#ಹಳೇಸೊರಬದ_ಜೆ_ಶಿವಾನಂದಪ್ಪ
#ಎರಡನೇ_ಪುಣ್ಯ_ಸ್ಮರಣೆ
#ಬಂಗಾರಪ್ಪರ_ಬಲಗೈ_ಬಂಟರಾಗಿದ್ದರು.
#ಒಂದು_ಚುನಾವಣೆಯಲ್ಲಿ_ಅಜಿ೯_ಹಾಕಲು_ಬಂದ_ಬಂಗಾರಪ್ಪನವರು_ಮತ್ತೆ_ಬಂದದ್ದು_ಗೆದ್ದ_ಮೇಲೆ
#ಸಂಪೂರ್ಣ_ಚುನಾವಣೆ_ಮಾಡಿದ್ದು_ಶಿವಾನಂದಪ್ಪನವರೆ
#ತಮ್ಮ_ರಾಜಕೀಯ_ಜೀವನವನ್ನೆ_ಬಂಗಾರಪ್ಪರ_ಕುಟುಂಬಕ್ಕೆ_ಮೀಸಲಿಟ್ಟಿದ್ದರು
#ಮನಸ್ಸು_ಮಾಡಿದ್ದರೆ_ವಿದಾನ_ಸಭಾ_ಸದಸ್ಯರಾಗಿ_ಜಿಲ್ಲೆಯ_ಪ್ರಭಾವಿ_ರಾಜಕಾರಣಿ_ಆಗುತ್ತಿದ್ದರು.
#ಸೊರಬ_ಶಿವಾನಂದಪ್ಪರ_ನೆನಪುಗಳು
ಇಡೀ ಸೊರಬ ಕ್ಷೇತ್ರದ ಜನ ಬಂಗಾರಪ್ಪರ ನಂತರ ಹಳೇ ಸೊರಬದ ಶಿವಾನಂದಪ್ಪನವರೆ ಶಾಸಕರಾಗುತ್ತಾರೆ, ಬಂಗಾರಪ್ಪ ಶಿವಾನಂದಪ್ಪನವರನ್ನೇ ಬೆಳೆಸುತ್ತಾರೆಂಬ ಭಾವನೆಯಲ್ಲಿದ್ದರು ಸ್ವತಃ ಶಿವಾನಂದಪ್ಪನವರಿಗೂ ಅದೇ ಭರವಸೆ ಇತ್ತು.
ಆದರೆ ಶಿವಾನಂದಪ್ಪ ಸೊರಬ ತಾಲ್ಲೂಕ್ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ತೃಪ್ತಿ ಪಡುವ೦ತಾಯಿತು ಅವರನ್ನು ಕನಿಷ್ಟ ಜಿಲ್ಲಾ ಮಟ್ಟದ ರಾಜಕಾರಣಕ್ಕೂ ತಲುಪದಂತೆ ಕಾಣದ ಕೈಗಳು ನೋಡಿಕೊಂಡಿದ್ದು ವಿಪಯಾ೯ಸ.
#soraba #shivamogga #politics #shivanandappa #congressparty #sbangarappa #madhubangarappa #kumarbangarappa
ಸೊರಬ ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನದ ನಂತರ ವರದಾ ನದಿ ಸೇತುವೆ ದಾಟಿ ಎಡಕ್ಕೆ ಇರುವ ಹಳೇಸೊರಬದ ಸಣ್ಣ ಹಂಚಿನ ಮನೆಯಲ್ಲಿ ಜೆ. ಶಿವಾನಂದಪ್ಪರ ಮೊದಲ ಬೇಟಿ ನನ್ನದು.
ಸದಾ ಹಸನ್ಮುಖಿಯಾಗಿ ಇಡೀ ಕ್ಷೇತ್ರದ ಪ್ರತಿ ಕುಟುಂಬಕ್ಕೆ ಬಂಗಾರಪ್ಪರ ಪ್ರತಿನಿದಿ ಆಗಿ ಅವರ ಕಷ್ಟ ಸುಖಗಳಿಗೆ ಪ್ರತಿಸ್ಪಂದಿಸುತ್ತಾ ಪ್ರತಿ ಚುನಾವಣೆಯಲ್ಲಿ ಬಂಗಾರಪ್ಪರಿಗೆ ಅವರ ಮತಗಳು ತಪ್ಪದಂತೆ ನೋಡಿಕೊಳ್ಳುತ್ತಿದ್ದ ಯುವ ನಾಯಕರಾಗಿದ್ದ ಶಿವಾನಂದಪ್ಪ ಯಾವಾಗಲೂ ಬಂಗಾರಪ್ಪರ ಚುನಾವಣಾ ರಾಜಕಾರಣದ ಸೇನಾ ನಾಯಕರು.
ಬಂಗಾರಪ್ಪನವರು ಮುಖ್ಯಮಂತ್ರಿ ಆಗಲೇ ಬೇಕು, ಅವರು ಮುಖ್ಯಮಂತ್ರಿ ಆಗಿದ್ದು ತಮ್ಮ ಕಣ್ಣಲ್ಲಿ ನೋಡಬೇಕೆಂಬುದೇ ಇವರ ಕನಸಾಗಿತ್ತು ಅಂತಹ ಸಂದರ್ಭಗಳು ಬಂಗಾರಪ್ಪರಿಗೆ ಬಂದರೂ ಈಡೇರದ ನೋವು ಎಲ್ಲರಿಗಿಂತ ಹೆಚ್ಚು ಬಾದಿಸಿದ್ದು ಶಿವಾನಂದಪ್ಪರಿಗೆ.
ಇಂತಹ ಒಂದು ಚುನಾವಣೆಯಲ್ಲಿ ಶಿವಾನಂದಪ್ಪ ಒಂದು ಘೋಷಣೆ ಮಾಡಿದ್ದರು ಅದೇನೆಂದರೆ ಬಂಗಾರಪ್ಪನವರು ವಿದಾನ ಸಭಾ ಚುನಾವಣೆಗೆ ಅರ್ಜಿ ಸಲ್ಲಿಸಲು ಮಾತ್ರ ಸೊರಬಕ್ಕೆ ಬರುತ್ತಾರೆ ಇಡೀ ಚುನಾವಣೆ ಸೊರಬ ವಿಧಾನಸಭಾ ಕ್ಷೇತ್ರದ ಮತದಾರರೇ ಮಾಡಿ ಅವರನ್ನು ಗೆಲ್ಲಿಸುತ್ತೇವೆ ಅಂತ ಅದರಂತೆ ಬಂಗಾರಪ್ಪನವರು ಶಿವಾನಂದಪ್ಪರ ಆಶಯದಂತೆ ಸೊರಬಕ್ಕೆ ಬಂದು ಅಜಿ೯ಸಲ್ಲಿಸಿ ಹೋದರು.
ಇಡೀ ವಿದಾನ ಸಭಾ ಕ್ಷೇತ್ರದಲ್ಲಿ ಪ್ರಚಾರದ ಜವಾಬ್ದಾರಿಯು ಇದೇ ಶಿವಾನಂದಪ್ಪನವರದ್ದಾಗಿತ್ತು, ಜನತೆ ಇವರಲ್ಲಿ ಬಂಗಾರಪ್ಪನವರ ಪ್ರತಿಬಿಂಬ ನೋಡಿತ್ತು, ಅದರಂತೆ ಬಾರೀ ಬಹುಮತದಲ್ಲಿ ಬಂಗಾರಪ್ಪ ಗೆದ್ದರು ಬಹುಶಃ ಇದು ರಾಜ್ಯ ರಾಜಕಾರಣದಲ್ಲಿ ಮೊದಲು ಮತ್ತು ಕೊನೆಯ ಹೊಸ ಪ್ರಯೋಗ ಅನ್ನಿಸಿದೆ.
ಇಡೀ ಸೊರಬ ಕ್ಷೇತ್ರದ ಜನ ಬಂಗಾರಪ್ಪರ ನಂತರ ಹಳೇ ಸೊರಬದ ಶಿವಾನಂದಪ್ಪನವರೆ ಶಾಸಕರಾಗುತ್ತಾರೆ, ಬಂಗಾರಪ್ಪ ಶಿವಾನಂದಪ್ಪನವರನ್ನೇ ಬೆಳೆಸುತ್ತಾರೆಂಬ ಭಾವನೆಯಲ್ಲಿದ್ದರು ಸ್ವತಃ ಶಿವಾನಂದಪ್ಪನವರಿಗೂ ಅದೇ ಭರವಸೆ ಇತ್ತು.
ಆದರೆ ಶಿವಾನಂದಪ್ಪ ಸೊರಬ ತಾಲ್ಲೂಕ್ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ತೃಪ್ತಿ ಪಡುವ೦ತಾಯಿತು ಅವರನ್ನು ಕನಿಷ್ಟ ಜಿಲ್ಲಾ ಮಟ್ಟದ ರಾಜಕಾರಣಕ್ಕೂ ತಲುಪದಂತೆ ಕಾಣದ ಕೈಗಳು ನೋಡಿಕೊಂಡಿದ್ದು ವಿಪಯಾ೯ಸ.
ಅವರು ಮನಸ್ಸು ಮಾಡಿ ಬಂಡಾಯ ಎದ್ದಿದ್ದರೆ ಶಾಸಕರೂ ಆಗಬಹುದಿತ್ತು ಮತ್ತು ಬಂಗಾರಪ್ಪನವರು ದೊಡ್ಡ ಮನಸ್ಸು ಮಾಡಿ ಇವರನ್ನು ಕನಿಷ್ಟ ನಿಗಮ ಮಂಡಳಿ ಅಧ್ಯಕ್ಷರನ್ನಾಗಿಯೂ ಮಾಡಬಹುದಿತು.
ಈ ವಿಚಾರದಲ್ಲಿ ಶಿಕಾರಿಪುರದಲ್ಲಿ ಯಡಿಯೂರಪ್ಪನವರು ಅವರ ಆಪ್ತ ಸಾಗರದ ಗುರುಮೂರ್ತಿ ಅವರಿಗೆ ಸೂಕ್ತ ಸ್ಥಾನ ಮಾನ ನೀಡಿರುವ ಉದಾಹರಣೆ ಎದುರಿಗಿದೆ ಆದರೆ ಶಿವಮೊಗ್ಗ ಜಿಲ್ಲೆಯ ಬಂಗಾರಪ್ಪ ಮತ್ತು ಕಾಗೋಡು ತಮ್ಮ ಆಪ್ತರಿಗೆ ಇಂತಹ ಅವಕಾಶ ಯಾಕೆ ಮಾಡಲಿಲ್ಲವೋ ಗೊತ್ತಿಲ್ಲ.
ಆನಂದಪುರಂ ಮಾರ್ಗದಲ್ಲಿ ಸಂಚರಿಸುವಾಗೆಲ್ಲ ಶಿವಾನಂದಪ್ಪನವರು ನನ್ನ ಬೇಟಿ ಮಾಡದೇ ಹೋಗುತ್ತಿರಲಿಲ್ಲ, ಸಪ್ಪೆ ಚಹಾದ ಜೊತೆ ಆಗೆಲ್ಲ ಅನೇಕ ರಾಜಕಾರಣದ ಸತ್ಯಕಥೆ ಹೇಳುತ್ತಿದ್ದರು ಅಂತಹ ಅನೇಕ ಘಟನೆಗಳು ದಾಖಲು ಆಗಿದೆ.
ಚಂದ್ರಗುತ್ತಿ ಬೆತ್ತಲೆ ಸೇವೆ, ಬದರಿನಾರಾಯಣ ಅಯ್ಯಂಗಾರ್ ಮತ್ತು ಬಂಗಾರಪ್ಪರ ಒಡನಾಟದ ಬಗ್ಗೆ ಯುಟ್ಯೂಬ್ ಗಾಗಿ ವಿಡಿಯೋ ಸಂದರ್ಶನ ಮಾಡುವ ಬಗ್ಗೆ ಒಪ್ಪಿದ್ದರು ಆದರೆ ಅದಕ್ಕಿಂತ ಮೊದಲೇ ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿ ಎಸ್ ಬಂಗಾರಪ್ಪರ ನೆರಳಿನಂತಿದ್ದ ಅವರ ಕಟ್ಟಾ ಅಭಿಮಾನಿ, ಚುನಾವಣಾ ರಾಜಕಾರಣದ ಅವರ ಸೇನಾಧಿಕಾರಿ ಸೊರಬದ ಜನರ ಬಾಯಲ್ಲಿ ಹಳೇ ಸೊರಬದ ಶಿವಾನಂದಪ್ಪ ಎಂದೇ ಗುರುತಿಸಿಕೊಂಡಿದ್ದ ಜೆ. ಶಿವಾನಂದಪ್ಪ ಇಹಲೋಕ ತ್ಯಜಿಸಿದರು.
Comments
Post a Comment