ಹತ್ತುಗಾ ಎ೦ಬ ಡೊಮೆಸ್ಟಿಕ್ ಬೂತ!!!
# ಕೆಲವು ಮನೆಯಲ್ಲಿನ ನಿದಿ೯ಷ್ಟ ಜಾಗದಲ್ಲಿ ಮಲಗಿದವರಿಗೆ ಮಧ್ಯರಾತ್ರಿ ಕುತ್ತಿಗೆ ಹಿಚುಕುವ ಅನುಭವವೇ ಹತ್ತುಗ ಎಂಬ ಮರದ ಭೂತದ ಕೆಲಸ ಎಂಬ ನಂಬಿಗೆ ಈಗಲೂ ಇದೆ.#
" ರಾತ್ರಿ ನಿದ್ದೆ ಬರಲಿಲ್ಲ ಯಾರೋ ಉಸಿರುಟ್ಟಿಸಿದಂತೆ ಆಯಿತು''
" ಹತ್ತುಗದ ಕಾಲಗತಿಯಲ್ಲಿ ನಿದ್ದೆ ಆಗಲಿಲ್ಲ"
"ಅವರ ಮನೆ ಅಟ್ಟದಲ್ಲಿನ ಮರದಲ್ಲಿ ಹತ್ತುಗ ಇದೆ ಅಂತ ಎಲ್ಲರಿಗೂ ಗೊತ್ತು "
ಹೀಗೆ ಮಲೆನಾಡಿನಲ್ಲಿ ಎಲ್ಲರಿಗೂ ಈ ಹತ್ತುಗ ಎಂಬ ರಾತ್ರಿ ನಿದ್ದೆ ಮಾಡೋರಿಗೆ ಕುತ್ತಿಗೆ ಹಿಚುಕುವ ಈ ಡೊಮೆಸ್ಟಿಕ ಭೂತದ ಬಗ್ಗೆ ಗೊತ್ತು ಆದರೆ ಭಯ ಇಲ್ಲ ಏಕೆಂದರೆ ಇದು ಜೀವ ತೆಗೆಯುವ ಭೂತ ಅಲ್ಲ ಅಂತ.
ಹಳೆ ಮನೆಗಳಲ್ಲಿ ಕೆಲವು ಕೋಣೆಗಳಲ್ಲಿ ಈಗಲೂ ಯಾರೂ ಮಲಗುವುದಿಲ್ಲ, ಮಲಗಿದರೆ ಯಾರೋ ಬಂದು ಕುತ್ತಿಗೆ ಹಿಚುಕಿ ಉಸಿರುಗಟ್ಟಿಸುತ್ತಾರೆ ಅಂತಾರೆ.
ಈಗೆಲ್ಲ ಮಲೆನಾಡಿನಲ್ಲಿ ಮರ ಹೋಗಿ ಕಾಂಕ್ರಿಟ್ ಬಿಲ್ಡಿಂಗ್ ಬ೦ದಿದೆ ಹಾಗಾಗಿ ಹತ್ತುಗ ಕೂಡ ನಾಪತ್ತೆ ಆಗಿದೆ.
ಇದಕ್ಕೆ ಹತ್ತುಗ ಅ೦ತ ಹೆಸರು ಹೇಗೆ ಬಂತು ಅಂದರೆ ಇದು ಮನೆಯ ಮರದ ಜಂತಿಯಲ್ಲಿ ಇರುತ್ತೆ ಯಾರಾದರು ಈ ಜಂತಿ ಕೆಳಗೆ ಮಲಗಿದರೆ ಅವರ ಮೇಲೆ ಹತ್ತಿ ಕುತ್ತಿಗೆ ಹಿಚುಕುತ್ತೆ ಅದಕ್ಕೆ ಹತ್ತುಗ ಅಂತ ಹೆಸರಾಗಿದೆ.
ಇದರ ಆಕೃತಿ ನೋಡಿದವರಿಲ್ಲ, ಮಲೆನಾಡಿನ ಮೇಲ್ವಗ೯, ಕೆಳ ವಗ೯ದಲ್ಲೂ ಈ ನಂಬಿಕೆ ಇದೆ.
ನನಗೂ ಈ ಅನುಭವ ಆಗಿದೆ ಆದರೆ ಇದು ಹತ್ತುಗದ ಅಂತ ಅನುಮಾನ ಯಾಕೆಂದರೆ ವೈದ್ಯವಿಜ್ಞಾನದಲ್ಲಿ ಹೇಳುವ ಬ್ರೆತ್ ಲೆಸ್ ನೆಸ್ ಗೆ ಅನೇಕ ಕಾರಣ ಇದೆ, ಈ ಸಂದಭ೯ದಲ್ಲಿ ಒಂದು ರೀತಿಯ ಸ್ನಾಯು ಬಿಗಿತ ಉಂಟಾಗಿರುತ್ತೆ ಯಾರಾದರೂ ಪಕ್ಕದಲ್ಲಿ ಮಲಗಿರುವವರು ಇವರ ಕನವರಿಕೆ ಕೇಳಿ ಅಲುಗಾಡಿಸಿದರೆ ಸರಿ ಆಗುತ್ತೆ ಅಥವ ಸ್ನಾಯು ಬಿಗಿತ ಹೊಂದಿದವರೇ ಸ್ವಲ್ಪ ಅಲುಗಾಡಿದರೂ ಸಾಕು ಉಸಿರಾಟ ಸರಾಗವಾಗುತ್ತೆ ಅಂತಾರೆ ಆದರೆ ಈ ಸಂದಭ೯ದ ಸಮಯ ಅವರಿಗೆ ಒಂದು ರೀತಿ ಕನಸಾಗಿ ಯಾರೋ ಬಂದು ಕುತ್ತಿಗೆ ಅದುಮಿದಂತಾಗಿ ಅವರಿಂದ ತಪ್ಪಿಸಿಕೊಳ್ಳಲು ಹೋರಾಟ ಮಾಡಿದಂತೆ ಆಗುವ ಅನುಭವ ಮರುದಿನ ಹತ್ತುಗದ ಕಾರಣ ಆಗಿರ ಬಹುದಾ?
ಈ ಬಗ್ಗೆ ನಾನು ಅನೇಕರ ಅನುಭವ ಕೇಳಿದ್ದೇನೆ ಅವರೆಲ್ಲ ನೂರಕ್ಕೆ ನೂರು ಹತ್ತುಗದ ಅಸ್ತಿತ್ವ ಸತ್ಯ ಅನ್ನುತ್ತಾರೆ, ಸುಳ್ಳು ಅನ್ನುವ ವಾಸ್ತವವಾದಿಗಳಿಗೆ ಇದನ್ನ ಪರೀಕ್ಷೆ ಮಾಡೋನಾ ಅಂದರೆ ಅಲ್ಲಿ ಬಂದು ಮಲಗಲು ದೈಯ೯ವಿಲ್ಲ.
ಹೀಗಾಗಿ ಹತ್ತುಗ ಎಂಬ ಕಡಿಮೆ ತೊಂದರೆ ಕೊಡುವ ಮರದ ಜOತಿಯ ಡೊಮೆಸ್ಟಿಕ್ ಭೂತ ಮನೆಯ ಸಾಕುಪ್ರಾಣಿಗಳಾದ ನಾಯಿ, ಬೆಕ್ಕಿನಂತೆ ಮನೆಯಲ್ಲಿ ಒಂದು ನಂಬಿಕೆ ಆಗಿ ಉಳಿದು ಬಿಟ್ಟಿದೆ, ಇದಕ್ಕೆ ಊಟ ತಿಂಡಿ ಕೊಡ ಬೇಕಾಗಿಲ್ಲ ಆದರೆ ಅಪರೂಪಕ್ಕೆ ಬರುವ ನೆಂಟರಿಂದ ಇದರ ಅಸ್ತಿತ್ವ ಆಗಾಗೆ ಪ್ರತ್ಯಕ್ಷವಾಗುತ್ತೆ.
ಅನೇಕ ಮರದ ಕೆಲಸದ ಆಚಾರರನ್ನ ಕೇಳಿದರೆ ಅವರೂ ಇದು ಒಪ್ಪುತ್ತಾರೆ, ಕೆಲವು ಜಾತಿ ಮರಗಳಲ್ಲಿ ಇದು ಇರುತ್ತೆ, ಅಮವಾಸ್ಯೆ ದಿನ ಈ ರೀತಿ ತೊಂದರೆ ಅನ್ನುತ್ತಾರೆ.
ಹತ್ತುಗ ಇದಿಯೋ ಇಲ್ಲವೊ ಮಧ್ಯರಾತ್ರಿ ಅಥವ ಅಮವಾಸ್ಯೆಯ ಕತ್ತಲಲ್ಲಿ ಗಾಡ ನಿದ್ದೆಯಲ್ಲಿ ಕಾಡುವ ಉಸಿರಾಟದ ತೊಂದರೆ ಮಾತ್ರ ಇದ್ದಿದ್ದೆ ಅಂದರೆ ಇದಕ್ಕೆ ಸವಾಲು ಹಾಕುತ್ತಾ ಹತ್ತುಗ ಇರುವುದು ಸತ್ಯ ಅನ್ನುತ್ತಾರೆ ಮಲೆನಾಡಿಗರು
https://www.facebook.com/693504594115135/posts/1381639898634931/
Comments
Post a Comment