Skip to main content

Posts

Showing posts from March, 2025

Blog number 3402. ರಂಜಾನ್ ಮಾಹಿತಿ

#ರಂಜಾನ್_ಹಬ್ಬದ_ಶುಭಾಷಯಗಳು #ಮುಸ್ಲಿಂ_ಧರ್ಮಿಯರಲ್ಲಿ_ರಂಜಾನ್_ಸಮಯದಲ್ಲಿ_ಹೆಚ್ಚಿನ_ಪ್ರತಿಫಲ_ದೊರೆಯುತ್ತದೆಂಬ_ನಂಬಿಕೆ #ಧರ್ಮಗ್ರಂಥ_ಕುರಾನ್_ಪೂರ್ಣ_ಈ_ತಿಂಗಳಲ್ಲಿ_ಪಠಣ_ಮಾಡುತ್ತಾರೆ #ಕುರಾನ್_ಜಗತ್ತಿಗೆ_ಬಹಿರಂಗ_ಪಡಿಸಿದ_ಶಕ್ತಿಯ_ರಾತ್ರಿ_ರಂಜಾನ್_27ನೇ_ರಾತ್ರಿ #ರಂಜಾನ್_ತಿಂಗಳ_ಕೊನೆಯಲ್ಲಿ_ದಾನ_ಕಡ್ಡಾಯ ಪ್ರತಿ ವರ್ಷ ರಂಜಾನ್ ಇಂಗ್ಲೀಷ್ ಕ್ಯಾಲೆಂಡರ್ ನ 11 ದಿನ ಹಿಂದೆ ಸರಿಯಲು ಕಾರಣ...   ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್‌ನ 9 ನೇ ತಿಂಗಳು, ಇದು ಸುಮಾರು 354 ದಿನಗಳ 12 ತಿಂಗಳ ಚಂದ್ರ ವರ್ಷವನ್ನು ಆಧರಿಸಿದೆ.  ಚಂದ್ರ ವರ್ಷವು ಸೌರ ವರ್ಷಕ್ಕಿಂತ 11 ದಿನಗಳು ಕಡಿಮೆ ಇರುವುದರಿಂದ, ಪ್ರತಿ ಚಂದ್ರ ತಿಂಗಳು ಪ್ರತಿ ವರ್ಷ 11 ದಿನಗಳ ಹಿಂದೆ ಚಲಿಸುತ್ತದೆ.  ಚಂದ್ರ ತಿಂಗಳುಗಳು ಪೂರ್ಣ ಚಕ್ರವನ್ನು ಪೂರ್ಣಗೊಳಿಸಲು ಮತ್ತು ಅದೇ ಋತುವಿಗೆ ಮರಳಲು 33 ಸೌರ ವರ್ಷಗಳನ್ನು ತೆಗೆದುಕೊಳ್ಳುತ್ತದೆ.  ಸಾಂಪ್ರದಾಯಿಕವಾಗಿ ಅಮಾವಾಸ್ಯೆಯ ದರ್ಶನದ ಆಧಾರದ ಮೇಲೆ ತಿಂಗಳು ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ. #RamadanMubarak #Ramadan #islam #kuran     ಮುಸ್ಲಿಂ ಸಮುದಾಯ ಆಚರಿಸುವ ರಂಜಾನ್ ಆಚರಣೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ಓದಿ...    ರಂಜಾನ್ ಅಥವ ರಮದಾನ್ (ಅರೇಬಿಕ್‌ ಭಾಷೆಯಲ್ಲಿ) ಇಸ್ಲಾಮ್ ಕ್ಯಾಲೆಂಡರ್‌ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ...

Blog number 3401. ಅಂದಾಸುರ ರುದ್ರಪ್ಪರ ಸಾಧನೆ

#ನಮ್ಮೂರಿನ_ಹೆಮ್ಮೆ_ರುದ್ರಪ್ಪ_ಅಂದಾಸುರ #ಕಷ್ಟದಿಂದ_ವಿದ್ಯಾಭ್ಯಾಸ_ಮಾಡಿ_ಉನ್ನತ_ಹುದ್ದೆ_ಪಡೆದವರು #ಹುಟ್ಟಿದ_ಊರಲ್ಲಿ_ಮನೆ_ಗೃಹಪ್ರವೇಶ #ಆಹ್ವಾನ_ನೀಡಲು_ಬಂದಿದ್ದರು    ನಮ್ಮ ತಂದೆ ರುದ್ರಪ್ಪರ ಬಗ್ಗೆ ಹೆಚ್ಚು ಅಭಿಮಾನ ಹೊಂದಿದ್ದರು.    ರುದ್ರಪ್ಪನವರು ಮತ್ತು ಕಾಳೇಶ್ವರದ ಕೆ.ಆರ್. ದರ್ಮಪ್ಪನವರು ಆನಂದಪುರಂನಲ್ಲಿ ವಿದ್ಯಾಬ್ಯಾಸದಲ್ಲಿ ಶಾಲಾ ಸಹಪಾಟಿಗಳು.        ರುದ್ರಪ್ಪನವರು ನಮ್ಮ ಆನಂದಪುರಂ ಹೋಬಳಿಯ ಈಗಿನ ಆಚಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಅಂದಾಪುರ ಗ್ರಾಮದ ಶ್ರೀಮತಿ ರಾಮಕ್ಕ ಮತ್ತು ಸಿದ್ದಪ್ಪ ಕಟಗಾರ ದಂಪತಿ ಪುತ್ರ.    ಇವರ ಪತ್ನಿ ಶ್ರೀಮತಿ ಜಯಮ್ಮ ಸಮೀಪದ ಕೆರೆಹಿತ್ತಲು ಗ್ರಾಮದ ಶ್ರೀಮತಿ ಕೊಲ್ಲಮ್ಮ ಮತ್ತು ಗುಮ್ಮಿ ನಾಗಪ್ಪರ ಪುತ್ರಿ (ಗುಮ್ಮಿ ನಾಗಣ್ಣ ಅವರ ಊರಿನ ಶಾಲೆಗೆ ಭೂದಾನ ಮಾಡಿದವರು).    ನಿನ್ನೆ ದಂಪತಿಗಳು  ಅಂದಾಸುರದಲ್ಲಿ ನಿರ್ಮಿಸಿದ ನೂತನ ಗೃಹ ಪ್ರದೇಶದ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು ದಿನಾಂಕ 9 ಏಪ್ರಿಲ್ 2025 ಬುಧವಾರ ಇವರ ನೂತನ ಗೃಹ #ಶ್ರೀಅನುಗ್ರಹ_ನಿಲಯದ ಗೃಹ ಪ್ರವೇಶದ ಕಾರ್ಯಕ್ರಮ ಇದೆ.   ಚಹಾದ ಆತಿಥ್ಯದ ಜೊತೆ ರುದ್ರಪ್ಪರನ್ನ ಮಾತಿಗೆ ಎಳೆದಾಗ ನನ್ನ ತಂದೆ ಮತ್ತು ಅವರ ಒಡನಾಟ, ಅವರ ವಿದ್ಯಾಬ್ಯಾಸ -ಉದ್ಯೋಗದ ಬಗ್ಗೆ ಮತ್ತು ಆಗಿನ ಆನಂದಪುರಂ ಹೇಗಿತ್ತು ಅಂತಲೂ ಅ...

Blog number 3399. ಕೆಂಜಿಗಾಪುರ ವೀರ ಭದ್ರ ದೇವರ ರಥೋತ್ಸವ

#ಕೆಂಜಿಗಾಪುರದ_ಶ್ರೀವೀರಭದ್ರಸ್ವಾಮಿ_ದೇವರ_ಜಾತ್ರೆ_ರಥೋತ್ಸವ. #ಆನಂದಪುರಂ_ಸಮೀಪದ_ಕೆಂಜಿಗಾಪುರದಲ್ಲಿ #ಪ್ರತಿವರ್ಷ_ಹೋಳಿಹುಣ್ಣಿಮೆ_ದಿನ_ರಥೋತ್ಸವ_ಆಚರಣೆ #ವಿಜಯನಗರದ_ಅರಸು_ಪ್ರೌಡ_ಪ್ರತಾಪ_ರಾಯ_606_ವರ್ಷದ_ಹಿಂದೆ_ನಿರ್ಮಿಸಿದ_ದಾಖಲೆಯಿದೆ #ಪ್ರೌಡ_ಪ್ರತಾಪರಿಗೆ_ಗಜ_ಬೇಟೆಗಾರ_ಎಂಬ_ಬಿರುದು_ಇತ್ತು. #shivamogga #sagar #ananandapuram #Yadehalli #kenjigapura #veerabadreshwara #temple     ವಿಜಯನಗರದ ಅರಸು ಪ್ರೌಡ ಪ್ರತಾಪರಾಯ ಆ ಕಾಲದಲ್ಲಿ ಅರಣ್ಯದಲ್ಲಿನ ಕಾಡಾನೆಗಳನ್ನು ಹಿಡಿದು ಪಳಗಿಸಿ ಅದನ್ನು ತನ್ನ ಸೈನ್ಯದಲ್ಲಿ ಬಳಸುತ್ತಿದ್ದಂತ ಸಾಹಸಿ ಆದ್ದರಿಂದ ಪ್ರೌಢ ಪ್ರತಾಪ ರಾಯರಿಗೆ #ಗಜ_ಬೇಟೆಗಾರ ಎಂಬ ಬಿರುದು ಇತ್ತು.    ಆರುನೂರು ವರ್ಷಗಳ ಹಿಂದೆ ಈ ಪ್ರದೇಶ ದೊಡ್ಡ ಜನ ವಸತಿ ಪ್ರದೇಶ ಆಗಿರಬೇಕು.    ಕೆಂಜಿಗಾಪುರದ ಶ್ರೀವೀರಭದ್ರೇಶ್ವರ ದೇವಾಲಯ ನಿರ್ಮಾಣವಾಗಿ ಇಲ್ಲಿನ ಶಾಸನಗಳ ಪ್ರಕಾರ 606 ವರ್ಷಗಳಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಚಿಕ್ಕ ಗ್ರಾಮ  ಕೆಂಜಿಗಾಪುರ ಈಗ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ.   ಈ ದೇವಾಲಯ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದೆ.    ಪ್ರತಿ ವರ್ಷ ಹೋಳಿ ಹುಣ್ಣಿಮೆಯಂದು ಶ್ರೀವೀರಭದ್ರ ದೇವರ ರಥೋತ್ಸವ ನೆರವೇರುತ್ತದೆ ಅದರ ಹಿಂದಿನ ದಿನ ಹೂವಿನ ಪಲ್ಲಕ್ಕಿ ಉತ್ಸವ ನ...

Blog number 3400. ಸುನೀತಾ ವಿಲಿಯಮ್ಸ್ ಭಾರತೀಯ ಮೂಲದ ಅಮೇರಿಕನ್ ಬಾಹ್ಯಾಕಾಶ ಯಾತ್ರಿ

#ಬಾಹ್ಯಾಕಾಶ_ನಿಲ್ದಾಣದಿಂದ_ಭೂಮಿಗೆ_ತಲುಪಲಿರುವ #ಸುನೀತಾವಿಲಿಯಂ_ಮತ್ತು_ಗ್ಯಾರಿವಿಲ್ಮೋರ್ #ಮಾರ್ಚ್_16ರಂದು_ಭೂಮಿಗೆ #spaceexploration #kenadyspacecentre #sunithawilliams #spacestation #Nyasa   ಸುನೀತಾ ಲಿನ್ #ಸುನಿ_ವಿಲಿಯಮ್ಸ್ ಒಬ್ಬ ಅಮೇರಿಕದ ಗಗನ ಯಾತ್ರಿ ಮತ್ತು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪ್ರಸ್ತುತ ಕಮಾಂಡರ್.   2024 ಜೂನ್ 5 ರಂದು 10 ದಿನಗಳ ಕೆಲಸಕ್ಕಾಗಿ ಬಾಹ್ಯಾಕಾಶ ನಿಲ್ದಾಣ ತಲುಪುತ್ತಾರೆ.   ಇವರು ಪ್ರಯಾಣಿಸಿದ್ದ ಬೋಯಿಂಗ್ ಸ್ಟಾರ್ ಲೈನರ್ ನೌಕೆಯ ರಿಟರ್ನ್ ಕ್ಯಾಪ್ಸೂಲ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಿಂದ ಕಳೆದ 9 ತಿಂಗಳಿಂದ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದಿದ್ದಾರೆ.   ಕಳೆದ ಸೆಪ್ಟೆಂಬರ್ 2024ರಲ್ಲಿ ರಿಟರ್ನ್ ಕ್ಯಾಪ್ಸೂಲ್ ತಾಂತ್ರಿಕ ದೋಷವಿದ್ದರಿಂದ ಮಾನವ ರಹಿತ ಖಾಲಿ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಿತ್ತು.   ಈ ವರ್ಷ ಫೆಬ್ರುವರಿ 2025ರಲ್ಲಿ ಸ್ಪೇಸ್ ಎಕ್ಸ್ ಕ್ರೂ-9 ಮಿಷನ್ ಲಾಂಚ್ ಮಾಡಲಾಗಿತ್ತು ಅದರಲ್ಲಿ ಗಗನಯಾತ್ರಿ ನಿಕ್ ಹೇಗ್ ಮತ್ತು ರೋಸ್ ಕಾಸ್ಮೇನ್ ಬಾಹ್ಯಾಕಾಶ ನಿಲ್ದಾಣ ತಲುಪಿದ್ದಾರೆ ಅವರ ಜೊತೆ ಸುನೀತಾ ವಿಲಿಯಮ್ಸ್ ಮತ್ತು ಗ್ಯಾರಿ ಎಲ್ಮೋರ್ ಭೂಮಿಗೆ ವಾಪಾಸಾಗಲಿದ್ದಾರೆ.  ಅಮೇರಿಕಾದ ಗಗನಯಾತ್ರಿ 60 ವರ್ಷದ ಸುನೀತಾ ವಿಲಿಯಂ ತಂದೆ ಭಾರತೀಯ ಮೂಲದ ನರರೋಗ ತಜ್ಞ ದೀಪಕ್ ಪಾಂಡ್ಯ ಗುಜರಾತಿನ ಮೆಹ್ಸಾನ ಜಿ...

Blog number 3398 ರಿಪ್ಪನಪೇಟೆ ವಿನಾಯಕ ಸರ್ಕಲ್ ನಿಂದ ಯಡೇಹಳ್ಳಿ ಅಂಬೇಡ್ಕರ್ ಸರ್ಕಲ್ ರಸ್ತೆ ಅಗಲಿಕರಣ

#ರಿಪ್ಪನಪೇಟೆ_ಆನಂದಪುರಂ_ರಸ್ತೆ_ಅಗಲೀಕರಣ  #ಎರಡೂ_ತಾಲೂಕುಗಳ_ಪ್ರಮುಖ_ಕೇಂದ್ರಗಳಿಗೆ_ಸಂಪರ್ಕ #ರಿಪ್ಪನಪೇಟೆ_ವಿನಾಯಕ_ವೃತ್ತದಿಂದ #ಆನಂದಪುರಂನ_ಯಡೇಹಳ್ಳಿ_ಅಂಬೇಡ್ಕರ್_ವೃತ್ತದವರೆಗೆ 14-march-2025 #yadehallicircle #Anandapuram #ripponpet #roadsafety     ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಮತ್ತು ಸಾಗರ ತಾಲೂಕಿನ ಆನಂದಪುರಂಗೆ ಇರುವ ಅಂತರ ಕೇವಲ 10 ಕಿ.ಮೀಟರ್.     ಇವೆರೆಡೂ ಊರುಗಳು ಆಯಾ ತಾಲೂಕಿನ ಪ್ರಮುಖ ವ್ಯಾಪಾರಿ ಕೇಂದ್ರ ಮತ್ತು ಹೋಬಳಿ ಕೇಂದ್ರಗಳಾಗಿದೆ.      ಇವೆರೆಡೂ ಊರುಗಳು ಈಗ ಗ್ರಾಮ ಪಂಚಾಯಿತಿ ಕೇಂದ್ರಗಳಾಗಿದೆ ಇದನ್ನು ಶೀಘ್ರವಾಗಿ  ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಬಹುದಾಗಿದೆ.     ರಿಪ್ಪನ್ ಪೇಟೆ ವಿನಾಯಕ ವೃತ್ತದಿಂದ ಆನಂದಪುರಂನ ಯಡೇಹಳ್ಳಿಯ ಅಂಬೇಡ್ಕರ್ ವೃತ್ತದವರೆಗಿನ ರಸ್ತೆ ಕಾಮಗಾರಿ ಭರದಿಂದ ಸಾಗಿದೆ.

Blog number 3397. ಕೆಂಜಿಗಾಪುರದ ವೀರಭದ್ರ ಸ್ವಾಮಿ ದೇವರ ಇತಿಹಾಸ

#ದಿಲೀಪ್_ನಾಡಿಗ್ #ಶಿವಮೊಗ್ಗದ_ಇತಿಹಾಸ_ಸಂಶೋದಕರು #ಕೆಂಜಿಗಾಪುರದ_ವೀರಭದ್ರ_ದೇವರ_ರಥೋತ್ಸವದ_ಬಗ್ಗೆ_ತಿಳಿಸಿದ್ದಾರೆ. ನಮ್ಮೂರು ಆನಂದಪುರಂನ ಯಡೇಹಳ್ಳಿ ಸಮೀಪದ ಕೆಂಜಿಗಾಪುರದ ವೀರಭದ್ರ ದೇವರ ರಥೋತ್ಸವ ಹೋಳಿ ಹುಣ್ಣಿಮೆ ದಿನ ಭಕ್ತಿಪೂರ್ವಕವಾಗಿ ನೆರವೇರಿತು ಮಲ್ಲ ಸಮಾಜದವರು ಹಾಗೂ ಕೆಳದಿಯ ಸಂಬಂಧಿಕರಾದ ಆನಂದಪುರ ಮರಿಯಪ್ಪ  ಶೆಟ್ಟರು. ಚನ್ನಶೆಟ್ಟಿಕೊಪ್ಪದ  ದುಗ್ಗಾನಿ  ಶೆಟ್ಟರು.ಹಾಗೂ ಇತರೆ  ಮನೆತನದವರ ಆರಾಧ್ಯ ಮನೆದೇವರು  ಕೆಂಜಿಗಾಪುರ ಶ್ರೀ ವೀರಭದ್ರೇಶ್ವರ ಸ್ವಾಮಿ #kenjigapura #veerabadra #temple #keladi  ಇತಿಹಾಸ ಸಂಶೋದಕ ದಿಲೀಪ್ ನಾಡಿಗ್ ಲೇಖನ ಓದಿ ಮಲ್ಲ ಸಾಮ್ರಾಜ್ಯ  ವಿಜಯನಗರ ಸಾಮ್ರಾಜ್ಯ  ಸಂಗಮ ವಂಶಸ್ಥರು   "#ಕೆಂಜಿಗಾಪುರ_ಶ್ರೀವೀರಭದ್ರೇಶ್ವರ_ರಥೋತ್ಸವ " ಆನಂದಪುರ ಎಡೆಹಳ್ಳಿ ಸಮೀಪವಿರುವ ಕೆಂಜಿಗಾಪುರ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಕಣ್ಗಳ ವೀರಪ್ಪ ಗುರುಗಳ ಗದ್ದುಗೆ  ಪ್ರತಿ ವರ್ಷವೂ ಕೆಂಜಿಗಾಪುರ  ಶ್ರೀ  ವೀರಭದ್ರೇಶ್ವರ ದೇವಸ್ಥಾನದ ಹೋಳಿ ಹುಣ್ಣಿಮೆಯ ರಥೋತ್ಸವವು ಐತಿಹಾಸಿಕ ಹಾಗೂ ಬಹಳ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಂತಹ ಪದ್ಧತಿ ಅದೇ ರೀತಿ ಈ ವರ್ಷವೂ  ವಿಜೃಂಭಣೆಯಿಂದ ನೆರವೇರಿದೆ      ಕೆಂಜಗಾಪುರದ ಶ್ರೀ ವೀರಭದ್ರೇಶ್ವರ ದೇವಸ್ಥಾನವು ವಿಜಯನಗರ ಸಾಮ್ರಾಜ್ಯದ...

Blog number 3396. ದಿನಾಂಕ 9 - ಮಾರ್ಚ್- 2025 ರ ವರೆಗಿನ ರಾಮಚಂದ್ರಪುರ ಮಠದ ಸ್ವಾಮಿಗಳ ಮೇಲಿನ ಕೇಸುಗಳ update ನೋಡಿ

ಜೆಗಳೆಮನೆ ಗಣಪತಿ ಭಟ್ಟರ ಪೇಸ್ ಬುಕ್ ಪೋಸ್ಟ್ ದಿನಾಂಕ 9 - ಮಾರ್ಚ್- 2025. ರಾಮಚಂದ್ರಪುರ ಮಠದ ಸ್ವಾಮಿಗಳ ವಿರುದ್ಧದಎರಡು ಕೇಸ್ ಗಳ ವಿವರ. (ಶಂಕರಭಟ್ಟರ ಕೃಪೆಯಿಂದ) ಮೂಲ ಇಂಗ್ಲಿಷ್, ಭಾಷಾಂತರ ಕನ್ನಡದಲ್ಲಿ. "First Rape Case:  In August 2014, the daughter of the Shastri couple filed a complaint against Ragaveshwar Swami at the Banashankari police station in Bangalore, alleging her mother had been sexually assaulted (FIR 219/14). The case was transferred to the Girinagar police station (FIR 164/14). Prior to this, a blackmail case was registered against the Diwakar couple at the Honnavar police station (FIR 342/14). This case also pending in apex Court, case diary no 10408/19. The CID filed a charge sheet against Swamy (SC_1242/16). The Bangalore Sessions Court discharged Swamy, citing a "consensual relationship" without a trial. The CID and victim filed a revision petition in the High Court (CrlRP 550/16 and CrlRP 638/16). The Court held that the CID wasn't a "Police Station...

#Blog number 3395. ರಾಮಚಂದ್ರಾಪುರ ಮಠದ ಈಗಿನ ಫೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮಿಗಳ ಶಾಲಾ TC ಮತ್ತು ಜಾತಕ ಬೇರೆ ಬೇರೆ ಯಾಕೆ?

ರಾಮಚಂದ್ರಾಪುರ ಮಠದ ಈಗಿನ ಫೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮಿಗಳ ಶಾಲಾ TC ಮತ್ತು ಜಾತಕ ಬೇರೆ ಬೇರೆ ಯಾಕೆ? ಸಿ ಎಮ್ ಶ್ರೀನಿವಾಸಭಟ್ಟರ ಮಗ ಹರೀಶನ TC  ಹುಟ್ಟಿದ ತಾರೀಖು 15 5 75. ಹದಿನೈದು, ಐದು ಎಪ್ಪತ್ತೈದು. ಲಿಂಗನಮಕ್ಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದು. 7 6 86 ರಂದು ಈ ಟಿಸಿ ಕೊಡಲ್ಪಟ್ಟಿದೆ. ಆರನೇ ತರಗತಿ ಮುಗಿಸಿ ಏಳನೇ ತರಗತಿಗೆ ಜಾಯಿನ್ ಆಗುವಾಗ  ಹನ್ನೊಂದು ವರ್ಷ.ಆವಾಗ ಕೊಟ್ಟಿದ್ದು. ಜಾತಕವೂ ಹರೀಶನದೇ. ಜಾತಕದಲ್ಲಿ ಹುಟ್ಟಿದ ತಾರೀಖು 25 7 75. ಇಪ್ಪತೈದು ಏಳು ಎಪ್ಪತ್ತೈದು. 15 5 75 ಕ್ಕು 25 7 75 ಕ್ಕು ಅಂತರ ಎರಡು ತಿಂಗಳು ಹತ್ತು ದಿನ ಮಾತ್ರ. ಜೂನ್‌ ತಿಂಗಳು ಶಾಲೆಗೆ ಸೇರಲು ಆವಾಗ ಐದು ವರ್ಷ ಹತ್ತು ತಿಂಗಳು ಆಗ ಬೇಕಾಗಿತ್ತು..25 7 75 ನೇ ತಾರೀಖು  ಇವರಿಗೆ ಶಾಲೆಗೆ ಸೇರಿಸಲು ಅಡ್ಡಿಯಾದ ತಾರೀಖಲ್ಲ.ಆ ತಾರೀಖು ಕೂಡ ಶಾಲೆಗೆ ಸೇರಿಸಿಕೊಳ್ಳಲು ಅರ್ಹವಾದ ತಾರೀಖೇ. ಹೀಗಿದ್ದರೂ ಜಾತಕದಲ್ಲಿ ಒಂದು ಹುಟ್ಟಿದ ತಾರೀಖು, ಶಾಲಾ ಸರ್ಟಿಫಿಕೇಟ್ ನಲ್ಲಿ ಒಂದು ಹುಟ್ಟಿದ ತಾರೀಖು ಯಾಕಾಯಿತು? ಯಾಕಾಯಿತು ಎಂದರೆ ನಿಜವಾಗಿ ಹುಟ್ಟಿದ್ದು 15 5 75 ರಂದೇ. ಆದರೆ ಆ ದಿನದ ಜಾತಕದಲ್ಲಿ ಸನ್ಯಾಸಯೋಗ ಇಲ್ಲ.ಪೀಠಾಧಿಪತಿ ಯಾಗಲು ತಯಾರಿಸಿದ ಜಾತಕ 25 7 75 ರಂದು ಸನ್ಯಾಸಯೋಗ ಇದೆ.ಅದಕ್ಕಾಗಿಯೇ ಆ ತಾರೀಖಿನ ಜಾತಕ ಮಾಡಿಸಿ 35ನೇ ಪೀಠಾಧಿಪತಿ ಗಳಾದ ಶ್ರೀ ರಾಘವೇಂದ್ರ ಭಾರತಿಯವರಿಗೆ ತಪ್...