# ಸೂಳೆಕೆರೆ (ಶಾಂತಿ ಸಾಗರ) ತುಂಬಿದೆ#
ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಈ ಬಾರಿ ಅದೂ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಬಂದಿರುವ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ, ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಮೊನ್ನೆ ಶುಕ್ರವಾರ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.
11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.
ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ ಹೆಸರು ಬದಲಿಸಿ ಶಾಂತವ್ವಳ ಸ್ಮಾರಕವಾಗಿ ಶಾಂತಿ ಸಾಗರ ಎಂದೂ ಕರೆಯುತ್ತಾರೆ.
ಏಷ್ಯಾದಲ್ಲಿನ ಎರಡನೇ ಅತಿ ದೊಡ್ಡಕೆರೆ ಇದು (ಅಸ್ಸಾ೦ನ ಸಿಬಾ ಸಾಗರ ಅತಿ ದೊಡ್ಡ ಕೆರೆ) ಅಂದಾಜು 30 ಕಿ.ಮಿ. ಸುತ್ತಳತೆಯಲ್ಲಿ 6550 ಎಕರೆ ಪ್ರದೇಶದಲ್ಲಿ ಶೇಖರವಾಗುವ ನೀರು 9 ರಿಂದ ಗರಿಷ್ಟ 27 ಅಡಿ ಆಳವಿದೆ, 70 ಕಿ.ಮಿ ದೂರದ ಚಿತ್ರದುಗ೯ ಪಟ್ಟಣ ಸೇರಿದಂತೆ ಸುಮಾರು 50 ಹಳ್ಳಿಗೆ ಇದು ಕುಡಿಯುವ ನೀರಿನ ಮೂಲವಾಗಿದೆ.
800 ವಷ೯ದ ಹಿಂದೆ ನಿಮಿ೯ಸಿರುವ ಇದರ ನೀರಿನ ಸುಂದರ ತೂಬು ಈಗಲೂ ಸ್ವಲ್ಪವೂ ಹಾಳಾಗದೇ ಇರುವುದು ಅವತ್ತಿನ ಗುಣಮಟ್ಟದ ನಿಮಾ೯ಣ ಮತ್ತು ಇಂಜಿನಿಯರಿಂಗ್ ಕೌಶಲ್ಯವಾಗಿದೆ.
ಪ್ರೇಮ ವಿವಾಹ, ಅಂತರ್ ಜಾತಿ ವಿವಾಹ ಆ ಕಾಲದಲ್ಲಿ ಎಷ್ಟು ಜನ ವಿರೋದಿ ಆಗಿತ್ತು ಎಂಬುದಕ್ಕೆ ಇದೊ೦ದು ಉದಾಹರಣೆ ನಮ್ಮ ಜಿಲ್ಲೆಯ ಕೆಳದಿ ಅರಸರಲ್ಲಿ ದೀಘ೯ ಕಾಲ ಮತ್ತು ಅತ್ಯುತ್ತಮ ಆಡಳಿತ ಮಾಡಿದ ರಾಜಾ ವೆಂಕಟಪ್ಪ ನಾಯಕ ಚಂಪಕ ಎಂಬ ಸುಂದರಿಯನ್ನ ಪ್ರೇಮಿಸಿ ಮದುವೆ ಆದ್ದರಿಂದ ಚಂಪಕಳನ್ನು ಸೂಳೆ ಎಂದು ಕರೆಯುತ್ತಾರೆ, ಕೆಳದಿ ಅರಸರ ಚರಿತ್ರೆಯಲ್ಲಿ ರಾಜಾ ವೆಂಕಟಪ್ಪ ನಾಯಕರನ್ನ ವಿಜೃಂಬಿಸದOತೆ ಮಾಡಿದ್ದಾರೆ, ಇದೆಲ್ಲ ಸೂಳೆಕೆರೆ ಎದುರು ನಿಂತಾಗ ನೆನಪಾಯಿತು.
Comments
Post a Comment