#ಸಾಗರದ ಮೊದಲ ಶಾಸಕರು ಸಮಾಜವಾದಿ ಪಕ್ಷದ ಶಾಂತವೇರಿ ಗೋಪಾಲಗೌಡರು.#
ಸ್ವಾತಂತ್ರ್ಯ ನಂತರ ಸಾಗರ, ಸೊರಬ, ಹೊಸನಗರ ಮತ್ತು ತೀಥ೯ಳ್ಳಿ ತಾಲ್ಲೂಕ್ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಗೇಣಿ ರೈತರ ಶೋಷಣೆ ವಿರೋದಿಸಿ, ಗೇಣಿ ರೈತರ ಹಿತರಕ್ಷಣೆಗಾಗಿ ಪ್ರಾಂತ್ಯ ರೈತ ಸಂಘದ ಹೆಸರಲ್ಲಿ ಸಂಘಟನೆ ಪ್ರಾರ೦ಬಿಸಿದ್ದರು.
ಈ ಸಂಘಟನೆಗಳಲ್ಲಿ ಕಡಿದಾಳು ಮಂಜಪ್ಪನವರು, ಗಣಪತಿಯಪ್ಪನವರು, ಎಸ್.ಎಸ್.ಕುಮುಟ ಮತ್ತು ಜಿ.ಆರ್.ಜಿ.ನಗರ್ ಪ್ರಮುಖ ಪಾತ್ರ ವಹಿಸಿದರು, ಈ ಹೋರಾಟ ಸಂಘಷ೯ಕ್ಕೆ ಕಾರಣವಾಯಿತು, ಗೇಣಿ ರೈತರ ಸಂಘಟನೆ ಭೂಮಾಲಿಕರ ಅಸಹನೆಗೆ ಕಾರಣವಾಗಿ ಗೇಣಿ ರೈತರಿಗೆ ಭೂಮಿ ನಿರಾಕರಿಸಿದ್ದು ಮುಂದೆ ಉಳುವವನೆ ಹೊಲದ ಒಡೆಯ ಎ೦ಬ ಘೋಷಣಾ ವಾಕ್ಯದಲ್ಲಿ ಇಡೀ ದೇಶದ ಗಮನ ಸೆಳೆದ ಕಾಗೋಡು ರೈತ ಹೋರಾಟ ಆಯಿತು.
ಶಾಂತವೇರಿ ಗೋಪಾಲ ಗೌಡರು ಸಮಾಜವಾದಿ ಪಕ್ಷದ ರಾಮ ಮನೋಹರ ಲೋಹಿಯಾರನ್ನ ಕರೆ ತಂದದ್ದು, ಅವರು ಕಾಗೋಡಿನಲ್ಲಿನ ಅರಳಿ ಮರದ ಕೆಳಗೆ ಗೇಣಿ ರೈತ ಹೋರಾಟಗಾರರನ್ನ ಪ್ರೇರೇಪಿಸಿ ಬಾಷಣ ಮಾಡಿ ಸಾಗರ ರೈಲು ನಿಲ್ದಾಣದ ತಂಗುದಾಣದಲ್ಲಿ ತಂಗಿದಾಗ ಅವರನ್ನ ಬಂದಿಸಿದ್ದು ಇಡೀ ದೇಶದಲ್ಲಿ ದೊಡ್ಡ ಸುದ್ದಿ ಆಗಿತ್ತು.
ಕಾಗೋಡು ರೈತ ಹೋರಾಟದ ಪ್ರಭಾವದಿಂದ 1952 ರಲ್ಲಿ ನಡೆದ ಮೊದಲ ವಿಧಾನ ಸಭಾ ಚುನಾವಣೆಯಲ್ಲಿ ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಮೊದಲ ಶಾಸಕರಾಗಿ ಆಯ್ಕೆ ಆಗಿ ರಾಜ್ಯ ವಿಧಾನಸಭೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದರು.
ಸಾಗರದ ಕ್ರೀಡಾ೦ಗಣಕ್ಕೆ ಗೋಪಾಲಗೌಡರ ಹೆಸರು ಇಡಲಾಗಿದೆ.
Comments
Post a Comment