CHAMPAKA SARASSU
BEAUTIFUL MANUMENT OF ANANDAPURAM,ONLY 3KM FROM BUS STAND CHAMPAKA SARASSU.
BUILT BY KELADI KING RAJA VENKATAPPA NAYAKA IN THE MEMORY OF DEPARTED QUEEN CHAMPAKA.
ಚಂಪಕ ಸರಸ್ಸು
ಕೆಳದಿ ರಾಜ ವೆಂಕಟಪ್ಪ ನಾಯಕರು ಆನಂದಪುರದಲ್ಲಿ ತನ್ನ ಪ್ರೀತಿಯ ರಾಣಿ ಚಂಪಕಳ ಸ್ಮರಣೆಗಾಗಿ ಕಟ್ಟಿಸಿದ ಈ ಕೊಳ ಅತ್ಯಂತ ಸುಂದರವಾಗಿದೆ, ಆನಂದಪುರದ ಬಸ್ ನಿಲ್ದಾಣದಿಂದ ಕೇವಲ 3 ಕಿ.ಮಿ ದೂರದಲ್ಲಿದೆ.
ಸ್ಥಳಿಯ ಇತಿಹಾಸ ಆಸಕ್ತ ಯುವಕರು ಪ್ರತಿ ವಷ೯ ಇದನ್ನ ಸ್ವಚ್ಚಗೊಳಿಸಿ ಪ್ರವಾಸಿಗರಿಗೆ ಪ್ರವಾಸ ಯೋಗ್ಯ ಸ್ಥಳವಾಗಿಸಿದ್ದಾರೆ.
ರಾಣಿ ಚಂಪಕ ಅನ್ಯ ಜಾತಿಯವಳೆಂಬ ಕಾರಣದಿಂದ ಪಟ್ಟದ ರಾಣಿ ಭದ್ರಮ್ಮ ನಾಯಕಿ ಊಟ ಉಪಹಾರ ತ್ಯಜಿಸಿ ದೇಹ ತ್ಯಾಗ ಮಾಡಿದ್ದರಿಂದ ರಾಜ್ಯದಲ್ಲಿ ಅಲ್ಲೋಲ ಕಲ್ಲೊಲ ಉಂಟಾಗುತ್ತದೆ ಇದರಿಂದ ನೊಂದ ಚಂಪಕ ಹಾಲಿನಲ್ಲಿ ವಜ್ರದ ಪುಡಿ ಬೆರಸಿ ಆತ್ಮಹತೈ ಮಾಡಿಕೊ೦ಡಿದ್ದರಿಂದ ರಾಜಾ ವೆಂಕಟಪ್ಪ ನಾಯಕ ಕಟ್ಟಿಸಿದ ಈ ಸ್ಮಾರಕ ಚಂಪಕ ಸರಸ್ಸು.
ಇತ್ತೀಚಿಗೆ ಖ್ಯಾತ ಸಾಹಿತಿ ನಾ.ಡಿಸೋಜ ಈ ಪ್ರದೇಶದಲ್ಲಿ ಸಂಪಿಕೆ ಮರಗಳಿದ್ದಿರ ಬೇಕು ಹಾಗಾಗಿ ಚಂಪಕ ಸರಸ್ಸು ಅಂತ ಆಗಿರಬೇಕು ಅಂತ ಊಹೆ ಮಾಡಿದ ಬಾಷಣ ಪತ್ರಿಕೆಯಲ್ಲಿ ಬಂದಿತ್ತು ಆದರೆ ಇದು ತಪ್ಪು ಮಾಹಿತಿ ರಾಣಿ ಭದ್ರಮ್ಮ ನಾಯಕಿ ಮರಣದ ಸಂದಭ೯ದಲ್ಲಿ ಪ್ರಸಿದ್ದ ಇತಿಹಾಸಕಾರ ಇಟಲಿಯ ಡೊಲ್ಲಾ ವಲ್ಲೆ ರಾಜಾ ವೆಂಕಟಪ್ಪ ನಾಯಕರ ಬೇಟಿಗಾಗಿ ಇಕ್ಕೇರಿ ಸಮೀಪದ ಆವಿನಹಳ್ಳಿಯಲ್ಲಿ ಕಾಯುತ್ತಿರುತ್ತಾರೆ ಅವರು ಈ ಬಗ್ಗೆ ದಾಖಲಿಸಿದ ಡೈರಿಯ ಈ ಪ್ರಮುಖ ಅಂಶಗಳು ಪ್ರವಾಸಿ ಕಂಡ ಇಂಡಿಯ ಪುಸ್ತಕದಲ್ಲಿ ಡಾ.ನಾಗೇಗೌಡರು ನಮೂದಿಸಿದ್ದಾರೆ.
Comments
Post a Comment