#ಚಿತ್ರದುಗ೯ದ ಸಾಹಸಿ ಕೋತಿ ರಾಜು #
ಬರಿಗೈಯಲ್ಲಿ ಕೋತಿಯ೦ತೆ ಬಂಡೆ ಏರಿಳಿಯುವ ಈ ಸಾಹಸಿ ಹೆಸರಲ್ಲಿ ಮೂರು ಗಿನ್ನೆಸ್ ದಾಖಲೆ ಇದೆ.
ಬೆಟ್ಟ, ಗುಡ್ಡ ಮತ್ತು ಜಲಪಾತಗಳಲ್ಲಿ ಸಿಕ್ಕಿಬಿದ್ದವರನ್ನ ರಕ್ಷಿಸುವ ಸಾಹಸದ ಕೆಲಸ ಮಾಡುತ್ತಾರೆ.
ವಿಶ್ವವಿಖ್ಯಾತ ಜೋಗ ಜಲಪಾತವನ್ನ ಬರೀ ಕೈಯಲ್ಲಿ ಹತ್ತಿ ಇಳಿದ ಏಕೈಕ ಸಾಹಸಿ ಇವರು.
ಕಳೆದ ವಷ೯ ಜೋಗ ಜಲಪಾತದಲ್ಲಿ ಆತ್ಮಹತ್ಯ ಮಾಡಿಕೊಂಡವರೊಬ್ಬರ ಶವ ಎತ್ತಲು ಹೋಗಿ ಒಂದು ರಾತ್ರಿ ಇವರು ಜಲಪಾತದ ಮಧ್ಯ ಸಿಕ್ಕಿ ಬಿದ್ದು ದೊಡ್ಡ ಆತ೦ಕಕ್ಕೆ ಕಾರಣ ಆಗಿತ್ತು.
ಪ್ರತಿ ಬಾನುವಾರ ಚಿತ್ರದುಗ೯ದ ಕಲ್ಲಿನ ಕೋಟೆಯಲ್ಲಿ ಪ್ರವಾಸಿಗಳಿಗೆ ಪ್ರದಶ೯ನ ನೀಡುತ್ತಾರೆ.
KOTHI RAJU A FAMOUSE ROCK CLIMBER HAVING 3 GINNES RECORDS,THIS RESCUE BOY EVERY SUNDAY DEMONSTRATE ROCK CLIMBING IN CHITRADURGA PORTE FOR TOURISTS.
His contact cell number
9980420995
Kotiraj
https://m.facebook.com/story.php?story_fbid=2268642489836577&id=100000725455473
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment