Skip to main content

Posts

Showing posts from October, 2019

# ಸೋನಕ್ಕ ಶಾಂತವೇರಿ ಗೋಪಾಲಗೌಡರಿಗೆ ಶ್ರದ್ದಾ೦ಜಲಿಗಳು #

#ಶ್ರೀಮತಿ ಸೋನಕ್ಕ ಶಾಂತವೇರಿ ಗೋಪಾಲಗೌಡರಿಗೆ ಶೃದ್ದಾ0ಜಲಿಗಳು#  ಸಾಗರದ ಸಮೀಪದ ಕಾಗೋಡಿನಲ್ಲಿ ಪ್ರಾರಂಭವಾದ ಉಳುವವನೆ ಹೊಲದ ಒಡೆಯ ಉದ್ಘೋಷಣೆಯ ಗೇಣಿ ರೈತರ ಹೋರಾಟ ತಾತ್ವಿಕ ಅಂತ್ಯದೆಡೆಗೆ ಒಯ್ದವರು ತೀಥ೯ಹಳ್ಳಿ ಆರಗ ಸಮೀಪದ ಶಾ೦ತವೇರಿಯ ಗೋಪಾಲಗೌಡರು ಈ ಚಳವಳಿಯಲ್ಲಿ ಭಾಗವಹಿಸಿ ಬಂದನಕ್ಕೆ ಒಳಗಾದವರು ಅವತ್ತಿನ ಸಂಸದ್ ಸದಸ್ಯರಾದ ಡಾ.ರಾಮಮನೋಹರ್ ಲೋಹಿಯ ಸಮಾಜವಾದದ ಚಿಂತನೆಯ ಅವರು ಅ೦ದಿನ ಪ್ರದಾನ ಮಂತ್ರಿ ನೆಹರೂರವರ ಚಿಂತನೆಯ ಕಟ್ಟಾ ವಿರೋದಿಗಳು, ಗೋಪಾಲಗೌಡರು ಮತ್ತು ಲೋಹಿಯಾ ಕಾರಣದಿಂದ ಜೆ.ಪಿ., ಮದುಲಿಮೆ ಇನ್ನೂ ಮುಂತಾದ ದೇಶದ ಗಣ್ಯರು ಕಾಗೋಡು ಚಳವಳಿಗೆ ಬೆಂಬಲಿಸಿ ಸಾಗರಕ್ಕೆ ಬಂದಿದ್ದು ಒಂದು ಇತಿಹಾಸ ಮತ್ತು ದಾಖಲೆ, ಈ ಚಳವಳಿ ಪ್ರಾರಂಬಿಸಿದ ಕಾಗೋಡು ಚಳವಳಿಯ ನೇತಾರ ಹೆಚ್.ಗಣಪತಿಯಪ್ಪ ಸ್ಮರಣೀಯರು.   ಶಾಂತವೇರಿ ಗೋಪಾಲ ಗೌಡರ ಸಮಾಜವಾದಿ ಹೋರಾಟದ ಮೂಸೆಯಲ್ಲಿ ಬಂದವರು, ಬಾಗವಹಿಸಿದವರು ಮತ್ತು ಪ್ರಬಾವಕ್ಕೆ ಒಳಗಾದವರು ಅಸಂಖ್ಯ ಮುಖಂಡರು ಅವರಲ್ಲಿ ಬಂಗಾರಪ್ಪ, ಜೆ.ಹೆಚ್.ಪಟೇಲರು, ಕಾಗೋಡು ತಿಮ್ಮಪ್ಪ, ಕೊಣ0ದೂರು ಲಿಂಗಪ್ಪ, ಸ್ವಾಮಿ ರಾವ್, ಜಾಜ್೯ ಪನಾ೯Oಡಿಸ್, UR ಅನಂತಮೂತಿ೯, ಲಂಕೇಶ್, ತೇಜಸ್ವಿ, ಅಜೀಜ್ ಸೇಠ ಹೀಗೆ ದೊಡ್ಡ ಪಟ್ಟಿ ಆಗುತ್ತದೆ.   ಸ್ವಾತಂತ್ರ ನಂತರದ ಮೊದಲ ವಿದಾನ ಸಭಾ ಚುನಾವಣೆಯಲ್ಲಿ ಜಾತಿ ( ಒಕ್ಕಲಿಗರು) ಬೆಂಬಲ, ಪಕ್ಷದ ಬೆಂಬಲ ಮತ್ತು ಹಣ ಬೆಂಬಲ ಇಲ್ಲದೆ ಸ...

# ಹಿರಿಯ ಮಿತ್ರ ಗನ್ನಿ ಸಾಹೇಬರಿಗೆ ಹಜ್ ಯಾತ್ರೆ ಮಾಡಿಸುವ ಭಾಗ್ಯ ನನ್ನದಾಗಿತ್ತು #

ಹಿಂದೂ ದಮ೯ದವನು ಮುಸ್ಲಿ೦ ಗೆಳೆಯರಿಗೆ ಮೆಕ್ಕಾ ಯಾತ್ರೆ ಮಾಡಿಸಬಹುದೆ? ಮುಸ್ಲಿಂ ಗೆಳೆಯ ಈ ರೀತಿ ಮೆಕ್ಕಾ ಯಾತ್ರೆ ಮಾಡಿದರೆ ಹರಾಂ ಅಂತೆ ಅಂತ ಒಂದು ಸುದ್ದಿ ನಮ್ಮ ಊರಲ್ಲಿ ಪ್ರಾರಂಭವಾಗಿತ್ತು.     ಬಹುಶಃ ಇದು ಅಪರೂಪದ ಪ್ರಕರಣ ಆದ್ದರಿಂದ ಸ್ಥಳೀಯರಿಗೆ ಇದರ ಬಗ್ಗೆ ಸರಿಯಾದ ತಿಳುವಳಿಕೆ ಇರಲಿಲ್ಲ, ಜೊತೆಗೆ ಮತ್ಸರ, ಹೊಟ್ಟೆಕಿಚ್ಚು ಬೇರೆ ಸೇರಿದ್ದರಿಂದ ಮೆಕ್ಕಾ ಯಾತ್ರೆಗೆ ತಯಾರಿ ನಡೆಸಿದವರಿಗೆ ಒಂದು ರೀತಿ ಕಿರಿಕಿರಿ ಆದರೆ, ಮೆಕ್ಕಾ ಯಾತ್ರೆ ಮಾಡಿಸಲು ಹೊರಟ ಹಿಂದೂ ದಮಿ೯ಯನಿಗೆ ಹಿಂದಿನಿಂದ ಹೋಗಿ ಹೋಗಿ ಸಾಬರಿಗೆ ಮೆಕ್ಕಾ ಕಳಿಸಲು ಅವನಿಗೆ ಬುದ್ಧಿ ಇಲ್ಲ ಅಂತ ಕುಹಕ ಬೇರೆ.       ಇದು ನಾನೂ ಮತ್ತು ನನ್ನ ಹಿರಿಯ ಮಿತ್ರರಾದ ಗನ್ನಿ ಸಾಹೇಬರು 2007 ರಲ್ಲಿ ಅನುಭವಿಸಿದ ಪ್ರಕರಣವಿದು, ಇದಕ್ಕೆ ಒಂದು ಸಕಾರಣ ಇತ್ತು ಮತ್ತು ನಮ್ಮುರ ದೇವಸ್ಥಾನದಲ್ಲಿ ನಾನು ಗನ್ನಿಸಾಬರಿಗೆ ಒಂದು ಮಾತು ಕೊಟ್ಟಿದ್ದೆ.      2006ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಎಂಬ ನಮ್ಮ ಊರಲ್ಲಿ ಗಣಪತಿ ದೇವಸ್ಥಾನ ಕಟ್ಟಿಸಿ ಪ್ರತಿಷ್ಟಾಪನೆ ನಡೆಯಿತು, ಅಲ್ಲಿವರೆಗೆ ಇಡಿ ಹೋಬಳಿಯಲ್ಲಿ ಗಣಪತಿ ದೇವಸ್ಥಾನವೇ ಇರಲಿಲ್ಲ, ಯಡೇಹಳ್ಳಿಯಲ್ಲಿ ಎರಡು ಚಚ್೯ ಮತ್ತು ಒಂದು ಮಸೀದಿ ಇತ್ತು, ಗಣಪತಿ ದೇವಸ್ಥಾನದ ದೇವರ ವಿಗ್ರಹ ಕೋಲಾರ ಜಿಲ್ಲೆಯ ಶಿವಾರಪಟ್ಟಣದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತರಿಂದ ಕೃ...

# ಈಡೇರದ ಸಾಗರದ ಮೊದಲ ಸಮಾಜವಾದಿ ಪಕ್ಷದ ಶಾಸಕರಾದ ಶಾಂತವೇರಿ ಗೋಪಾಲಗೌಡರ ಪ್ರತಿಮೆ ನಿಮಾ೯ಣ #

#ಸಾಗರದ ಮೊದಲ ಶಾಸಕರು ಸಮಾಜವಾದಿ ಪಕ್ಷದ ಶಾಂತವೇರಿ ಗೋಪಾಲಗೌಡರು.#    ಸ್ವಾತಂತ್ರ್ಯ ನಂತರ ಸಾಗರ, ಸೊರಬ, ಹೊಸನಗರ ಮತ್ತು ತೀಥ೯ಳ್ಳಿ ತಾಲ್ಲೂಕ್ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಗೇಣಿ ರೈತರ ಶೋಷಣೆ ವಿರೋದಿಸಿ, ಗೇಣಿ ರೈತರ ಹಿತರಕ್ಷಣೆಗಾಗಿ ಪ್ರಾಂತ್ಯ ರೈತ ಸಂಘದ ಹೆಸರಲ್ಲಿ ಸಂಘಟನೆ ಪ್ರಾರ೦ಬಿಸಿದ್ದರು.   ಈ ಸಂಘಟನೆಗಳಲ್ಲಿ ಕಡಿದಾಳು ಮಂಜಪ್ಪನವರು, ಗಣಪತಿಯಪ್ಪನವರು, ಎಸ್.ಎಸ್.ಕುಮುಟ ಮತ್ತು ಜಿ.ಆರ್.ಜಿ.ನಗರ್  ಪ್ರಮುಖ ಪಾತ್ರ ವಹಿಸಿದರು, ಈ ಹೋರಾಟ ಸಂಘಷ೯ಕ್ಕೆ ಕಾರಣವಾಯಿತು, ಗೇಣಿ ರೈತರ ಸಂಘಟನೆ ಭೂಮಾಲಿಕರ ಅಸಹನೆಗೆ ಕಾರಣವಾಗಿ ಗೇಣಿ ರೈತರಿಗೆ ಭೂಮಿ ನಿರಾಕರಿಸಿದ್ದು ಮುಂದೆ ಉಳುವವನೆ ಹೊಲದ ಒಡೆಯ ಎ೦ಬ ಘೋಷಣಾ ವಾಕ್ಯದಲ್ಲಿ ಇಡೀ ದೇಶದ ಗಮನ ಸೆಳೆದ ಕಾಗೋಡು ರೈತ ಹೋರಾಟ ಆಯಿತು.   ಶಾಂತವೇರಿ ಗೋಪಾಲ ಗೌಡರು ಸಮಾಜವಾದಿ ಪಕ್ಷದ ರಾಮ ಮನೋಹರ ಲೋಹಿಯಾರನ್ನ ಕರೆ ತಂದದ್ದು, ಅವರು ಕಾಗೋಡಿನಲ್ಲಿನ ಅರಳಿ ಮರದ ಕೆಳಗೆ ಗೇಣಿ ರೈತ ಹೋರಾಟಗಾರರನ್ನ ಪ್ರೇರೇಪಿಸಿ ಬಾಷಣ ಮಾಡಿ ಸಾಗರ ರೈಲು ನಿಲ್ದಾಣದ ತಂಗುದಾಣದಲ್ಲಿ ತಂಗಿದಾಗ ಅವರನ್ನ ಬಂದಿಸಿದ್ದು ಇಡೀ ದೇಶದಲ್ಲಿ ದೊಡ್ಡ ಸುದ್ದಿ ಆಗಿತ್ತು.    ಕಾಗೋಡು ರೈತ ಹೋರಾಟದ ಪ್ರಭಾವದಿಂದ 1952 ರಲ್ಲಿ ನಡೆದ ಮೊದಲ ವಿಧಾನ ಸಭಾ ಚುನಾವಣೆಯಲ್ಲಿ ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಮೊದಲ ಶಾಸಕರಾಗಿ ಆಯ್ಕೆ ಆಗಿ ರಾಜ್ಯ ...

# ಅಹಮದ್ ಆಲೀ ಖಾನ್ ಕಾಂಗ್ರೇಸ್ ಪಾಟಿ೯ ಆದಾರ ಸ್ತ್oಭ #

# ನಮ್ಮ ಹೊಸ ಕಚೇರಿಗೆ ಆಗಮಿಸಿದ ನನ್ನ ನೆಚ್ಚಿನ ನಾಯಕರಾದ ಆಹಮದ್ ಆಲೀ ಖಾನ್ ಸಾಹೇಬರು#  ಮೊನ್ನೆ 28 ಅಕ್ಟೋಬರ್ ರಂದು ಸಂಜೆ ಖಾನ್ ಸಾಹೇಬರು ಅವರ ಮಗ ಮತ್ತು ನನ್ನ ಕ್ಲಾಸ್ ಮೇಟ್ ಮೋಹಿಸಿನ್ ಆಲೀ ಖಾನ್ ಮತ್ತು ಅವರ ಮೊಮ್ಮಗ ಬಂದಿದ್ದರು.    ಸಾಗರದ ಆಹಮದ್ ಆಲೀ ಖಾನ್ ಸಾಹೇಬರ ಜೀವನದ ಬಗ್ಗೆ ಬರೆದರೆ ಒಂದು ಸ್ವಾರಸ್ಯಕರವಾದ ಗ್ರ೦ಥವೇ ಆದೀತು, 1978-79ರಲ್ಲಿ ಸಾಗರದ ನಿಮ೯ಲ ಹೈಸ್ಕೂಲ್ ಎದರು ಜನತಾ ಪಕ್ಷದ ಸಾಗರದ ಮಾಜಿ ಶಾಸಕರಾದ ಕಾಗೋಡು ತಿಮ್ಮಪ್ಪ ಜನತಾ ಪಕ್ಷ ತೊರೆದು ಕಾ೦ಗ್ರೇಸ್ ಸೇರುವ ಸಭೆ ಇದೆ ಅಂತ ಸಾವ೯ಜನಿಕ ಪ್ರಕಟನೆ ಕೇಳಿ ಮುನ್ಸಿಪಲ್ ಹೈಸ್ಕೂಲ್ ನ 8ನೇ ತರಗತಿಗೆ ಚಕ್ಕರ್ ಹೊಡೆದು ಈ ಸಭೆ ನೋಡಲು ಹೋಗಿದ್ದೆ, ಅಲ್ಲಿ ಕಾಗೋಡು ಜನತಾ ಪಕ್ಷದವರು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಅಂತ ಭಾಷಣ ಮಾಡಿದ್ದು ಮತ್ತು ಖಾನ್ ಸಾಹೇಬರು ಅವರನ್ನ ಕಾಂಗ್ರೇಸ್ ಗೆ ಸೇರಿಸಿಕೊಂಡ ಕ್ಷಣ ಜನರ ಚಪ್ಪಾಳೆ ಅಭೂತ ಪೂವ೯ ಬೆಂಬಲದ ಕ್ಷಣ ಅವತ್ತು 15 ವಷ೯ ಪ್ರಾಯದ ನನ್ನ ಮೆದುಳಲ್ಲಿ ಅಚ್ಚಳಿಯದೆ ಉಳಿದಿದೆ.   ಆಗ ದೇಶದ ಪ್ರದಾನಿ ಇಂದಿರಾ ಗಾಂಧಿ ನನ್ನ ಮೂರನೆ ಮಗ ಎನ್ನುತ್ತಿದ್ದ ಮಡಿಕೆರೆಯ ಎಪ್.ಎಂ.ಖಾನ್ ಮತ್ತು ಸಾಗರದ  ಆಹಮದಾಲಿ ಖಾನ್ ಖಾಸಾ ಖಾಸಾ, ಗುಂಡುರಾವ್ ರನ್ನ ಮುಖ್ಯಮಂತ್ರಿ ಮಾಡಿದ್ದರಿಂದ ಸೊರಬದ ಬಂಗಾರಪ್ಪ ದೂರ ಆಗಿದ್ದರು ಆಗ ಸಾಗರದ ಶಾಸಕರು ಕಾ೦ಗ್ರೇಸ್ ನ ಎಲ್.ಟಿ. ತಿಮ್ಮಪ್ಪ ಹೆಗ್ಗಡೆ ಚುನಾವಣೆಯಲ್ಲಿ ...

# ಸೂಳೆಕೆರೆ ಇತಿಹಾಸ ಅಂತರ್ ಜಾತಿ ಪ್ರೇಮ ವಿವಾಹದ ದುರಂತದ ಕಥೆ #

# ಸೂಳೆಕೆರೆ (ಶಾಂತಿ ಸಾಗರ) ತುಂಬಿದೆ#  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಈ ಬಾರಿ ಅದೂ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಬಂದಿರುವ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ, ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಮೊನ್ನೆ ಶುಕ್ರವಾರ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ ಹೆಸರು ಬದಲಿಸಿ ಶಾಂತವ್ವಳ ಸ್ಮಾರಕವಾಗಿ ಶಾಂತಿ ಸಾಗರ ಎಂದೂ ಕರೆಯುತ್ತಾರೆ.   ಏಷ್ಯಾದಲ್ಲಿನ ಎರಡನೇ ಅತಿ ದೊಡ್ಡ...

ಹಂದಿಗನೂರು ನಾಗರಾಜ್ ಸಾಹಸ

# ಸಾಹಸದಿಂದ ನೆರೆಯಲ್ಲಿ ಇಬ್ಬರ ಜೀವ ಉಳಿಸಿದ ಇವರಿಗೆ ಯಾವ ಪ್ರಶಸ್ತಿ!?# ಮೊನ್ನೆ ದಿಡೀರ್ ಮಳೆಯಿ೦ದ ಸಾಗರ ತಾಲ್ಲೂಕನ ಆನಂದಪುರಂ ಸಮೀಪದ ಕರಿನಳ್ಳದಲ್ಲಿ ನೆರೆ ಬಂದಾಗ ಅದರಲ್ಲಿ ಸಿಕ್ಕಿಬಿದ್ದ ತಮ್ಮ ಎತ್ತನೊಂದು ಬಚಾವ್ ಮಾಡಲು ಪ್ರಯತ್ನಿಸುತ್ತಿದ್ದ ರೈತ ಮಹಿಳೆ ಮತ್ತು ಅವರ ಪುತ್ರ ಬಾರಿ ಮಳೆಯ ಪ್ರವಾಹದಲ್ಲಿ ಸಿಕ್ಕಿ ಬಿದ್ದಿದ್ದರು, ಇದನ್ನ ಗಮನಿಸಿದವರು ಇವರ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಹಂದಿಗನೂರು ನಾಗರಾಜ್ ಗೆ ಪೋನ್ ನಲ್ಲಿ ತಿಳಿಸಿದ್ದಾರೆ.   ತಕ್ಷಣ ತಮ್ಮ ಮೋಟಾರ್ ಬೈಕ್ ನಲ್ಲಿ ಹಗ್ಗದೊ೦ದಿಗೆ  ಹೊಸೂರಿನಲ್ಲಿ ಕ್ಯಾ೦ಟಿನ್ ನಡೆಸುವ ಅರುಣ್ ಶೆಟ್ಟಿ ಮತ್ತು ಹೊಳೆನ ಕೊಪ್ಪದ ಈಶ್ವರಪ್ಪನ ಕರೆದುಕೊಂಡು ಹೊಳೆಯ ಇನ್ನೊಂದು ಭಾಗ ತಲುಪಿ ಇಬ್ಬರನ್ನ ರಕ್ಷಿಸಿದ್ದಾರೆ.   ಜನ ಸೇವೆಯಲ್ಲಿ ಯಾವತ್ತೂ ಹಿಂದೆ ಸರಿಯದ ನಾಗರಾಜ್ ಸಾಹಸಿ ಕೂಡ ಮೊನ್ನೆಯ ಇವರ ದೈಯ೯ ಮತ್ತು ಸಾಹಸದಿಂದ ಇಬ್ಬರ ಜೀವ ಉಳಿಯಿತು.  ಇವರಿಗೆ ಸಮಾಜ ಯಾವ ಪ್ರಶಸ್ತಿ ನೀಡಬಹುದು?

MY FAVOURITE HAIR DRESSER

# ಸಲೂನ್ ಕೃಷ್ಣ ನನ್ನ ಖಾಯಂ ಹೇರ್ ಡ್ರೆಸರ್ #   ಒಂದು ಕಾಲದಲ್ಲಿ ಈ ವೃತ್ತಿಯವರಲ್ಲಿ ಬಲು ಕಷ್ಟದ ಜೀವನ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೂ ಹೋಗಿ ಎಲ್ಲರ ಕಟಿಂಗ್ ಮಾಡಿ ಸುಗ್ಗಿ ಕಾಲದಲ್ಲಿ ಅವರು ನೀಡುವ ಭತ್ತ, ರಾಗಿ ಕಾಳು ಕಡಿ ಪಡೆಯುವ ವತ೯ನೆ ಹೆಸರಿನ ಪದ್ದತಿ ಇತ್ತು  ಅದು ಕೃಷ್ಣನ ಆಜ್ಜನ ಕಾಲಕ್ಕೆ ಮುಗಿಯಿತಾ ಬಂದಿತ್ತು, ನಂತರ ಇವರ ತಂದೆ ಮುನಿಯಣ್ಣ ಅದ೯ ವತ೯ನೆ ಅದ೯ ಸೆಲೂನಿನಲ್ಲಿ ದುಡಿಮೆ ಮಾಡಿದರು.   ಆಗೆಲ್ಲ ವೃತ್ತಿಯ ಬಗ್ಗೆ ಕೀಳರಿಮೆ ಬೆಳೆಸಿಕೊಂಡ ಇವರ ಕುಟುಂಬದಲ್ಲಿ ಅನೇಕರು ಬೇರೆ ವೃತ್ತಿ, ಸಕಾ೯ರಿ ಕೆಲಸಕ್ಕೆ ಸೇರಿದರು, ಬೇರೆ ರಾಜ್ಯದವರು ಬಂದು ಇಲ್ಲೆಲ್ಲ ಭರಪೂರ ದಂದೆ ಮಾಡಲು ಶುರು ಮಾಡಿದ್ದು, ಬ್ಯೂಟಿ ಪಾಲ೯ರ್ ಕಾನ್ಸೆಪ್ಟ್ ಗಳು ಪುನಃ ವಂಶಪಾರಿಖ ವೃತ್ತಿಯನ್ನ ಮುಂದುವರೆಸಲು ಇವರಿಗೆಲ್ಲ ಪ್ರೋತ್ಸಾಹ ನೀಡಿರಬಹುದು.   ಇವರ ಮಗ ಕಾಲೇಜು ಓದುತ್ತಾ ಬಿಡುವಿನಲ್ಲಿ ಸೆಲೂನ್ ಕೆಲಸ ಮಾಡುತ್ತಾನೆ.   ಇವರ ಅಜ್ಜ ದಿವಂಗತ ನಾರಾಯಣಪ್ಪ, ಇವರ ತಂದೆ ದಿ.ಮುನಿಯಣ್ಣ ಈಗ ಮಗ ಕೃಷ್ಣ ಆಗಾಗ ಕೃಷ್ಣ ಇಲ್ಲದಾಗ ಇವರ ಮಗ ನನ್ನ ಕೇಶ ಶೃ೦ಗಾರ ಮಾಡುತ್ತಾನೆ ಹಾಗಾಗಿ ಅವರ ನಾಲ್ಕು ತಲೆಮಾರಿನವರ ಹತ್ತಿರ ನಾನು ವ್ಯವಹರಿಸಿದ್ದೇನೆ.   ಕೃಷ್ಣನ ತಾಯಿಯ ತಂದೆ ನೆಲ್ಲಪ್ಪನವರು ದೂರದ ಕೋಲಾರದ ಆಂದ್ರ ಪ್ರದೇಶದ ಬಾಡ೯ರ್ ನಿಂದ ಬಂದು ನೆಲೆಸಿದವರು, ಬಹಳ ಸಾಹಸಿ ಮತ್ತು ದಯಾಮಯಿ ಅಂತೆ, ಹಾಗೆಯ ಅನ್ಯ...

CRICKET ICON OF SAGAR NAGENDRA PANDITH

# ಸಾಗರದ ಒಂದು ಕಾಲದ ಯುವ ಐಕಾನ್ ನಾಗೇ೦ದ್ರ ಪಂಡಿತರಿಂದ ಎರಡನೆ ಇನಿ೦ಗ್ಸ್  # ನಾಗೇ೦ದ್ರ ಪ೦ಡಿತ್ ಕ್ರಿಕೇಟ್ ಆಕಾಡಮಿ                   * ಸಾಗರ*   ಒಂದು ಕಾಲದಲ್ಲಿ ಅಂದರೆ 1975ರಿಂದ 1980ರಲ್ಲಿ ಸಾಗರದಲ್ಲಿ ಲೆದರ್ ಬಾಲ್ ಕ್ರಿಕೆಟ್ ಹವಾ ಜೋರಾಗಿತ್ತು ಅದರಲ್ಲೂ ಎಲ್.ಬಿ. ಕಾಲೇಜಿನ ನಾಗೇ೦ದ್ರಪಂಡಿತರೆಂದರೆ ಸಾಗರದ ಗಾವಸ್ಕರ್, ಸಿನಿಮಾ ನಟರಂತೆ ಸುಂದರಾಂಗ, ಯುನಿವಸಿ೯ಟಿ ಕೋಟ್ ಪಡೆದ ಏಕೈಕ ಕ್ರಿಕೆಟ್ ಆಟಗಾರ.   ನಾವೆಲ್ಲ 1978 ರಲ್ಲಿ ರೈಲಿನಲ್ಲಿ ಸಾಗರದ ಮುನ್ಸಿಪಲ್ ಹೈಸ್ಕೂಲಿಗೆ 8ನೇ ತರಗತಿಗೆ ಹೋಗುತ್ತಿದ್ದರು ನಾಗೇ೦ದ್ರ ಪಂಡಿತರ ಬ್ಯಾಟಿಂಗ್ ನೋಡಲು ಎಲ್.ಬಿ. ಕಾಲೇಜಿನ ಕ್ರಿಡಾ೦ಗಣಕ್ಕೆ ನಡೆದು ಹೋಗುತ್ತಿದ್ದೆವು, ಅವರ ಬ್ಯಾಟಿಂಗ್ ಸ್ಟೈಲ್ ಹಾಗಿತ್ತು, ಬೌ೦ಡರಿ ಸಿಕ್ಸ್ ರ್ ಗಳ ಸುರಿಮಳೆ.   ಭಾರತದ ರಾಷ್ಟ್ರಿಯ ಕ್ರಿಕೆಟ್ ಆಟಗಾರರಾಗಿ ಆಯ್ಕೆ ಆಗುವಂತ ಅವಕಾಶದಿ೦ದ ವಂಚಿತರಾಗಿದ್ದು ದುರಾದೃಷ್ಟ.    ಈಗ UAE ಯ ಅಬುದಾಬಿಯ Exchage ನಲ್ಲಿ ಉಪಾಧ್ಯಕ್ಷರಾಗಿ ಪ್ರತಿಷ್ಟಿತ ದೊಡ್ದ ಹುದ್ದೆಯಲ್ಲಿದ್ದಾರೆ ಆದರೂ ತಮ್ಮ ಹುಟ್ಟಿದ ಊರು ಸಾಗರದಲ್ಲಿನ ಯುವ ಜನತೆಗೆ ಏನಾದರೂ ಮಾಡಬೇಕೆಂಬ ತುಡಿತ ಅವರಿಗೆ ಈಗಿನ ಅವರ ಸಾಮಥ್ಯ೯ದಲ್ಲಿ ಬೆಂಗಳೂರಿನಲ್ಲಿ ಪ್ರಾರಂಬಿಸ ಬಹುದಾದ ಕ್ರಿಕೆಟ್ ಆಕಾಡಮಿ ಸಾಗರದಲ್ಲಿ ಪ್ರಾರಂಬಿಸುತ್ತಿದ್ದಾರೆ ಅದೂ ಅವರದ...

#GOA TIMELINE MANJUNATH PUJAR#

#Timeline GOA ಮಂಜುನಾಥ ಪೂಜಾರ್ ಗೋವಾದಲ್ಲಿನ ಮಾಧ್ಯಮ, ರಾಜಕಾರಣ ಮತ್ತು ಪ್ರತಿಷ್ಠಿತ ಉದ್ದಿಮೆದಾರರಲ್ಲಿ ಚಿರಪರಿಚಿತ ಮತ್ತು ಪ್ರಸಿದ್ದರು#  ಇವರು ಮೊದಲು ಗೋವಾದ ಹೆರಾಲ್ಡ್ ಗ್ರೂಪ್ ನ ಜನರಲ್ ಮ್ಯಾನೇಜರ್ ಆಗಿದ್ದವರು, ಅದರ ಟಿವಿ ಚಾನಲ್ ಮತ್ತು ಮರಾಠಿ ಆವೃತ್ತಿ ಪ್ರಾರಂಬಿಸಿದವರು ಇವರೆ.   ಈಗ ಗೋವಾ ರಾಜಧಾನಿ ಪಣಜಿಯಲ್ಲಿ Timeline Goa Media house ಎಂಬ ಬೃಹತ್ ಜಾಹಿರಾತು ಸಂಸ್ಥೆ ನಡೆಸುತ್ತಿದ್ದಾರೆ  ದೇಶದ ಪ್ರತಿಷ್ಟಿತ ಉತ್ಪನ್ನಗಳು ತಮ್ಮ ಮಾರುಕಟ್ಟೆಗೆ ಉತ್ಪನ್ನಗಳನ್ನ ಬಿಡುಗಡೆ ಮಾಡಲು ಇವರ ಸಹಾಯ ಪಡೆಯುತ್ತದೆ.    ಇವರ Timeline Goa ಎಂಬ ಲೈಪ್ & ಸ್ಟೈಲ್ ಮ್ಯಾಗಜಿನ್ ಮಾಸಿಕ ಪತ್ರಿಕೆ ಗೋವಾದಲ್ಲಿ ಪ್ರಸಿದ್ದ ಪತ್ರಿಕೆ ಆಗಿದೆ.   ಇವರು ಓದಿದ್ದು ಆನಂದಪುರಂ ನ ಸಕಾ೯ರಿ ಕನ್ನಡ ಶಾಲೆಯಲ್ಲಿ, ಬಿ ಆರ್ ಪಿಯಲ್ಲಿ ಎಂ.ಎ.ಓದಿದವರು ನಂತರ ಬೆಂಗಳೂರಿನಲ್ಲಿ ಉದ್ಯೋಗ ಮಾಡಿದರು ನಂತರ ಗೋವಾದಲ್ಲಿ ಸೆಟಲ್ ಆಗಿದ್ದಾರೆ.   ಇವರ ಸಾದನೆ ಅತ್ಯಂತ ದೊಡ್ಡದು, ಯಾರ ಸಹಾಯವೂ ಇಲ್ಲದೆ ಗಾಡ್ ಪಾದರ್ ಇಲ್ಲದೆ ಇಷ್ಟು ಉನ್ನತ ಸ್ಥಾನಕ್ಕೆ ಬೇರೆ ರಾಜ್ಯದಲ್ಲಿ ಸೆಟಲ್ ಆಗುವುದು ಸಣ್ಣ ವಿಷಯವಲ್ಲ!   ಮಂಜು ಮತ್ತು ನಾನು ಆನಂದಪುರಂ ನ ಸಕಾ೯ರಿ ಕನ್ನಡ ಶಾಲೆಯಲ್ಲಿ ಒಂದನೇ ತರಗತಿಯಿಂದ 7 ನೇ ತರಗತಿವರೆಗೆ ಅಕ್ಕಪಕ್ಕದಲ್ಲೇ ಕುಳಿತು ಓದಿದವರು 7 ನೇ ತರಗತಿಯಲ್ಲಿ ಇಬ್ಬರು 40...

ಚಂಪಕ ಸರಸ್ಸು /CHAMPAKA SARASSU

CHAMPAKA SARASSU BEAUTIFUL MANUMENT OF ANANDAPURAM,ONLY 3KM FROM BUS STAND CHAMPAKA SARASSU. BUILT BY KELADI KING RAJA VENKATAPPA NAYAKA IN THE MEMORY OF DEPARTED QUEEN CHAMPAKA.               ಚಂಪಕ ಸರಸ್ಸು    ಕೆಳದಿ ರಾಜ ವೆಂಕಟಪ್ಪ ನಾಯಕರು ಆನಂದಪುರದಲ್ಲಿ ತನ್ನ ಪ್ರೀತಿಯ ರಾಣಿ ಚಂಪಕಳ ಸ್ಮರಣೆಗಾಗಿ ಕಟ್ಟಿಸಿದ ಈ ಕೊಳ  ಅತ್ಯಂತ ಸುಂದರವಾಗಿದೆ, ಆನಂದಪುರದ ಬಸ್ ನಿಲ್ದಾಣದಿಂದ ಕೇವಲ 3 ಕಿ.ಮಿ ದೂರದಲ್ಲಿದೆ.   ಸ್ಥಳಿಯ ಇತಿಹಾಸ ಆಸಕ್ತ ಯುವಕರು ಪ್ರತಿ ವಷ೯ ಇದನ್ನ ಸ್ವಚ್ಚಗೊಳಿಸಿ ಪ್ರವಾಸಿಗರಿಗೆ ಪ್ರವಾಸ ಯೋಗ್ಯ ಸ್ಥಳವಾಗಿಸಿದ್ದಾರೆ.    ರಾಣಿ ಚಂಪಕ ಅನ್ಯ ಜಾತಿಯವಳೆಂಬ ಕಾರಣದಿಂದ ಪಟ್ಟದ ರಾಣಿ ಭದ್ರಮ್ಮ ನಾಯಕಿ ಊಟ ಉಪಹಾರ ತ್ಯಜಿಸಿ ದೇಹ ತ್ಯಾಗ ಮಾಡಿದ್ದರಿಂದ ರಾಜ್ಯದಲ್ಲಿ ಅಲ್ಲೋಲ ಕಲ್ಲೊಲ ಉಂಟಾಗುತ್ತದೆ ಇದರಿಂದ ನೊಂದ ಚಂಪಕ ಹಾಲಿನಲ್ಲಿ ವಜ್ರದ ಪುಡಿ ಬೆರಸಿ ಆತ್ಮಹತೈ ಮಾಡಿಕೊ೦ಡಿದ್ದರಿಂದ ರಾಜಾ ವೆಂಕಟಪ್ಪ ನಾಯಕ ಕಟ್ಟಿಸಿದ ಈ ಸ್ಮಾರಕ ಚಂಪಕ ಸರಸ್ಸು.    ಇತ್ತೀಚಿಗೆ ಖ್ಯಾತ ಸಾಹಿತಿ ನಾ.ಡಿಸೋಜ ಈ ಪ್ರದೇಶದಲ್ಲಿ ಸಂಪಿಕೆ ಮರಗಳಿದ್ದಿರ ಬೇಕು ಹಾಗಾಗಿ ಚಂಪಕ ಸರಸ್ಸು ಅಂತ ಆಗಿರಬೇಕು ಅಂತ ಊಹೆ ಮಾಡಿದ ಬಾಷಣ ಪತ್ರಿಕೆಯಲ್ಲಿ ಬ...