#ಆಚಾರ್ಯಶ್ರೀ108_ಶ್ರೀಕುಂತುಸಾಗರಜೀ_ಮಹಾರಾಜರ #ಪುಣ್ಯಚರಣ_ಸ್ಪರ್ಶದ_ಬಾಗ್ಯ_ನಮ್ಮ_ಸಂಸ್ಥೆಗೆ #ನನ್ನ_ಪೂರ್ವ_ಜನ್ಮದ_ಪುಣ್ಯದ_ಫಲ_ಈ_ಸತ್ಸಂಗಳು ದೇಶದ ಅಗ್ರಗಣ್ಯ ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರಜಿ ಜೈನ ಮುನಿ ಮಹಾರಾಜರನ್ನ ದರ್ಶನ ಮಾಡುವ ಸದಾವಕಾಶ ನಾಳೆ ಸಾಗರದ ಭಕ್ತವೃಂದಕ್ಕೆ ಸಿಗಲಿದೆ ಈ ಸುವರ್ಣಾವಕಾಶ ಕಳೆದು ಕೊಳ್ಳಬಾರದು. https://youtu.be/Jrkz48Bo634?si=YhkDb8X_5Z77FdQQ #jainism #kunthusagarji #kunthugirikshetra #munimaharaj #sudeerpatil #Humcha ಭಾರತ ದೇಶದ ಜೈನ ಮುನಿಗಳಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರದ ಕೊಲ್ಲಾಪುರ ಸಮೀಪದ ಕುಂತು ಗಿರಿ ಕ್ಷೇತ್ರದ ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರ ಜಿ ಮಹಾರಾಜರು ಇವತ್ತು ತಮ್ಮ ಪರ್ಯಟನೆಯಲ್ಲಿ ಹುಂಚಾದಿಂದ ಸಾಗರ ಮಾರ್ಗವಾಗಿ ಸಂಚರಿಸುವಾಗ ತಮ್ಮ ಆಹಾರ ಸೇವನೆಗಾಗಿ ನಮ್ಮ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ಬಂದಿದ್ದರು. ಕುಂತುಗಿರಿ ಕ್ಷೇತ್ರ ಮಹಾರಾಷ್ಟ್ರದ ಕೊಲ್ಲಾಪುರದಿಂದ ಸಾಂಗ್ಲಿ ಮಾರ್ಗವಾಗಿ 22 ಕಿ.ಮೀ ದೂರದಲ್ಲಿದೆ ಅಲ್ಲಿ 40 ಎಕರೆ ಪ್ರದೇಶದಲ್ಲಿ ಕುಂತುಗಿರಿ ಕ್ಷೇತ್ರ ಇದೆ ಇದರ ಸ್ಥಾಪಕರು ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರ್ ಜಿ. ಒಂದು ವಿಶೇಷವೆಂದರೆ 1961- 62 ರಲ್ಲಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕಕ್ಕಾಗಿ ಇವರು ತಮ್ಮ ಗುರು ಮಹಾವೀರ ಕೀರ್ತಿ ಮಹಾರಾಜರ ಜೊತೆ ಬಂದವರು ವಾಪಸು ಹೋಗುವಾಗ ಹುಂಚಾದ ಶ್ರೀ ಪದ್...