# ನನ್ನ ಹೋಬಳಿಯ ಬರಹಗಾರ, ಪತ್ರಕತ೯ ಶಶಿ ಸಂಪಳ್ಳಿ #
ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಆನಂದಪುರಂ ಹೋಬಳಿಯ ಹಿರೇಬಿಲಗುಂಜಿ ಗ್ರಾಮ ಪoಚಾಯತ್ ನ ಕೋಟೆಕೊಪ್ಪದ ಸಂಪಳ್ಳಿಯವರು, ಇವರ ತ೦ದೆ ತುಂಬಾ ಸಾದು ಸ್ವಭಾವದವರು.
ಇವರ ಊರು ಸಂಪಳ್ಳಿ ಮೈಸೂರು ರಾಜರು ಆನಂದಪುರದ ಭೂ ಮಾಲಿಕರಾದ ಶ್ರೀ ರಾಮಕೃಷ್ಣ ಅಯ್ಯ೦ಗಾರರಿಗೆ (ಮಂತ್ರಿ ಆಗಿದ್ದ ಬದರೀ ನಾರಾಯಣ ಅಯ್ಯOಗಾರರ ತಂದೆ) ಶ್ರುಂಗೇರಿ ಮಠಕ್ಕೆ ಪ್ರತಿ ವಷ೯ 2 ಟನ್ ಶ್ರೀಗಂದ ಸರಬರಾಜು ಮಾಡುವ ಕರಾರಿನಂತೆ ನೀಡಿದ 2000 ಎಕರೆ ದಟ್ಟ ಅರಣ್ಯ ಪ್ರದೇಶದಲ್ಲಿದೆ.
ಇವರ ಬಾಲ್ಯದ ವಿದ್ಯಾಭ್ಯಾಸದ ಚನ್ ಶೆಟ್ಟಿ ಕೊಪ್ಪ, ಹೊಸೂರು, ಗೌತಮ ಪುರ ಎಲ್ಲಾ ನನ್ನ ಒಡನಾಟದ ಊರುಗಳು.
ನಾನು ಇವರ ಮಲೆ ಘಟ್ಟ ಪ್ರಸ್ತಕ ಕಥಾ ಸಂಕಲನ ಅಂತ ಮಾಡಿದ್ದೆ ಇವತ್ತು ಓದಿದ ಮೇಲೆ ಗೊತ್ತ್ತಾಯಿತು ಪಶ್ಚಿಮ ಘಟ್ಟದ ಇಂಡಿಕರಣ, ಬಗರ್ ಹುಕುಂ, ಶಿಕಾರಿ, ಶುಂಠಿ ಹತ್ತಿ ಬೆಳೆಯ ಪರಿಣಾಮ, ಮಲೆನಾಡು ಗಿಡ್ಡಗಳ ಕೃತಕ ಗಭ೯ದಾರಣೆ, ಗಾಡ್ಗಿಳರ, ಕಸ್ತೂರಿ ರಂಗನ್ರ ವರದಿಗಳ ಮೇಲಿನ ಪುಸ್ತಕ ಅಂತ.
ಈ ಪುಸ್ತಕ ಜಿಲ್ಲೆಯ ರಾಜಕೀಯ ಪಕ್ಷಗಳ ಉಮೇದುದಾರರು, ಪಕ್ಷಗಳ ಪದಾಧಿಕಾರಿಗಳು ಓದಿದರೆ ಒಳಿತು ಆದರೆ ಪ್ರಸಕ್ತ ಜಿಲ್ಲೆಯ ರಾಜಕಾರಣಿಗಳಲ್ಲಿ ಇಂತಹ ಮಾಹಿತಿ ತಿಳಿಯುವ ವ್ಯವದಾನ ಕಡಿಮೆ.
ಏನೇ ಆಗಲಿ ಸಾಗರ ತಾಲ್ಲೂಕಿನ ಆನಂದಪುರO ಹೋಬಳಿಯ ಶಶಿ ಸಂಪಳ್ಳಿಯ ವೈಚಾರಿಕ ನಡೆ, ನುಡಿ ಮತ್ತು ಕೃತಿ ನನಗೆ ಸದಾ ಸಂತೋಷದ ವಿಷಯವಾಗಿದೆ.
ಮುಂದಿನ ದಿನದಲ್ಲಿ ಇವರಿಂದ ಇನ್ನೂ ಹೆಚ್ಚಿನ ಉಪಯುಕ್ತ ಬರಹಗಳ ಪುಸ್ತಕ ಬರಲಿ ಎಂದು ಹಾರೈಸುತ್ತೇನೆ.
Comments
Post a Comment