಇಬ್ಬರ ಜೀವ ಉಳಿಸಿದ ಇವರಿಗೆ ಯಾವ ಪ್ರಶಸ್ತಿ!?#
ಮೊನ್ನೆ ದಿಡೀರ್ ಮಳೆಯಿ೦ದ ಸಾಗರ ತಾಲ್ಲೂಕನ ಆನಂದಪುರಂ ಸಮೀಪದ ಕರಿನಳ್ಳದಲ್ಲಿ ನೆರೆ ಬಂದಾಗ ಅದರಲ್ಲಿ ಸಿಕ್ಕಿಬಿದ್ದ ತಮ್ಮ ಎತ್ತನೊಂದು ಬಚಾವ್ ಮಾಡಲು ಪ್ರಯತ್ನಿಸುತ್ತಿದ್ದ ರೈತ ಮಹಿಳೆ ಮತ್ತು ಅವರ ಪುತ್ರ ಬಾರಿ ಮಳೆಯ ಪ್ರವಾಹದಲ್ಲಿ ಸಿಕ್ಕಿ ಬಿದ್ದಿದ್ದರು, ಇದನ್ನ ಗಮನಿಸಿದವರು ಇವರ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಹಂದಿಗನೂರು ನಾಗರಾಜ್ ಗೆ ಪೋನ್ ನಲ್ಲಿ ತಿಳಿಸಿದ್ದಾರೆ.
ತಕ್ಷಣ ತಮ್ಮ ಮೋಟಾರ್ ಬೈಕ್ ನಲ್ಲಿ ಹಗ್ಗದೊ೦ದಿಗೆ ಹೊಸೂರಿನಲ್ಲಿ ಕ್ಯಾ೦ಟಿನ್ ನಡೆಸುವ ಅರುಣ್ ಶೆಟ್ಟಿ ಮತ್ತು ಹೊಳೆನ ಕೊಪ್ಪದ ಈಶ್ವರಪ್ಪನ ಕರೆದುಕೊಂಡು ಹೊಳೆಯ ಇನ್ನೊಂದು ಭಾಗ ತಲುಪಿ ಇಬ್ಬರನ್ನ ರಕ್ಷಿಸಿದ್ದಾರೆ.
ಜನ ಸೇವೆಯಲ್ಲಿ ಯಾವತ್ತೂ ಹಿಂದೆ ಸರಿಯದ ನಾಗರಾಜ್ ಸಾಹಸಿ ಕೂಡ ಮೊನ್ನೆಯ ಇವರ ದೈಯ೯ ಮತ್ತು ಸಾಹಸದಿಂದ ಇಬ್ಬರ ಜೀವ ಉಳಿಯಿತು.
Comments
Post a Comment