# ವಿಶೇಷ ವ್ಯಕ್ತಿ, ಅನಿವಾಸಿ ಭಾರತೀಯ, ಕಾಸರಗೋಡಿನ ಕನ್ನಡಿಗ ಕುಮಾರ್ ಕು೦ಟಿಕಾನಮಠ # ಇವರು ಕೇರಳದ ಕಾಸರ ಗೋಡಿನ ಕುಂಟಿಕಾನ ಮಠದ ಪ್ರಖ್ಯಾತ ಸಾಹಿತಿ , ಕನ್ನಡ ಅಧ್ಯಾಪಕರಾದ ಬಾಲಕೃಷ್ಣ ಭಟ್ಟರ ಮಗ, ಹಾಲಿ ಲಂಡನ್ ನಲ್ಲಿದ್ದಾರೆ. ಅಲ್ಲಿಯೂ ಕನ್ನಡದ ಕಾಯ೯ಕ್ರಮಕ್ಕಾಗಿ ಸದಾ ಮುಂದು, ರಾಜ್ಯದಿಂದ ಲಂಡನ್ ಗೆ ಹೋಗುವ ಪತ್ರಕತ೯ರು, ಸಾಹಿತಿಗಳು, ರಾಜಕಾರಣಿಗಳಿಗೆ ಇವರು ಅತಿಥೆಯರು. ಇವರ ತಂದೆ ಬರೆದ ಅನೇಕ ಸಾಹಿತ್ಯ ಕಥೆ ಕಾದ೦ಬರಿಗಳಲ್ಲಿ ಶೇಕಡ 50 %ರಷ್ಟು ಇನ್ನೂ ಪ್ರಕಟವಾಗಿಲ್ಲ, ಇತ್ತೀಚಿಗೆ ಶ್ರೀರಾಮ ಕಥಾಮOಜರಿ ಎಂಬ ಗದ್ಯ ಕಾವ್ಯದ ಪುನರ್ ಮುದ್ರಣ ಮಾಡಿ ಬಿಡುಗಡೆ ಮಾಡಿದ್ದಾರೆ. ತಂದೆಯ ಬಗ್ಗೆ ಇವರಿಗಿರುವ ಪ್ರೀತಿ ಅಭಿಮಾನಕ್ಕೆ ನಾನು ಅಭಾರಿ, ತಂದೆಯ ಆಸೆಯ೦ತೆ ಹುಟ್ಟಿದ ಊರಿನ ದೇವಸ್ಥಾನ ಪುನರ್ ಪ್ರತಿಷ್ಟಾಪನೆ ಕಾಯ೯ ಕೂಡ ಮಾಡುತ್ತಿದ್ದಾರೆ. ಇವರು ಒಂದು ಕಾಲದಲ್ಲಿ ರಾಮಚಂದ್ರ ಮಠಕ್ಕೆ ದೊಡ್ಡ ಭಕ್ತರೂ ದಾನಿಗಳು, ನಂತರ ಇವರ ಕುಂಟಿಕಾನ್ ಮಠವನ್ನ ಸ್ವಾಮಿಗಳು ಮತ್ತು ಅವರ ಪಟಾಲಂ ಕಾನೂನು ಬಾಹಿರವಾಗಿ ಬಲತ್ಕಾರದಿ೦ದ ವಶಪಡಿಸಿಕೊಂಡದ್ದನ್ನ ವಿರೋದಿಸಿ ಕಾಸರಗೋಡು ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿ ಗೆದ್ದು ಬಿಡಿಸಿಕೊಂಡ ಛಲಗಾರ ಇವರು, ಇವರ ಕುಟುಂಬದ ಮೇಲೆ ನಡೆದ ದೌಜ೯ನ್ಯ ಅಮಾನಿಯವಾದದ್ದು (ಈ ಬಗ್ಗೆ ವಿವರವಾದ ಟಿವಿ ಸಂದಶ೯ನದ ವಿಡಿಯೋ ನೋಡಿ). ಇವತ್ತು ಇವರು ಪುನರ್ ಮುದ್ರಿಸಿದ ಪ್ರತಿ ಕೋರಿಯರ್ ...