# ರಾಣಿ ಬೆನ್ನೂರಿನ ನೇಕಾರರ ನಾಯಕ ಮಾಜಿ ಪುರಸಭಾ ಸದಸ್ಯ ಮಿತ್ರ ದಿಗಡಊರು ಗುರು#
ನಮ್ಮಲ್ಲಿಗೆ ಎರಡು ವಷ೯ದ ಹಿಂದೆ ಬಂದಾಗ ಅವರಲ್ಲಿ ನೇಕಾರ ವೃತ್ತಿಯ ಬಗ್ಗೆ ಅನೇಕ ವಿಚಾರದ ಬಗ್ಗೆ ವಿಚಾರಿಸಿದ್ದೆ, ಸಮಾದಾನವಾಗಿ ವಿವರಿಸಿದ ಅವರು ಒಮ್ಮೆ ರಾಣಿ ಬೆನ್ನೂರಿಗೆ ಬನ್ನಿ ಅಂತ ಹೇಳಿದ್ದರು.
ಮೊನ್ನೆ ರಾಣಿಬೆನ್ನೂರಿಗೆ ಹೋಗಿದ್ದೆ
ಕಾಂಗ್ರೇಸ್ ನ ಕೋಳಿವಾಡರ ಆತ್ಮೀ ಯ ವಲಯದಿಂದ ಪಕ್ಷೇತರ ಶಾಸಕ ಶಂಕರ್ ರ ವಲಯ ಸೇರಿದ್ದ ಗುರು ಈ ಬಾರಿಯ ಪುರಸಭಾ ಚುನಾವಣೆಯಲ್ಲಿ 19 ಮತದಿಂದ ಸೋತಿದ್ದರು, ಇವರ ತಾಯಿ ಕೂಡ ಒಮ್ಮೆ ಪುರಸಭಾ ಸದಸ್ಯರಾಗಿದ್ದರು.
ಇವರ ಸಂಘದಿಂದ ಕಾಂಗ್ರೇಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಗೆ ಕೈ ಮಗ್ಗದ ಸೀರೆ ಸಮಪಿ೯ಸಿದ್ದನ್ನ ವಿವರಿಸಿದರು.
ಅನೇಕ ಸಿನಿಮಾ ರಂಗದವರಿಗೆ, ರಾಜಕಾರಣಿಗಳಿಗೆ, ಪ್ರತಿಷ್ಟಿತರಿಗೆ ಅವಶ್ಯವಿರುವ ಹತ್ತಿ ಸೀರೆ ಸರಭರಾಜು ಮಾಡಿದವರು.
ಈಗ ನೇಕಾರರ ಭವಣೆ ಮತ್ತು ಮುಂದಿನ ತಲೆಮಾರು ಈ ಉದ್ಯೋಗದಿಂದ ದೂರವಾಗುವ ಸಾಧ್ಯತೆ ಬಗ್ಗೆ ಹೇಳಿದರು.
ನಿಜ ನೇಕಾರರು ದಿನಕ್ಕೆ 300 ಗಳಿಸುವುದು ಕಷ್ಟವಂತೆ, ಸಕಾ೯ರ ಕಡಿಮೆ ದರದಲ್ಲಿ ವಿದ್ಯುತ್ ನೀಡುವುದು ತುಂಬಾ ಸಹಾಯವಾಗಿದೆ ಅಂತೆ.
ಕೈಮಗ್ಗದ ಹೆಸರಲ್ಲಿ ಕೊಟ್ಯಾ೦ತರ ರೂಪಾಯಿ ಹಣ ಲಪಟಾಯಿಸುವ ವ್ಯವಸ್ಥೆ ನಡೆದಿದೆ ಅಂತಾರೆ.
ಪ್ರಸಿದ್ದ ಮೂಡಲ ಮನೆ ದಾರಾವಾಹಿಗೆ ಸೀರೆ ಸರಭರಾಜು ಮಾಡಿದವರು ಇವರು.
ಅಂತಹ ಒಂದು ಸೀರೆ ನೆನಪಿಗಾಗಿ ಖರೀದಿಸಿದೆ.
ಇವರ ಪೋನ್ ನಂಬರ್- 98442 34036
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment