ನಮ್ಮಲ್ಲಿ ಎರೆಡು ರೆಸ್ಟೋರಂಟ್, ಒಂದು ಕಲ್ಯಾಣ ಮಂಟಪ ಮತ್ತು ಎರೆಡು ಮನೆಗಳ ತ್ಯಾಜ್ಯ ವಿಲೆವಾರಿ ನಿತ್ಯ ಆಗಬೇಕು. ಪ್ಲಾಸ್ಟಿಕ್, ಗಾಜು, ಹಸಿ ಕಸ ಹೀಗೆ ಪ್ರತ್ಯೇಕ ಡಬ್ಬಿಗಳಲ್ಲಿ ಹಾಕಿ ನಿತ್ಯ ಅವುಗಳನ್ನ ವಿಲೇವಾರಿ ಮಾಡುತ್ತೇವೆ. ಪ್ಲಾಸ್ಟಿಕ್ ಖಾಲಿ ಬಾಟಲ್, ಹಾಲು ಎಣ್ಣೆ ಖಾಲಿ ಕವರ್, ಪಿನಾಯಿಲ್, ಡೆಟಾಲ್ ಖಾಲಿ ಕ್ಯಾನ್ಗಳನ್ನು ದೊಡ್ಡ ಚೀಲದಲ್ಲಿ ಹಾಕಿ ವಾರಕೊಮ್ಮೆ ರಿಸೈಕ್ಲಿOಗ್ ಘಟಕಕ್ಕೆ ಕಳಿಸುತ್ತೇವೆ. ಸಣ್ಣ ಪೇಪರ್ಗಳು, ಬಳಸಿದ ನ್ಯಾಪ್ಕಿನ್ಗಳನ್ನ ನಮ್ಮದೆ ಸಣ್ಣ ಸುಡುವ ಘಟಕದಲ್ಲಿ ಸುಡಲಾಗುತ್ತದೆ. ಮಾಂಸಹಾರಿ ಹೋಟೆಲ್ ತ್ಯಾಜ್ಯ ಮತ್ತು ಸಸ್ಯಹಾರಿ ಹೋಟೆಲ್ ತ್ಯಾಜ್ಯ ನಿತ್ಯ ರಾತ್ರಿ ಹಂದಿ ಸಾಕಣೆ ಕೇಂದ್ರದವರಿಗೆ ನೀಡುತ್ತೇನೆ. ಕಲ್ಯಾಣ ಮಂಟಪದ ಊಟದ ಎಲೆ, ತರಕಾರಿ ಸಿಪ್ಪೆ, ಉಳಿದ ಆಹಾರಗಳನ್ನ 10 ಅಡಿ ಅಗಲ ಮತ್ತು 3 ಅಡಿ ಎತ್ತರದ ಟ್ಯಾಂಕ್‌ಗೆ ಹಾಕಿ ಕೆಲ ದಿನ ಕೊಳೆಯಲು ಬಿಟ್ಟು ನಂತರ ನೀರು ತುಂಬಿಸಿ ಒಂದೆರೆಡು ದಿನದ ನಂತರ ಕೆಳಗಿನ ಟ್ಯಾಂಕ್‌ಗೆ ಬಿಟ್ಟು ಶೇಖರಿಸಿ ನಂತರ ಈ ಸಾವಯವ ಗೊಬ್ಬರದ ನೀರನ್ನ ನಮ್ಮ ರಬ್ಬರ್ ತೋಟಕ್ಕೆ ಹಾಕುತ್ತೇವೆ. 2006 ರಿಂದ ಈ ವರೆಗೆ ಒಂದು ಸಣ್ಣ ಕಸ ಕೂಡ ನಮ್ಮ ಸಂಸ್ಥೆ ಮತ್ತು ಮನೆಯಿಂದ ಎಲ್ಲೋ ಹೊರ ಚೆಲ್ಲಿದ ಉದಾಹರಣೆ ಇಲ್ಲ ಈ ಬಗ್ಗೆ ನನಗೆ ಹೆಮ್ಮೆ ಇದೆ. ಮಳೆಗಾಲದಲ್ಲಿ ಎಲ್ಲಾ ನೀರುಗಳನ್ನ ಕಾಲುವೆ ಮುಖಾಂತರ ನಮ್ಮ ಬೋರ್ ವೆಲ್ ಸಮೀಪ 12 ಅಡಿ ಅಗಲ 15 ಅಡಿ...