#ಮಹಾರಾಷ್ಟ್ರದಲ್ಲಿ_ಬೀಮನಅಮವಾಸ್ಯೆ_ಗಟಾರ್_ಆಮವಾಸ್ಯೆ_ಏಕೆ? ನಾಳೆ ಸೋಮವಾರ (20-ಜುಲೈ-2020)ಆಷಾಡದ ಕೊನೆ ದಿನ ಅಮವಾಸ್ಯೆ. ಈ ಅಮವಾಸ್ಯೆಗೆ ಭೀಮನ ಅಮವಾಸ್ಯೆ ಅಂತ ಹೆಸರಿದೆ, ನಾಡಿದ್ದು ಮಂಗಳವಾರದಿಂದ ಶ್ರಾವಣ ಮಾಸ ಪ್ರಾರಂಭ. ಶಿವನ ಆರಾದನೆಗಾಗಿ ಇಡೀ ಒಂದು ತಿಂಗಳು ಮಹಾರಾಷ್ಟ್ರಿಯನ್ನರು ಸಸ್ಯಹಾರ ಮಾತ್ರ ಸೇವಿಸುವುದು, ದಿನಕ್ಕೆ ಒ0ದೇ ಊಟ, ದೇವಾಲಯ ದಶ೯ನ ಪೂಜೆ ಹೀಗೆ ಸಾತ್ವಿಕ ಆಹಾರ ಆಚರಣೆ ಕಡ್ಡಾಯ. ಮಾಂಸ ಹಾರ ಮತ್ತು ಮಧ್ಯಪಾನ ಕೂಡ ನಿಶೇದವಿದೆ ಹಾಗಾಗಿ ಶ್ರಾವಣ ಪ್ರಾರಂಭದ ಹಿಂದಿನ ದಿನ ಮಾಂಸಹಾರಿಗಳಿಗೆ ಮತ್ತು ಮಧ್ಯಪಾನಿಗಳಿಗೆ ಫುಲ್ ಪ್ರೀಡಂ ಯಾಕೆಂದರೆ ಒಂದು ತಿಂಗಳು ಗೌರಿ ಗಣೇಶನ ಹಬ್ಬದ ತನಕ ಇವುಗಳನ್ನು ಮುಟ್ಟುವಂತಿಲ್ಲ. ಶ್ರಾವಣ ಪ್ರಾರಂಭದ ಹಿಂದಿನ ದಿನದ ಅಮವಾಸ್ಯೆ ಇಡೀ ಮಹಾರಾಷ್ಟ್ರದಲ್ಲಿ ತಡ ರಾತ್ರಿ ತನಕ ಮೋಜು ಮಸ್ತಿಯ ಕಾಲ ಆಗಿರುತ್ತದೆ ಹಾಗಾಗಿ ಹೆಚ್ಚು ಕುಡಿದು ತಿಂದು ಕೆಲವರು ಪ್ಲಾಟ್ ಆಗಿ ಗಟಾರದಲ್ಲಿ ಬೀಳುವುದರಿಂದ ಈ ಅಮವಾಸ್ಯೆಗೆ ಗಟಾರ್ ಅಮಾವಾಸ್ಯೆ ಅಥವ ಮರಾಠಿಗರ ಬಾಯಲ್ಲಿ ಗಟಾರಿ ಅಮಾವಾಸ್ಯೆ ಆಗಿದೆ. ಈ ವರ್ಷ ಮಹಾರಾಷ್ಟ್ರದಲ್ಲಿ ಕೊರಾನಾ ವಿಪರೀತ ಹಾವಳಿಯಿಂದ ಜನ ಹೋಟೆಲ್/ಬಾರ್ ತೆರೆಯದರಿಂದ ಮನೇನಲ್ಲೇ ಆಚಾರಿಸಬೇಕಾಗಿದೆ ಹಾಗಾಗಿ ಗಟಾರ್ ದಲ್ಲಿ ಬೀಳುವ ಸಂಭವ ಕಡಿಮೆ. ಇನ್ನೊಂದು ವಿಶೇಷ ಅಂದರೆ ಈ ವರ್ಷ ಗಟಾರ್ ಅಮಾವಸ್ಯೆ 20 ನೇ ತ...