ಮಹಾರಾಷ್ಟ್ರದ ರತ್ನಗಿರಿಯಿಂದ ಕೇರಳದ ಕಾಸರಗೋಡಿನ ತನಕ ಮಲೆನಾಡ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಜುಟ್ಟು ಕಾಳಿಂಗ ಸರ್ಪದ ರೋಚಕ ಕಥೆಗಳಿದೆ ಏಕೆ ? ಆದರೆ ಜುಟ್ಟು ಕಾಳಿಂಗ ಅಸ್ತಿತ್ವದಲ್ಲಿ ಮಾತ್ರ ಇಲ್ಲ !?
#ಜುಟ್ಟು_ಕಾಳಿಂಗ_ನೋಡಿದೀರಾ?! #ಮಲೆನಾಡ_ಪಶ್ಚಿಮಘಟ್ಟದ_ಜನರಲ್ಲಿರುವ_ನಂಬಿಕೆಗಳು. #ಆನಂದಪುರಂನ_ಪಾಳುಬಿದ್ದ_ಕೆಳದಿ_ಅರಸರ_ಕೋಟೆಯಲ್ಲಿ_ಜುಟ್ಟು_ಕಾಳಿಂಗದ_ಕಥೆ. #ಅರಸರ_ಕಾಲದ_ನಿದಿ_ಕಾಯುತ್ತಿದೆ_ಅಂತೆ. #ಈರೀತಿಯ_ಜುಟ್ಟು_ಕಾಳಿಂಗದ_ಕಥೆ_ಮಹಾರಾಷ್ಟ್ರದ_ರತ್ನಗಿರಿಯಿಂದ_ಕೇರಳದ_ಕಾಸರಗೋಡಿನ_ತನಕ_ಇದೆ. ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ...