# ಮಲೆನಾಡಿನ ದೌಬಾ೯ಗ್ಯ, ಬಗೆ ಹರಿಯದ ನಿಗೂಡ ಕಾಯಿಲೆಗಳು #
ಕನಿಷ್ಟ ಸೀಮೆ ಎಣ್ಣೆ ಆದರೂ ಸರಬರಾಜಾಗಲಿ.
ಯಡಿಯೂರಪ್ಪ, ಈಶ್ವರಪ್ಪರ ಆಸ್ಪತ್ರೆ, ನಂಜಪ್ಪ, ಸುಬ್ಬಯ್ಯ ಆಸ್ಪತ್ರೆಗಳು ಸಹಕರಿಸಲಿ.
1950ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರಲ್ಲಿ ಕ೦ಡು ಬ೦ದ ಮಂಗನ ಕಾಯಿಲೆ ಮತ್ತು ಸಾಗರ ತಾಲ್ಲೂಕಿನ ಹಂದಿಗೋಡಿನಲ್ಲಿ ಕಂಡು ಬಂದ ಹಂದಿಗೋಡು ಸಿಂಡ್ರೋಮ್ ಡಿಸೀಸ್ಗಳಿಂದ ಸುಮಾರು 60 ವಷ೯ ಆದರೂ ಬಗೆಹರಿಯದ ಬವಣೆ ಆಗಿದೆ.
2019ರ ಹೊಸ ವಷ೯ದ ಮೊದಲ ವಾರದಲ್ಲಿಯೇ ಸಾಗರ ತಾಲ್ಲೂಕಿನ ಜೋಗ ಜಲಪಾತದ ಸಮೀಪದ ಅರಲಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತು ತೀಥ೯ಹಳ್ಳಿ ತಾಲ್ಲೂಕನಲ್ಲಿ ಒಟ್ಟು 7 ಜನ ಮೃತರಾಗಿದ್ದಾರೆ.
ಅನೇಕರು ಸಕಾ೯ರಿ ಮತ್ತು ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಇದು ನಿಯಂತ್ರಣಕ್ಕೆ ಬರುತ್ತೊ ಅಥವ ವಿನಾಶಕ್ಕೆ ಹೋಗುತ್ತದೋ ಗೊತ್ತಿಲ್ಲ, ಸಕಾ೯ರ, ಜನಪ್ರತಿನಿಧಿಗಳನ್ನ ದೂರುತ್ತಾ ಕುಳಿತು ಕೊಳ್ಳದೆ ಈ ಭಾಗದ ಜನರಿಗೆ ಜನಜಾಗೃತಿ ಮಾಡುವ, ಕಾಯಿಲೆ ಹರಡದಂತೆ ನಿತ್ಯ ದೇಹಕ್ಕೆ ಹಚ್ಚಿಕೊಳ್ಳಲು ರೋಗ ನಿರೋದಕ ತೈಲ, ಚುಚ್ಚುಮದ್ದು ತಕ್ಷಣ ಸರಬರಾಜು ಆಗಬೇಕು.
ಸೀಮೆ ಎಣ್ಣಿ ಕೈ ಕಾಲಿಗೆ ಸಂಜೆ ಸವರಿಕೊಂಡರೆ ಮಂಗನ ಕಾಯಿಲೆ ಹರಡುವ ಉಣ್ಣೆಗಳಿಂದ ರಕ್ಷಿಸಿಕೊಳ್ಳಬಹುದು ಎಂದು ಅನುಭವಿಗಳು ಹೇಳುತ್ತಾರೆ, ಈ ಬಾಗದಲ್ಲಿ ಸೀಮೆ ಎಣ್ಣಿ ಸಿಗುತ್ತಿಲ್ಲ ಅಂತಿದ್ದಾರೆ ಜಿಲ್ಲಾ ಆಡಳಿತ ಗಮನ ಹರಿಸಲಿ.
ಶಿವಮೊಗ್ಗದ ನಂಜಪ್ಪ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ, ಯಡೂರಪ್ಪರ ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಈಶ್ವರಪ್ಪರ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಗಳು ಈ ಬಾಗದಲ್ಲಿ ಸಕಾ೯ರದ ಜೊತೆ ಕೈ ಜೋಡಿಸಬಹುದು.
ಹಂದಿಗೋಡು ಕಾಯಿಲೆ ಪೀಡಿತರ ಸಮಸ್ಯೆ ಈವರೆಗೆ ಬಗೆ ಹರಿದಿಲ್ಲ, ಒಮ್ಮೆ ಮುಖ್ಯಮಂತ್ರಿ ಆಗಿದ್ದ ಕುಮಾರ್ ಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದರು, ಈಗ ಆವರೇ ಮುಖ್ಯಮಂತ್ರಿ ಆಗಿದ್ದಾರೆ. .ಇವತ್ತು ಮಂಗನ ಕಾಯಿಲೆಗೆ ಬಲಿಯಾದ ವಿದ್ಯಾಥಿ೯ನಿ ಶ್ವೇತಾ (5 ಜನವರಿ 2019)
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment