Skip to main content

Posts

Showing posts from August, 2020

ತೊಡದೇವು ಎಂಬ ಸರಳ ರೆಸಿಪಿಯ ಅತ್ಯುತ್ತಮ ಸಿಹಿ ಪದಾಥ೯

       ತೊಡದೇವು_ಸವಿ_ನೋಡಿದ್ದೀರಾ     ಇದು ಮಲೆನಾಡಿನ ಅಕ್ಕಿ ಕಬ್ಬಿನ ಹಾಲು ಅಥವ ಬೆಲ್ಲದಲ್ಲಿ ಮಾಡಿದ ತೆಳುವಾಗಿ ಕಡೆದ ನೀರು ಹಿಟ್ಟು ಕಟ್ಟಿಗೆ ಒಲೆಯ ಮೇಲೆ ಮಗುಚಿರುವ ಮಡಕೆ ಮೇಲೆ ಎರೆಯುವ ಮತ್ತು ಹದವಾಗಿ ನೀರು ಸಂಪೂಣ೯ ಆರಿದ ನಂತರ ತೆಗೆದು ಆಕಾರಕ್ಕೆ ತಕ್ಕಂತೆ ಮಡಚಿ ಇಟ್ಟರೆ ಆಯಿತು ಇದೇ #ತೊಡದೇವು ಹಪ್ಪಳಕ್ಕಿಂತ ತೆಳು ಗರಿಗರಿಯಾದ ಸಿಹಿ ತಿಂಡಿ.    ಇದರ ಜೊತೆ ಬಾದಾಮಿ ಹಾಲು, ಸಕ್ಕರೆ ಪಾಕ, ಅಥವ ಹಾಲು ತುಪ್ಪದಲ್ಲಿ ವಿವಿದ ರೀತಿ ಸ್ವಾದದಲ್ಲಿ ತಿನ್ನ ಬಹುದೆಂದು ನನಗಾಗಿ ದೂರದ ಸಿಸಿ೯ಯಿಂದ ತಯಾರಿಸಿ ಕಳಿಸಿ ಕೊಟ್ಟ ಸಾಗರದ ಜೇನು ತಜ್ಞರಾದ ನಾಗೇಂದ್ರ ಸಾಗರ್ ತಿಳಿಸಿದ್ದಾರೆ.   ಇದನ್ನು ತಯಾರಿಸುವವರು ಸರಿಯಾದ ರೀತಿ ತಯಾರಿಸಿದರೆ ಹೆಚ್ಚು ದಿನ ಬಾಳಕೆ ಬರುತ್ತೆ ಅಂದಿದ್ದಾರೆ ಅದು ಸತ್ಯ ಕೂಡ ಯಾಕೆಂದರೆ ಕೆಲ ವರ್ಷದ ಹಿಂದೆ ನಾನು ಖರೀದಿಸಿದ್ದು ಕಮಟು ವಾಸನೆ ಬೀರುತ್ತಿದ್ದರಿಂದ ಬಳಸಿರಲಿಲ್ಲ ಮತ್ತು ತೊಡದೇವು ಅಂದರೆ ವಾಕರಿಕೆ ಉ೦ಟಾಗಿತ್ತು.   ಈ ತೊಡದೇವು ಬೆಂಗಳೂರಿನ ತನಕ ಬಳಸಿದವರಿಂದೆಲ್ಲಾ ಅದ್ಬುತ ಎಂಬ ಉದ್ಘಾರ!    ಇದನ್ನು ಮಲೆನಾಡಿನ ಯಾವ ಪ್ರದೇಶದಲ್ಲಿ ಹೆಚ್ಚು ಬಳಸುತ್ತಾರೆ ಗೊತ್ತಿಲ್ಲ ನಮ್ಮ ಭಾಗದಲ್ಲಿ ಇದನ್ನು ತಯಾರಿಸುವವರೆ ಇಲ್ಲ.

ಆನಂದಪುರ ಎಂಬ ಹೆಸರು ಬರಲು ಕಾರಣಳಾದ ಚಂಪಕಾರಾಣಿಯ ದುರಂತ ಪ್ರೇಮ ಕಥೆ ಕಾದಂಬರಿ ಆಗಿ ಬಿಡುಗಡೆ ಆಗಿದೆ.

#ಬಹುದಿನದ_ನಿರೀಕ್ಷೆ_ಇವತ್ತು_ಈಡೇರಿತು     ನಮ್ಮ ಊರು "ಆನಂದಪುರ" ಎಂಬ ಹೆಸರು ಬರಲು ಕಾರಣಳಾದವಳು #ಚಂಪಕಾ ಇವಳ ಮತ್ತು ಕೆಳದಿ ರಾಜಾ ವೆಂಕಟಪ್ಪ ನಾಯಕರ ಪ್ರೇಮ ಕಥೆ ಪ್ರಾರಂಭ ಆಗುವುದು ಸು೦ದರಿ ಚಂಪಕಳು ರಾಜರಿಗಾಗಿ ಬಿಡಿಸುತ್ತಿದ್ದ ಸುಂದರ ರಂಗೋಲಿ .   ಚಂಪಕಳಿಗಾಗಿ #ಯಡೇಹಳ್ಳಿ ಕೋಟೆ ಎಂಬ ಹೆಸರು ಬದಲಿಸಿ #ಆನಂದಪುರ ಎಂಬ ಹೆಸರು ಇಟ್ಟವರು ರಾಜ ವೆಂಕಟಪ್ಪ ನಾಯಕರು.   ದೀಘ೯ ಕಾಲ ಕೆಳದಿ ರಾಜ್ಯಬಾರ ಮಾಡಿದ ಮತ್ತು ರಾಜ್ಯ ವಿಸ್ತಾರ ಮಾಡಿದ ವೆಂಕಟಪ್ಪ ನಾಯಕರು ಈಗಿನ ಸಾಗರ ಪಟ್ಟಣದ ನಿರ್ಮಾತರು.    ಜಾತಿ ಮತ್ತು ಆಹಾರ ಪದ್ಧತಿಯ ಕಾರಣದಿಂದ ತಿರಸ್ಕೃತಳಾಗುವ ಚಂಪಕಾ ಹಾಲಿನಲ್ಲಿ ವಜ್ರ ಸೇರಿಸಿ ಹಾಲಾಹಲ ಸೇವಿಸುವ ದುರ೦ತ ಪ್ರೇಮ ಕಥೆ.   ಚಂಪಕಳ ಸ್ಮಾರಕವಾಗಿ ಆನಂದಪುರದಿಂದ ಶಿಕಾರಿಪುರ ಮಾಗ೯ದ ಮಲಂದೂರಿನಲ್ಲಿ ನಿರ್ಮಿಸಿರುವ ಸುಂದರ #ಚಂಪಕ_ಸರಸ್ಸು.   ಇವೆಲ್ಲ ಇಟಲಿ ಪ್ರವಾಸಿ ಡೊಲ್ಲಾ ವಲ್ಲೆ ಮತ್ತು ಗೆಜೆಟಿಯರ್ ನಲ್ಲಿ ಲಭ್ಯ.   ಇದು ಆನಂದಪುರದ ಜನಪದ ಕಥೆ, ನಿಜ ಕಥೆ.   ಇದನ್ನೆಲ್ಲ ಆದರಿಸಿ ಹತ್ತು ವರ್ಷದ ಹಿಂದೆ ನಾನು ಬರೆದ ಕಾಲ್ಪನಿಕ ದುರಂತ ಪ್ರೇಮ ಕಥೆ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ" #ಬೆಸ್ತರ_ರಾಣಿ_ಚಂಪಕಾ ಕಾದಂಬರಿ ಆಗಿ ಇವತ್ತು ಗೆಳೆಯರು ಆತ್ಮೀಯರೂ ಆದ ಹಾಯ್ ...

ಬಹು ಉಪಯೋಗಿ ವಾಟೆ ಹುಳಿ

#ವಾಟೆ_ಹುಳಿ_ಕಾಳುಮೆಣಸಿನ_ಕಷಾಯ      ಅದ೯ ಲೀಟರ್ ನೀರು ಕುದಿಯಲು ಇಟ್ಟು ಒಂದರಿಂದ ಒಂದೂವರೆ ಚಮಚ ಕಾಳು ಮೆಣಸಿನ ಪುಡಿ, ವಾಟೆ ಹುಳಿ ಒಂದರಿಂದ ಒಂದೂವರೆ ಚಮಚ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಒಂದು ನಿಮಿಷ ಕುದಿಸಿ ನಂತರ ಸೋಸಿ ಬಿಸಿ ಬಿಸಿ ಕುಡಿಯಬೇಕು.  ಹುಳಿ ಮತ್ತು ಖಾರಾ ನಿಮ್ಮ ಅಗತ್ಯಕ್ಕೆ ರುಚಿಗೆ ತಕ್ಕ೦ತೆ ಹೆಚ್ಚು ಕಡಿಮೆ ಮಾಡಿಕೊಳ್ಳಿ.  ಬಳಸಿದ ನಂತರ ನಿಮ್ಮ ಅಭಿಪ್ರಾಯ ತಿಳಿಸಿ.   ಇವತ್ತು #ವಿನಾಯಕಭಟ್ಟರು ವಾಟೆ ಹುಳಿ ಮತ್ತು ಅದರ ಬಳಕೆ ಬಗ್ಗೆ ಬರೆದ ಪೋಸ್ಟ್ ನೋಡಿದಾಗ ಕೆಲ ದಿನದ ಹಿಂದೆ #ಸ್ನೇಕಪ್ರಬಾಕರ ಕಳಿಸಿದ್ದ ವಾಟೆ ಹುಳಿ ಸಂಸ್ಕರಣ ಮಾಡುವ ಅವರ ಮನೆ ಅಂಗಳದ ಚಿತ್ರ ನೆನಪಾಯಿತು ಮತ್ತು ಮಳೆಗಾಲದಲ್ಲಿ ಚಳಿಗಾಲದಲ್ಲಿ ನನಗಿಷ್ಟವಾದ ವಾಟೆಹುಳಿ ಮತ್ತು ಕಾಳು ಮೆಣಸಿನ ಕಷಾಯದ ರೆಸಿಪಿ ನಿಮಗಾಗಿ.

ಪಶ್ಚಿಮ ಘಟ್ಟದ ಸ್ವಾದಿಷ್ಟ ಕಳಲೆ ಉಪ್ಪಿನ ಕಾಯಿ ತಯಾರಿಸುವ ಸುಲಭ ವಿದಾನ

ಕಳಲೆ ಅಂದರೆ ಟೆಂಡರ್ ಬೊಂಬೂ ಶೂಟ್ಸ್ ನ ಉಪ್ಪಿನ ಕಾಯಿ ಸ್ವಾದವೇ ಬೇರೆ.   ಕಳಲೆ ಸುತ್ತಲ ಇರುವ ಕವಚ ತೆಗೆದು ಜಾನುವಾರು ತಿನ್ನದಂತೆ ಗೊಬ್ಬರದ ಗುಂಡಿಯಲ್ಲಿ ಹುಗಿಯಬೇಕು ಏಕೆಂದರೆ ಕತ್ತಿ ತಾಗಿಸಿದ ಕಳಲೆ ತಿಂದರೆ ಜಾನುವಾರು ಸಾಯುವುದು ಸತ್ಯ.   ಒಳಗಿನ ಮೃದು ಕಳಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ 3 ದಿನ ನೀರಲ್ಲಿ ನೆನೆಸಿ ಇಡಿ, ಪ್ರತಿ ದಿನ ನೀರು ಬದಲಿಸಿ.   ನಂತರ ಇದನ್ನು ಬೇಯಿಸಿ ನೀರು ಬಸಿದು ಬಟ್ಟೆಯ ಮೇಲೆ ಹರಡಿ, ಒಣಗಿದ ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯಲ್ಲಿ ಹುರಿಯಬೇಕು ಮತ್ತು ನೀರಿನ ಅಂಶ ಇಲ್ಲ ಎಂಬುದು ಖಾತ್ರಿ ಮಾಡಿಕೊಳ್ಳಬೇಕು.    ಇದಕ್ಕೆ ಉಪ್ಪಿನ ಕಾಯಿ ಮಸಾಲ ಹಾಕಿ ಒಗ್ಗರಣೆ ನೀಡಿದರೆ ಪಶ್ಚಿಮ ಘಟ್ಟದ ತಾಜಾ ಕಳಲೆ ಉಪ್ಪಿನ ಕಾಯಿ ಸಿದ್ದ.   ಯಾವುದೇ ಪ್ರಿಸವೇ೯ಟಿವ್ ಬಳಸುವುದಿಲ್ಲ ಆದ್ದರಿಂದ ಒ0ದು ವಾರದಲ್ಲಿ ತಿಂದು ಖಾಲಿ ಮಾಡಬೇಕು ಇದರ ಶೆಲ್ಪ್ ಲೈಪ್ ಕಡಿಮೆ

ಟ್ಯಾಪಿಯೋಕ ಎಂಬ ಹೆಸರು ಪೋಚು೯ಗೀಸರಿಂದ ಪಡೆದ, ಮಲೆಯಾಳದಲ್ಲಿ ಕಪ್ಪಾ ಅಂತ ಮನೆ ಮಾತಾಗಿರುವ ಈ ಮರ ಗೆಣಸು 1880 - 85 ರ ಕೇರಳದ ಬೀಕರ ಬರಗಾಲದಲ್ಲಿ ಟ್ರಯೊ೦ಕರಮ್ ನ ರಾಜನ ಕಿರಿಯ ಸಹೋದರ ವಿಶಾ ರಾಮ್ ತಿರುಮಲ ರಾಮ ವಮಾ೯ರಿಂದ ಪರಿಚಯಸಲ್ಪಟ್ಟದ್ದಾಗಿದೆ

#ಕೇರಳದ_ಮರಗೆಣಿಸಿನ_ಇತಿಹಾಸ    ಮೊನ್ನೆ ನನ್ನ ಮಲೆಯಾಳಿ ಮಿತ್ರ ಕುಟ್ಟಿಚನ್ ತಾನು ಬೆಳೆದ ಪೊಪ್ಪಾಯಿ, ಅನಾನಸ್, ಸುವಣ೯ಗೆಡ್ಡೆ, ಪೇರಲೆ ಮತ್ತು ಕೆಲ ತುಂಡು ಮರಗೆಣಸು ತಂದು ಕೊಟ್ಟ ಮತ್ತು ಬೇಯಿಸಿ ತಿನ್ನುವ ನೆಂದ್ರ ಬಾಳೆ ಹಣ್ಣು ಇನ್ನು ಬಂದಿಲ್ಲ ಅ೦ತಂದ.  ಆನಂದಪುರದ ಮುಂಬಾಳಿನ ಗೋಕುಲ್ ಪಾರಂ ನ ಹಿಂಬಾಗದಲ್ಲಿ 3 ಎಕರೆ ಬಗರ್ ಹುಕುಂ ಜಾಗದಲ್ಲಿ ರಬ್ಬರ್ ಜೊತೆ ಇವೆಲ್ಲ ಬೆಳೆಯುತ್ತಾರೆ ಮತ್ತು ಸಾಗರ ಶಿವಮೊಗ್ಗದ ಸಂತೆಯಲ್ಲಿ ತಪ್ಪದೇ ಮರಗೆಣಸು ಜೊತೆ, ನೇಂದ್ರ ಬಾಳೆ ಹಣ್ಣು, ಸುವರ್ಣ ಗೆಡ್ಡೆ ಮತ್ತಿತರ ತರಕಾರಿ ಮಾರುತ್ತಾರೆ ಇದಕಾಗಿ ಒಂದು ಲಗೇಜ್ ಕ್ಯಾರಿಯರ್ ಇದೆ ಇವರ ಹತ್ತಿರ ಇದೆ,ತುಂಬಾ ಶ್ರಮಜೀವಿ.   ಕಪ್ಪಾ ಅಂತ ಕೇರಳದವರು ಕರೆಯುವ ಕನ್ನಡಿಗರ ಬಾಯಲ್ಲಿ ಮರಗೆಣಸು ಆಗಿರುವ ಇದರ ಮೂಲ ಬ್ರಿಜಿಲ್, ಅತಿ ಕಡಿಮೆ ಮಳೆ ಆಶ್ರಿತ ಬೆಳೆ, ಹೆಚ್ಚು ಪೈಬ್ರಾಯಿಡ್ ಹೊಂದಿದೆ.    ಕೇರಳಿಗರಿಗೆ ನಿತ್ಯ ಆಹಾರವಾಗಿದೆ, ಉಳಿದ ಪ್ರದೇಶದಲ್ಲಿ ಸಬ್ಬಕ್ಕಿ ರೂಪದಲ್ಲಿ ಮತ್ತು ಗಾಮೆ೯೦ಟ್ ಗಳಲ್ಲಿ ಬಟ್ಟೆಗೆ ಹಾಕುವ ಗ೦ಜಿಯಾಗಿ ಹೆಚ್ಚು ಬಳಕೆ.   ದೂರದ ಬ್ರಿಜಿಲ್ ನಿಂದ ಇದು ಕೇರಳಕ್ಕೆ ಬಂದ ಒಂದು ಇತಿಹಾಸವಿದೆ, ಇದು ಬ್ರಿಜಿಲ್ ನ ಮೂಲ ನಿವಾಸಿಗಳ ಆಹಾರ ಅವರು ಅವರ ಬಾಷೆಯಲ್ಲಿ ಇದನ್ನು ಟೂಪಿ ಅಂತ ಕರೆಯುವುದರಿಂದ ಈ ಪ್ರದೇಶ ಮೊದಲ ಬಾರಿಗೆ ತಲುಪಿದ ಪೋಚು೯ಗಿಸರಿಂದ ...

ಅರಿಶಿಣದ ಎಲೆಯಲ್ಲಿ ಮಾಡುವ ಸಿಹಿ ಕಡುಬಿನ ರುಚಿ ಮತ್ತು ಅದರ ಘಮ ತಿಂದವರಿಗೆ ಗೊತ್ತು.

#ಅರಿಶಿಣದ_ಎಲೆಯ_ಸಿಹಿಕಡಬು #ಇವತ್ತು_ನಮ್ಮ_ಮನೆಯಲ್ಲಿ     ಶ್ರಾವಣ ಶುರುವಾಗಲು ಅರಿಶಿಣದ ಎಲೆ ಒಂದು ಹದದಲ್ಲಿ ಬೆಳೆಯಲು ಶುರುವಾಗುತ್ತದೆ ಆಗಲೇ ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಅರಿಶಿಣದ ಎಲೆ ಕಡುಬಿನ ಘಮ ಘಮ ಎಲ್ಲಾ ಮನೆಗಳಲ್ಲಿ.   ಕಡುಬಿನ ಹದದ ಅಕ್ಕಿ ಅರಿಶಿಣದ ಎಲೆಯಲ್ಲಿ ತಟ್ಟಿ ಮದ್ಯದಲ್ಲಿ ತೆಂಗಿನ ತುರಿ ಮತ್ತು ಮಲೆನಾಡಿನ ನೀರು ಬೆಲ್ಲದ ಮಿಶ್ರಣದ ಹೂರಣ ತುಂಬಿ ಎಲೆ ಮಡಚಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಿದರೆ ಆಯಿತು ರುಚಿ ರುಚಿಯಾದ ಅರಿಶಿಣದ ಎಲೆಯ ಘಮ ಘಮಿಸುವ ಅರಿಶಿಣದ ಎಲೆಯ ಕಡಬು ತಯಾರು ತುಪ್ಪದ ಜೊತೆ ಬಡಿಸಿದರೆ ಆಯಿತು.   ಸಿಹಿ ಬೇಡದಿದ್ದರೆ ಸಾದಾ ಕಡಬೂ ಮಾಡಬಹುದು.

ನಾನು ಬರೆದ ಮೊದಲ ಕಾದಂಬರಿ ಪುಸ್ತಕವಾಗಿ ಇವತ್ತು ಕೈ ಸೇರಿದೆ

ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ            ಬೆಸ್ತರರಾಣಿ ಚಂಪಕ (ಕೆಳದಿಯ ಖ್ಯಾತ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕಾ ರಾಣಿ ದುರಂತ ಪ್ರೇಮ ಕಥೆ )  ಇದು ಇತಿಹಾಸವನ್ನಾಧರಿಸಿದ ಕಾಲ್ಪನಿಕ          ಕಾದ೦ಬರಿ   ಸುಮಾರು 10 ವರ್ಷದ ಹಿಂದೆ ಮುದ್ರಿಸ ಬೇಕಾದ ಈ ಕಾದಂಬರಿ ಇವತ್ತು ಮಿತ್ರರಾದ ಹಾಯ್ ಬೆಂಗಳೂರು ವರದಿಗಾರ ಮತ್ತು ಶಿವಮೊಗ್ಗದ ಜನ ಹೋರಾಟ ಪತ್ರಿಕೆ ಸಂಪಾದಕರಾದ ಶೃಂಗೇಶ್ ರ ಸಹಕಾರದಿಂದ ಪ್ರಿಂಟ್ ಆಗಿ ರಕ್ಷಾ ಬಂದನದ ದಿನ ನನ್ನ ಕೈ ತಲುಪಿದೆ.   ನನ್ನ ಹಲವು ಅವತಾರ ನೋಡಿರುವ ಅವರದ್ದೇ ಸುಂದರ ಮುನ್ನುಡಿ ಇದೆ.   ಈ ಪುಸ್ತಕ ಆನಂದಪುರದ #ಮುರುಘರಾಜೇಂದ್ರ_ಸ್ವಾಮೀಜಿಗಳಿಗೆ, #ಆನಂದಪುರದ_ಕನ್ನಡ_ಸಂಘಕ್ಕೆ, #ಆನಂದಪುರದ_ಇತಿಹಾಸ_ಉಳಿಸಿ_ಅಭಿಯಾನ_ಸಮಿತಿಗೆ ಮತ್ತು #ಆನಂದಪುರದ_ಈಜು_ಮಿತ್ರರ_ಬಳಗಕ್ಕೆ_ಅಪಿ೯ಸಿದ್ದೇನೆ.   ಇದು ಆನಂದಪುರದ್ದೇ ಇತಿಹಾಸ ಮತ್ತು ಆನಂದಪುರದಲ್ಲೇ ಇರುವ ಚಂಪಕ ರಾಣಿ ಸ್ಮಾರಕದ ಕಥೆ ಆಗಿದೆ.   ಕೆಳದಿಯಿಂದ ಕೇರಳದ ಬೇಕಲ್ ವರೆಗೆ ಕೆಳದಿ ರಾಜ್ಯದ ಆಡಳಿತ, ಅವರ ಅವಧಿಯಲ್ಲಿ ನಿಮಿ೯ಸಿದ ಕೋಟೆ ಕೊತ್ತಳ, ದೇವಾಲಯ ಆ ಕಾಲದ ರೀತಿ ನೀತಿ ರಿವಾಜು, ಕೋಟಿ ಕಟ್ಟಿ ಕೋಟೆ ನಿವ೯ಹಿಸುವ ಕೋಟೆಗಾರ ಸಮಾಜ, ಕೊಡಚಾದ್ರಿಯ ತುದಿಯ ಮೂಲ ಮುಕಾಂಬಿಕೆಯ ಅಚ೯ಕರಾದ ಬಳೆಗಾರರು, ಪ್ರತಿ 12 ...