* ಪುತ್ತೂರಿನ ಪ್ರತಿಷ್ಠಿತ ಉದ್ದಿಮೆ ಮಾಸ್ಟ್ ರ್ ಫ್ಲಾನೆರಿ * 2011ರಲ್ಲಿ ನಮ್ಮ ಲಾಡ್ಜ್ ಮತ್ತು ಕಾಟೇಜ್ ನಿಮಾ೯ಣ ಸಂದಭ೯ದಲ್ಲಿ ಈ ಸಂಸ್ಥೆಯಿ೦ದ ಸಿಮೆಂಟ್ ಬಾಗಿಲು, ಕಿಟಕಿ ಮತ್ತು ವಾಡ್೯ ರೋಬ್ಗಳನ್ನ ಇವರಿಂದ ಖರೀದಿಸಿದ್ದೆ, ಮೊನ್ನೆ ನಮ್ಮ ಹೊಸ ಕಟ್ಟಡಕಾಗಿ ಇಲ್ಲಿಗೆ ಹೋಗಿದ್ದೆ. ಈ ಸಂಸ್ಥೆ ಮರದಿಂದ ನಿಮಿ೯ಸುವ ಎಲ್ಲಾ ವಸ್ತುಗಳನ್ನ ಸಿಮೆಂಟ್ ನಿಂದ ನಿಮಿ೯ಸುವ ಕೌಶಲ್ಯ ಹೊಂದಿದೆ. ದೇಶದಾದ್ಯಂತ ರೈಲ್ವೆ, ಅರಣ್ಯ ಇಲಾಖೆಗಳಿಗೆ ಇವರ ಉತ್ಪನ್ನ ಸರಭರಾಜು ಆಗುತ್ತಿರುತ್ತದೆ. ದಿಡೀರ್ ನಿಮಿ೯ಸುವ ಮನೆ, ಟಾಯಿಲೆಟ್, ಕೃಷಿ ಬೋರ್ ವೆಲ್ ಗಳಿಗೆ ಕಾಂಕ್ರಿಟ್ ಸ್ವಿಚ್ ಬೋಡ್೯ಗಳು ಹೀಗೆ ಇಲ್ಲಿ ಏನುOಟು ಏನಿಲ್ಲ !,ಮರದಲ್ಲಿ ವಾಡ್೯ ರೋಬ್ ಮಾಡಲು ಕನಿಷ್ಟ 700 ರೂಪಾಯಿ ಚದರ ಅಡಿಗೆ ಬೇಕು ಅದೇ ಇವರ ಕಾಂಕ್ರಿಟ್ ನಲ್ಲಿ 4OO ರಿಂದ 500 ರೂಪಾಯಿಯಲ್ಲಿ ಆಗುತ್ತೆ ಆದರೆ ಇದು ಲಡ್ಡಾಗುವುದಿಲ್ಲ, ಒರಲೆ ತಿನ್ನುವುದಿಲ್ಲ ಮೈoಟೆನೆನ್ಸ್ ಪ್ರೀ. ಆನಂದ್ ಎಂಬುವವರು ಪ್ರಾರಂಬಿಸಿದ ಈ ಸಂಸ್ಥೆಯಲ್ಲಿ ನೂರಾರು ಕುಟುಂಬ ಉದ್ಯೋಗ ಮಾಡುತ್ತಿದೆ, ಅವರಿಗೆ ಊಟ / ವಸತಿ ವ್ಯವಸ್ಥೆ, ಕಾಮಿ೯ಕರಿಗಾಗಿಯೇ ಸಹಕಾರಿ ಮಾಲ್ ನಿಮಿ೯ಸಲಾಗಿದೆ. ಕಾಮಿ೯ಕರ ಮಕ್ಕಳಿಗೆ ವಿದ್ಯಾಭ್ಯಾಸ, ಊಟ ವಸತಿ ವ್ಯವಸ್ಥೆ ಕೂಡ ಅತ್ಯುತ್ತಮವಾಗಿ ಮಾಡಿದ್ದಾರೆ. ಮಹಿಳಾ ಸಿಬ್ಬಂದಿಗಳು ಇಲ್ಲಿ ತಯಾರು ಮಾಡುವ ಉತ್ಪನ್ನಗಳನ್ನ...