*ಪ್ರಬಂದ ಅಂಬುತೀಥ೯ ನಮ್ಮ ಶರಾವತಿ ಹುಟ್ಟುವ ತೀಥ೯ಹಳ್ಳಿ ತಾಲ್ಲೂಕಿನ ಅಂಬುತೀಥ೯ದವರು, ನನ್ನ FB ಗೆಳೆಯರು ಮುಖತಃ ಭೇಟಿ ಆಗಿಲ್ಲ ಇವರು FB ಯಲ್ಲಿ ಬರೆಯುವ ಕಥೆ ತಪ್ಪದೇ ಓದುತ್ತೇನೆ. ಎಲೆ ಮರೆಯ ಕಾಯಿಯಂತಹ ಈ ಉದಯೋನ್ಮುಖ ಕಥೆಗಾರ ಅನೇಕ ಕಥೆ ಬರೆದಿದ್ದಾರೆ, ಪುಸ್ತಕವಾಗಿ ಪ್ರಕಟಿಸಲು ಯೋಗ್ಯವಾಗಿದೆ. ನೇಗಿಲೋಣಿ, ಸುಕುOಟು೦ಭ, ಪ್ರಥಮ ಪ್ರೀತಿ, ಶಿಕ್ಷೆ, ಹುತಾತ್ಮ, ಒಂಶಾಂತಿ, ಸ್ವರತಿ, ದಂಡಕಾರಣ್ಯ ಹೊಂ ಸ್ಟೇ, ನಾವುಡರ ಪ್ರೇಮ ಪ್ರಸಂಗ, ಸೀನು ರೆಡ್ಡಿ ಡಿಸ್ಕವರಿ, ವಕ್ಷಸ್ಥಲೆ, ಮರು, ಮೂಲ, ರುತುಮಾನ, ಭಾರತಿ ಪುರ, ಕನಕತ್ತೆ ಸ್ಟಾಟಿಸ್ಟಿಕ್, ನಾಗಮಂಡಲ, ವೇಣು ನಾಗನ, ಕೌಸಲ್ಯ ಬಾತ್, ಅನ್ನಪ್ರಸಾದ ಕೇಟರರ್ಸ್, ಅಕೇಶಿಯಾ ಕೊಪ್ಪ.... ಹೀಗೆ ಸಾಲು ಸಾಲು ಕಥೆ ಬರೆದಿದ್ದಾರೆ. ಅವರು ಬರೆದ ಒಂದು ಕಥೆ ಇಲ್ಲಿದೆ ಓದಿ. ಮೊನ್ನೆ ಅವರ ಹುಟ್ಟುಹಬ್ಬ ಕೂಡ. ವಕ್ಷ ಸ್ಥಲೆ....... ಅದು ಬೆಳಿಗ್ಗೆ ಜಾಮ ಐದುವರೆ.... ಕಟ್ಟಿನಮಡಿಕೆ ಗಣೇಶ ಭಟ್ರ ಕೊಟ್ಟಿಗೆ. ವಸುಧಮ್ಮ ಜೋರಾಗಿ " ಗಂಗೆ ನಿಂಗೆ ಅವಳೂ ಮಗಳೂ ಕಣೆ... ತಸಾರ ಮಾಡಕಾಗದು.. ಒಂಚೂರು ಅವಳಿಗೂ ಮುರ ಕೊಡು.... ಕಿಟ್ಟು ಕಾಲುಮೆಟ್ಟಬ್ಯಾಡ ಕಣೋ.. ಅಯ್ಯೋ ದಾಸಿ ನಿಂಗೀ ಬೆಳಿಗ್ಗೆ ಕುತ್ತಿಗೆ ತೊರ್ಸುತಾ ಕೂತರೆ ಆಯಿತು ನನ್ನ ಕಥೆ ಆಮೇಲ ನೋಡೋಣ.... ಭಾಗಿ ನಿನ್ನ ದೊಡ್ಡ ಮಗಳು ಶಾರಿಗೆ ಗುಡ್ಡ ದಲ್ಲಿ ಹಾಲು ಕೊಟ್ಟಕೊಂಡು ಬರ್ಬ್ಯಾಡ್ಯೆ ಮಾರಾಯ್ತಿ.... ಮನೇಲಿ ಒ...