#ಶ್ರೀಮತಿ ಸೋನಕ್ಕ ಶಾಂತವೇರಿ ಗೋಪಾಲಗೌಡರಿಗೆ ಶೃದ್ದಾ0ಜಲಿಗಳು#
ಸಾಗರದ ಸಮೀಪದ ಕಾಗೋಡಿನಲ್ಲಿ ಪ್ರಾರಂಭವಾದ ಉಳುವವನೆ ಹೊಲದ ಒಡೆಯ ಉದ್ಘೋಷಣೆಯ ಗೇಣಿ ರೈತರ ಹೋರಾಟ ತಾತ್ವಿಕ ಅಂತ್ಯದೆಡೆಗೆ ಒಯ್ದವರು ತೀಥ೯ಹಳ್ಳಿ ಆರಗ ಸಮೀಪದ ಶಾ೦ತವೇರಿಯ ಗೋಪಾಲಗೌಡರು ಈ ಚಳವಳಿಯಲ್ಲಿ ಭಾಗವಹಿಸಿ ಬಂದನಕ್ಕೆ ಒಳಗಾದವರು ಅವತ್ತಿನ ಸಂಸದ್ ಸದಸ್ಯರಾದ ಡಾ.ರಾಮಮನೋಹರ್ ಲೋಹಿಯ ಸಮಾಜವಾದದ ಚಿಂತನೆಯ ಅವರು ಅ೦ದಿನ ಪ್ರದಾನ ಮಂತ್ರಿ ನೆಹರೂರವರ ಚಿಂತನೆಯ ಕಟ್ಟಾ ವಿರೋದಿಗಳು, ಗೋಪಾಲಗೌಡರು ಮತ್ತು ಲೋಹಿಯಾ ಕಾರಣದಿಂದ ಜೆ.ಪಿ., ಮದುಲಿಮೆ ಇನ್ನೂ ಮುಂತಾದ ದೇಶದ ಗಣ್ಯರು ಕಾಗೋಡು ಚಳವಳಿಗೆ ಬೆಂಬಲಿಸಿ ಸಾಗರಕ್ಕೆ ಬಂದಿದ್ದು ಒಂದು ಇತಿಹಾಸ ಮತ್ತು ದಾಖಲೆ, ಈ ಚಳವಳಿ ಪ್ರಾರಂಬಿಸಿದ ಕಾಗೋಡು ಚಳವಳಿಯ ನೇತಾರ ಹೆಚ್.ಗಣಪತಿಯಪ್ಪ ಸ್ಮರಣೀಯರು.
ಶಾಂತವೇರಿ ಗೋಪಾಲ ಗೌಡರ ಸಮಾಜವಾದಿ ಹೋರಾಟದ ಮೂಸೆಯಲ್ಲಿ ಬಂದವರು, ಬಾಗವಹಿಸಿದವರು ಮತ್ತು ಪ್ರಬಾವಕ್ಕೆ ಒಳಗಾದವರು ಅಸಂಖ್ಯ ಮುಖಂಡರು ಅವರಲ್ಲಿ ಬಂಗಾರಪ್ಪ, ಜೆ.ಹೆಚ್.ಪಟೇಲರು, ಕಾಗೋಡು ತಿಮ್ಮಪ್ಪ, ಕೊಣ0ದೂರು ಲಿಂಗಪ್ಪ, ಸ್ವಾಮಿ ರಾವ್, ಜಾಜ್೯ ಪನಾ೯Oಡಿಸ್, UR ಅನಂತಮೂತಿ೯, ಲಂಕೇಶ್, ತೇಜಸ್ವಿ, ಅಜೀಜ್ ಸೇಠ ಹೀಗೆ ದೊಡ್ಡ ಪಟ್ಟಿ ಆಗುತ್ತದೆ.
ಸ್ವಾತಂತ್ರ ನಂತರದ ಮೊದಲ ವಿದಾನ ಸಭಾ ಚುನಾವಣೆಯಲ್ಲಿ ಜಾತಿ ( ಒಕ್ಕಲಿಗರು) ಬೆಂಬಲ, ಪಕ್ಷದ ಬೆಂಬಲ ಮತ್ತು ಹಣ ಬೆಂಬಲ ಇಲ್ಲದೆ ಸಾಗರದಿಂದ ಮೊದಲ ಶಾಸಕರಾಗಿ ಸಮಾಜವಾದಿ ಪಕ್ಷದಿಂದ ಗೋಪಾಲಗೌಡರು ಆಯ್ಕೆ ಆಗಿದ್ದು ಒಂದು ಸವ೯ಕಾಲಿಕ ದಾಖಲೆ ಮತ್ತು ಇತಿಹಾಸ.
ಇವರ ದಮ೯ ಪತ್ನಿ ಸೋನಕ್ಕ ಜೀವನ ಪೂತಿ೯ ನೋವು ಅನುಭವಿಸಿದಾಕೆ ಶಿಕ್ಷಕಿ ಆಗಿ ಅದರ ವೇತನ, ಪಿಂಚಣಿಯಲ್ಲಿ ಜೀವನ ಸಾಗಿಸಿ ಇವತ್ತು ಇಹಲೋಕ ಯಾತ್ರೆ ಮುಗಿಸಿದ್ದಾರೆ, ನಾಳೆ ಅಂತ್ಯ ಸಂಸ್ಕಾರ ಬೆಂಗಳೂರಲ್ಲಿ ನಡೆಯಲಿದೆ.
ಇಡೀ ಶಿವಮೊಗ್ಗ ಜಿಲ್ಲೆಯ ರಾಜಕಾರಣ, ಹೋರಾಟಗಳಲ್ಲಿ ಚಿರಸ್ಥಾಯಿ ಆಗಿರುವ ಗೋಪಾಲಗೌಡರ ದಮ೯ ಪತ್ನಿ ಸೋನಕ್ಕರಿಗೆ ಇವರ ಪತಿಯ ಹೋರಾಟದಿಂದಲೇ ಗೇಣಿ ರೈತರಾಗಿ ಭೂ ಒಡೆತನ ಪಡೆದ ಶಿವಮೊಗ್ಗ ಜಿಲ್ಲೆಯ ಲಕ್ಷಾ೦ತರ ಗೇಣಿ ರೈತರ ಶ್ರದ್ದಾ೦ಜಲಿ ಮತ್ತು ಅವರ ಆತ್ಮಕ್ಕೆ ಸದ್ಗತಿ ಸ್ವಗ೯ ಪ್ರಾಪ್ತಿಯ ದೇವರ ಪ್ರಾಥ೯ನೆ ಸಲ್ಲಲ್ಪಡಲಿದೆ.
Comments
Post a Comment