#ಅನಂದಪುರಂ_ಆನೇ_ಕಾರಿಡಾರ್
#ಈಗ_ಎರಡನೆ_ಕಾಡಾನೆ_ತಂಡ_ಬಂದಿದೆ
#ಮರಿ_ಆನೆ_ಜೊತೆ_ದಂತವಿರುವ_ಸಲಗ_ಇದೆ
ನಿನ್ನೆ ಆನೆಗಳು ಶಿಕಾರಿಪುರ ರಸ್ತೆಯ ಗೌತಮಪುರ ಮತ್ತು ಬೈರಾಪುರದ ಪೀರನಕಣಿವೆಯಲ್ಲಿ ಮೂರು ಕಾಡನೆಗಳು ಇತ್ತು.
ಇದು ಈ ವರ್ಷದ ಕಾಡಾನೆಗಳ ಎರಡನೇ ತಂಡ ಮೊದಲ ಬಂದ ಮೂರು ಆನೆಗಳು
ವಾಪಾಸು ಹೋಗಿದೆ.
ಈಗಾಗಲೇ ಆನೆ ಮಾವುತರ ತಂಡ ಒಂದು ಈ ಕಾಡಾನೆಗಳ ಸ್ಥಳಾಂತರಕ್ಕೆ ಸಹಕರಿಸಲು ಆಗಮಿಸುವ ನಿರೀಕ್ಷೆ ಇದೆ.
ಆನೆ ಮಾವುತರು ಆನೆ ಸಾಗಿದ ಮಾರ್ಗ ಗುರುತು ಹಿಡಿದು ಅದರಲ್ಲೇ ಸಾಗಿ ಆನೆಗಳಿರುವ ಪ್ರದೇಶ ಗುರುತು ಮಾಡಲು ಗುರುತು ಮಾಡಲು ಸಹಕರಿಸುತ್ತಾರೆ ಅವರು ಈ ಕೆಲಸದಲ್ಲಿ ಪರಿಣಿತರಾದ್ದರಿಂದ ಅವರ ಸಹಾಯ ಪಡೆಯುತ್ತಾರೆ.
ಅವರು ಕಾಡಾನೆ ಸಾಗಿದ ಮಾರ್ಗದ ಹುಲ್ಲು- ಗಿಡ- ಕಾಲು ಹೆಜ್ಜೆ, ಆನೆ ಮೂತ್ರ - ಲದ್ದಿ ಗಳನ್ನು ಗುರುತಿಸುವ ಮೂಲಕ ಆನೆ ಸಾಗಿದ ಮಾರ್ಗ ಕಂಡುಹಿಡಿಯೋ ಪರಿಣತಿ ಹೊಂದಿದ್ದಾರೆ.
#ಆನೆ #ಕಾಡಾನೆ #ಆನೆಕಾರಿಡಾರ್ #ಆನೆಮಾವುತರು
#Anandapuram #sagar #shivamogga #winter #kollibachalu #badrawildlife #arasalu #ForestDepartment #rangeforest #kavadi
ಈ ಹೊಸ ತಂಡದಲ್ಲೂ ಮೂರು ಆನೆಗಳು ಇದೆ, ಕಳೆದ ವಾರ ಮೂಡಾಹಗಲು ಗ್ರಾಮದಲ್ಲಿ ಕಂಡುಬಂದಿದ್ದ ಮರಿ ಆನೆ ಜೊತೆಗೆ ಇದ್ದದ್ದು ಅದರ ತಾಯಿ ಆನೆ ಅಲ್ಲ ಅದು ಕೋರೆಗಳಿರುವ ಗಂಡು ಆನೆ ಎಂದು ತಿಳಿದು ಬಂದಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಎರಡನೇ ಕಾಡಾನೆ ತಂಡವನ್ನು ಗೌತಮಪುರ ಮತ್ತು ಬೈರಾಪುರ ಮಧ್ಯದ ಪೀರನ ಕಣಿವೆಯಿಂದ ನಿನ್ನೆ ಸಂಜೆ ತನಕ (2 - ಜನವರಿ - 2025 ಗುರುವಾರ) ದಣಂದೂರು ಊರಿನ ತನಕ ಬೆದರಿಸಿ ಕಳಿಸಿದ್ದಾರೆ.
ಅವುಗಳು ನಿನ್ನೆ ರಾತ್ರಿಯಲ್ಲಿ ಕೊಲ್ಲಿ ಬಚ್ಚಲು ಡ್ಯಾಮ್ ಹಿನ್ನೀರು ಪ್ರದೇಶ ಸೇರಿಕೊಳ್ಳುವ ನಿರೀಕ್ಷೆ ಇದೆ.
ಅಲ್ಲಿನಿಂದ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಿ
ಅರಸಾಳು ರೇಂಜಿನ ಕಡೆ ಕಾಡಾನೆ ಓಡಿಸುವ ಪ್ರಯತ್ನ ಅರಣ್ಯ ಇಲಾಖೆ ಮಾಡುತ್ತಿದೆ.
ಈಗಾಗಲೇ ಆನೆ ಮಾವುತರ ತಂಡ ಒಂದು ಈ ಕಾಡಾನೆಗಳ ಸ್ಥಳಾಂತರಕ್ಕೆ ಸಹಕರಿಸಲು ಆಗಮಿಸುವ ನಿರೀಕ್ಷೆ ಇದೆ.
ಆನೆ ಮಾವುತರು ಆನೆ ಸಾಗಿದ ಮಾರ್ಗ ಗುರುತು ಹಿಡಿದು ಅದರಲ್ಲೇ ಸಾಗಿ ಆನೆಗಳಿರುವ ಪ್ರದೇಶ ಗುರುತು ಮಾಡಲು ಗುರುತು ಮಾಡಲು ಸಹಕರಿಸುತ್ತಾರೆ ಅವರು ಈ ಕೆಲಸದಲ್ಲಿ ಪರಿಣಿತರಾದ್ದರಿಂದ ಅವರ ಸಹಾಯ ಪಡೆಯುತ್ತಾರೆ.
ಅವರು ಕಾಡಾನೆ ಸಾಗಿದ ಮಾರ್ಗದ ಹುಲ್ಲು- ಗಿಡ- ಕಾಲು ಹೆಜ್ಜೆ, ಆನೆ ಮೂತ್ರ - ಲದ್ದಿ ಗಳನ್ನು ಗುರುತಿಸುವ ಮೂಲಕ ಆನೆ ಸಾಗಿದ ಮಾರ್ಗ ಕಂಡುಹಿಡಿಯೋ ಪರಿಣತಿ ಹೊಂದಿದ್ದಾರೆ.
ಈ ವರ್ಷ ಕಾಡಾನೆಗಳು ಒಂದು ತಂಡ ಬಂದಿರುವುದಲ್ಲ, ಎರಡು ತಂಡದಲ್ಲಿ ಆನಂದಪುರಂ ಆನೆ ಕಾರಿಡಾರ್ ಪ್ರವೇಶ ಮಾಡಿ ವಾಪಸ್ ಸಾಗುತ್ತಿದೆ, ಕಾಡಾನೆಗಳು ಈ ವರ್ಷ ಕಳೆದ ವರ್ಷಕ್ಕಿಂತ 20 ಕಿಲೋ ಮೀಟರ್ ಹೆಚ್ಚು ದೂರ ಸಾಗಿ ಹೊಸ ಸ್ಥಳ ಅನ್ವೇಷಿಸಿದೆ.
ಅದು ಅಂಬ್ಲಿಗೊಳ ಡ್ಯಾಮಿನ ಮೇಲೆ ಸಾಗಿ ಸಾಗರ ತಾಲ್ಲೂಕಿನ ತ್ಯಾಗರ್ತಿ ಮತ್ತು ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾವಿಗೆರೆ,ಇಡುವಳ್ಳಿ ಮತ್ತು ಮೈಲಾರಿಕೊಪ್ಪದ ಪ್ರದೇಶ ತಲುಪಿತ್ತು ಹಾಗೆಯೇ ತಂಗಳವಾಡಿಯಿಂದ ಎಡಕ್ಕೆ ಹೊರಳಿ ಹೊಸಕೊಪ್ಪ ಊರಿನಲ್ಲಿ ಸಾಗಿ ಹೋಗಿತ್ತು.
ಭದ್ರಾ ಅಭಯಾರಣ್ಯದಿಂದ ಬಂದ ಇನ್ನೊಂದು ಆನೆ ಗುಂಪು ಅರಸಾಳು ಅರಣ್ಯದಿಂದ ಹುಂಚ ಹೋಬಳಿಯ ಹೆದ್ದಾರಿಪುರ - ಗರ್ತಿಕೆರೆ -ಬಿದರಳ್ಳಿ ಭಾಗದ ಕೃಷಿ ಜಮೀನುಗಳಿಗೆ ಪ್ರವೇಶ ಮಾಡಿತ್ತು.
ಕಳೆದ ವರ್ಷ ಡಿಸೆಂಬರ್ 28ಕ್ಕೆ ಕಾಡಾನೆಗಳು ಈ ಪ್ರದೇಶದಿಂದ ವಾಪಸ್ ಹೋಗಿದ್ದು ದಾಖಲಾಗಿತ್ತು ಆದರೆ ಈ ವಷ೯ ಬಂದ ಈ ಕಾಡಾನೆಗಳ ತಂಡ ಇನ್ನು ಇಲ್ಲೇ ಸಂಚಾರ ಮಾಡುತ್ತಿದೆ.
ಅರಣ್ಯ ಇಲಾಖೆ ಈ ಬಗ್ಗೆ ಹೆಚ್ಚು ಗಮನ ಹರಿಸಿದೆ ಮತ್ತು ಕಾಳಜಿ ವಹಿಸಿದೆ ಅದೇ ರೀತಿ ಈ ಭಾಗದ ಸಾರ್ವಜನಿಕರು ಕಳೆದ ವರ್ಷದ ರೀತಿ ಭಯ ಬೀಳದೆ ಆನೆಗಳ ಜೊತೆ ಸಹಬಾಳ್ವೆ ಅನಿವಾರ್ಯ ಎಂಬ ಅರಿವು ಪಡೆದಿದ್ದು ಆನೆಗಳ ವಾಪಾಸಾತಿಗೆ ಸುಗಮ ಸಂಚಾರ ಮಾಗ೯ ಸುಲಭವಾಗಿ ಕಲ್ಪಿಸಲು ಸಹಕರಿಸುತ್ತಿದ್ದಾರೆ.
ಈ ಕೆಳಗಿನ ಚಿತ್ರದಲ್ಲಿ ಕೆಂಪು ಗೆರೆ ಆವರಣ ಹಾಲಿ ಕಾಡಾನೆ ಸಂಚರಿಸುತ್ತಿರುವ ಪ್ರದೇಶ ಮತ್ತು ಪಕ್ಕದ ಕೊಲ್ಲಿಬಚ್ಚಲು ಡ್ಯಾಮ್ ಆನಂದಪುರಂ ಅನೇ ಕಾರಿಡಾರ್ ಕೇಂದ್ರವಾಗಿದೆ.
Comments
Post a Comment