FB ಲೇಖನ ಕೃಪೆ: ಶ್ರೀ ರಾಘವೇಂದ್ರ ಶಮಾ೯ ತಲವಾಟ. ನಿನ್ನ ಕಣ್ಣು ಸ್ವಲ್ಪ ಅರಿಶಿನ ಬಣ್ಣಕ್ಕೆ ಕಾಣಿಸ್ತಲಾ..! ಕಾಮಾಲೆಯಾ ಗೀಮಾಲಾಯೆ ಆಯಿಕ್ಕು ಮಾರಾಯಾ, ಔಷಧಿ ತಗ " ಅಂದರು ಮೂವತ್ವರ್ಷದ ಹಿಂದೆ ಒಬ್ಬರು.ಅವರು ಹೇಳಿದಮೇಲೆ ಸುಸ್ತು ಊಟ ಸೇರುವುದಿಲ್ಲ ಮುಂತಾದ ಸಮಸ್ಯೆ ಶುರುವಾಯಿತು. ನಿಜವಾಗಿಯೂ ಕಾಮಾಲೆಯೋ ಅಥವಾ ಅವರು ಹೇಳಿದ್ದಕ್ಕೆ ಹಾಗೆ ಆಯಿತೋ ಗೊತ್ತಿಲ್ಲ. ಯಾವುದಕ್ಕೂ ಇರಲಿ ಅಂತ ನಮ್ಮ ದೊಡ್ಡಪ್ಪ ಕಾಮಾಲೆಗೆ ಔಷಧಿಕೊಡುತ್ತಿದ್ದರು ಅವರ ಬಳಿ ಹೋದೆ. ದೊಡ್ಡಪ್ಪನ ಮಗ ಮೋಹನಣ್ಣ "ಔಷಧಿ ಆನು ಬೇಕಾದ್ರೂ ಕೊಡ್ತಿ, ಆದರೆ ನಿನಗೆ ಕಾಮಾಲೆ ಅಲ್ಲ, ಕಾಮಾಲೆ ಅಲ್ದಿದ್ರೂ ಈ ಔಷಧಿ ತಗಳ್ಳಕ್ಕು, ಆದರೆ ನಾಲ್ಕ್ ತಾಸು ಮಳ್ ಹಿಡಿತು, ಬಟ್ ಲಿವರ್ರಿಗೆ ಒಳ್ಳೆದು" ಅಂದ. "ಮಳ್ ಹಿಡಿತು ಅಂದ್ರೆ ಎಂತಾಕ್ತು?". ಅಂತ ಕೇಳಿದೆ' " ಔಷಧಿ ತಗಂಡು ಸ್ವಲ್ಪಹೊತ್ತಿನ ನಂತರ ಕಂಬಳಿ ಹುಳ, ಬೆಕ್ಕು ಕಾಣ್ತು, ಗೋಟಾಗಾರಿನ ಮಧುರ ಹೋದ ತಿಂಗಳು ಔಷಧಿ ತಗಂಡವ " ನೋಡು ನೋಡು ಸಾಲು ಸಾಲು ಬೆಕ್ಕು ಅಂತ ಕೂಗ್ತಿದ್ದ" ಆದ್ರೆ ಅಲ್ನೋಡಿರೆ ಎಂತದೂ ಇರ್ಲೆ" ಹಂಗೆ ಭ್ರಮೆ ಹುಟ್ಟಿಸ್ತು, ಆವಾಗ ಪದೇ ಪದೇ ಮಜ್ಜಿಗೆ ಕುಡಿಯಕು, ಮಧ್ಯಾಹ್ನ ಫುಲ್ ಕಡಿಮೆ ಆಕ್ತು" ಎಂದು ಅನುಭವದ ಸುದೀರ್ಘ ಭಾಷಣ ಕೊಟ್ಟ. "ಅಯ್ಯೋ ಭ್ರಮೆ ಸೈಯಲ, ಮಾನಸಿಕವಾಗಿ ಆನು ಗಟ್ಟಿ, ಇದೆಲ್ಲ ಡೋಂಟ್ ಕೇರ್" ವಯಸ್ಸಿಗನುಗ...