# ವಿಶೇಷ ವ್ಯಕ್ತಿ, ಅನಿವಾಸಿ ಭಾರತೀಯ, ಕಾಸರಗೋಡಿನ ಕನ್ನಡಿಗ ಕುಮಾರ್ ಕು೦ಟಿಕಾನಮಠ #
ಇವರು ಕೇರಳದ ಕಾಸರ ಗೋಡಿನ ಕುಂಟಿಕಾನ ಮಠದ ಪ್ರಖ್ಯಾತ ಸಾಹಿತಿ , ಕನ್ನಡ ಅಧ್ಯಾಪಕರಾದ ಬಾಲಕೃಷ್ಣ ಭಟ್ಟರ ಮಗ, ಹಾಲಿ ಲಂಡನ್ ನಲ್ಲಿದ್ದಾರೆ.
ಅಲ್ಲಿಯೂ ಕನ್ನಡದ ಕಾಯ೯ಕ್ರಮಕ್ಕಾಗಿ ಸದಾ ಮುಂದು, ರಾಜ್ಯದಿಂದ ಲಂಡನ್ ಗೆ ಹೋಗುವ ಪತ್ರಕತ೯ರು, ಸಾಹಿತಿಗಳು, ರಾಜಕಾರಣಿಗಳಿಗೆ ಇವರು ಅತಿಥೆಯರು.
ಇವರ ತಂದೆ ಬರೆದ ಅನೇಕ ಸಾಹಿತ್ಯ ಕಥೆ ಕಾದ೦ಬರಿಗಳಲ್ಲಿ ಶೇಕಡ 50 %ರಷ್ಟು ಇನ್ನೂ ಪ್ರಕಟವಾಗಿಲ್ಲ, ಇತ್ತೀಚಿಗೆ ಶ್ರೀರಾಮ ಕಥಾಮOಜರಿ ಎಂಬ ಗದ್ಯ ಕಾವ್ಯದ ಪುನರ್ ಮುದ್ರಣ ಮಾಡಿ ಬಿಡುಗಡೆ ಮಾಡಿದ್ದಾರೆ.
ತಂದೆಯ ಬಗ್ಗೆ ಇವರಿಗಿರುವ ಪ್ರೀತಿ ಅಭಿಮಾನಕ್ಕೆ ನಾನು ಅಭಾರಿ, ತಂದೆಯ ಆಸೆಯ೦ತೆ ಹುಟ್ಟಿದ ಊರಿನ ದೇವಸ್ಥಾನ ಪುನರ್ ಪ್ರತಿಷ್ಟಾಪನೆ ಕಾಯ೯ ಕೂಡ ಮಾಡುತ್ತಿದ್ದಾರೆ.
ಇವರು ಒಂದು ಕಾಲದಲ್ಲಿ ರಾಮಚಂದ್ರ ಮಠಕ್ಕೆ ದೊಡ್ಡ ಭಕ್ತರೂ ದಾನಿಗಳು, ನಂತರ ಇವರ ಕುಂಟಿಕಾನ್ ಮಠವನ್ನ ಸ್ವಾಮಿಗಳು ಮತ್ತು ಅವರ ಪಟಾಲಂ ಕಾನೂನು ಬಾಹಿರವಾಗಿ ಬಲತ್ಕಾರದಿ೦ದ ವಶಪಡಿಸಿಕೊಂಡದ್ದನ್ನ ವಿರೋದಿಸಿ ಕಾಸರಗೋಡು ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿ ಗೆದ್ದು ಬಿಡಿಸಿಕೊಂಡ ಛಲಗಾರ ಇವರು, ಇವರ ಕುಟುಂಬದ ಮೇಲೆ ನಡೆದ ದೌಜ೯ನ್ಯ ಅಮಾನಿಯವಾದದ್ದು (ಈ ಬಗ್ಗೆ ವಿವರವಾದ ಟಿವಿ ಸಂದಶ೯ನದ ವಿಡಿಯೋ ನೋಡಿ).
ಇವತ್ತು ಇವರು ಪುನರ್ ಮುದ್ರಿಸಿದ ಪ್ರತಿ ಕೋರಿಯರ್ ನಲ್ಲಿ ಹೊಸ ವರುಷದ ಕೊಡುಗೆಯ೦ತೆ ಬಂತು.
ನನಗೂ ನನ್ನ ಹೆತ್ತವರ ಬಗ್ಗೆ ಅಪಾರ ಪ್ರೀತಿ, ಅವರ ಹೆಸರ ಚಿರಸ್ಥಾಯಿಗೊಳಿಸಲು ಅವರಿಬ್ಬರ ಹೆಸರಲ್ಲಿ ಕಲ್ಯಾಣ ಮಂಟಪ ಕಟ್ಟಿಸಿದ್ದು, ಇದೇ ರೀತಿ ತಮ್ಮ ತಂದೆಯ ಪ್ರೀತಿಗಾಗಿ ಪ್ರಸ್ತಕ ಪುನರ್ ಮುದ್ರಿಸಿರುವ ಶ್ರೀ ಕುಮಾರ್ ಕುಂಟಿಕಾನ್ ಮಠ ಇವರ ಬಗ್ಗೆ ಹೆಮ್ಮೆ ಅನ್ನಿಸುತ್ತೆ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment