ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಖ್ಯಾತ ಕೆ.ವಿ. ಸುಬ್ಬಣ್ಣ ರಂಗಮಂದಿರ. ಸಾಗರ ತಾಲ್ಲೂಕಿನ ಖ್ಯಾತ ರಂಗ ಕಮಿ೯, ಬರಹಗಾರ, ಚಿಂತಕ, ವಿಚಾರವಾದಿ, ಪರಿಸರವಾದಿ, ಸಮಾಜವಾದಿ ಮತ್ತು ಅಂತರಾಷ್ಟ್ರ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಹೆಗೋಡಿನ ಕೆ.ವಿ. ಸುಬ್ಬಣ್ಣ ತಮ್ಮ ಊರಲ್ಲಿ ಪ್ರಖ್ಯಾತ ಸಾಹಿತಿ, ಪರಿಸರವಾದಿ, ಯಕ್ಷಗಾನ ತಜ್ಞ ಡಾಕ್ಟರ್ ಶಿವರಾಮ ಕಾರಂತರ ಹೆಸರಲ್ಲಿ ರಂಗ ಮಂದಿರ ಕಟ್ಟಿದ್ದಾರೆ, ನೀನಾಸಂ ಹೆಸರಲ್ಲಿ ಇದು ದೇಶ ಅಂತರ್ ದೇಶದಲ್ಲಿ ಹೆಸರುವಾಸಿ ಆಗಿದೆ. ಹೆಗೋಡಿನಲ್ಲಿ ಅವರು ನಿಮಿ೯ಸಿದ ರಂಗಮಂದಿರಕ್ಕೆ ಶಿವರಾಮ ಕಾರಂತರ ಹೆಸರಿಡಲು ಆವರು ನಡೆಸಿದ ಪತ್ರ ಸಂವಾದ ಸುಬ್ಬಣ್ಣರ ಪುಸ್ತಕದಲ್ಲಿ ನಮೂದಿಸಿದ್ದಾರೆ, ಇವರು ಶಿವರಾಮ ಕಾರ೦ತರ ಹೆಸರಿಡಲು ತೀಮಾ೯ನಿಸಿ ಅವರ ಒಪ್ಪಿಗೆ ಗಾಗಿ ಪತ್ರಿಸುತ್ತಾರೆ ಅದಕ್ಕೆ ಕಾರಂತರ ಉತ್ತರ ಪ್ರತ್ಯುತ್ತರ ಆ ಪುಸ್ತಕದಲ್ಲಿದೆ. ಜಿಲ್ಲಾ ಪಂಚಾಯತ ಸದಸ್ಯನಾದ ನಂತರ ಅವರ ಒಡನಾಟ ಕಾಗೋಡು ಹೋರಾಟದ ನೇತಾರ ಗಣಪತಿಯಪರಿಂದ ಹೆಚ್ಚಾಯಿತು ಅದಕ್ಕೂ ಮೊದಲು ಸುಬ್ಬಣ್ಣರ ಬಗ್ಗೆ ಓದಿ ತಿಳಿದಿದ್ದೆ, ಕೇಳಿ ಅರಿತಿದ್ದೆ ಹಾಗೂ ದೂರದಿಂದ ನೋಡಿ ಬಲ್ಲಿದ್ದೆ. ಒಮ್ಮೆ ಸಾಗರದಿಂದ ಆನಂದಪುರಕ್ಕೆ ರಾತ್ರಿ ಹೋಗುವಾಗ ಆ ಬಸ್ಸಲ್ಲಿ ಸ...