ಹತ್ತುಗಾ ಎ೦ಬ ಡೊಮೆಸ್ಟಿಕ್ ಬೂತ!!! # ಕೆಲವು ಮನೆಯಲ್ಲಿನ ನಿದಿ೯ಷ್ಟ ಜಾಗದಲ್ಲಿ ಮಲಗಿದವರಿಗೆ ಮಧ್ಯರಾತ್ರಿ ಕುತ್ತಿಗೆ ಹಿಚುಕುವ ಅನುಭವವೇ ಹತ್ತುಗ ಎಂಬ ಮರದ ಭೂತದ ಕೆಲಸ ಎಂಬ ನಂಬಿಗೆ ಈಗಲೂ ಇದೆ.# " ರಾತ್ರಿ ನಿದ್ದೆ ಬರಲಿಲ್ಲ ಯಾರೋ ಉಸಿರುಟ್ಟಿಸಿದಂತೆ ಆಯಿತು'' " ಹತ್ತುಗದ ಕಾಲಗತಿಯಲ್ಲಿ ನಿದ್ದೆ ಆಗಲಿಲ್ಲ" "ಅವರ ಮನೆ ಅಟ್ಟದಲ್ಲಿನ ಮರದಲ್ಲಿ ಹತ್ತುಗ ಇದೆ ಅಂತ ಎಲ್ಲರಿಗೂ ಗೊತ್ತು " ಹೀಗೆ ಮಲೆನಾಡಿನಲ್ಲಿ ಎಲ್ಲರಿಗೂ ಈ ಹತ್ತುಗ ಎಂಬ ರಾತ್ರಿ ನಿದ್ದೆ ಮಾಡೋರಿಗೆ ಕುತ್ತಿಗೆ ಹಿಚುಕುವ ಈ ಡೊಮೆಸ್ಟಿಕ ಭೂತದ ಬಗ್ಗೆ ಗೊತ್ತು ಆದರೆ ಭಯ ಇಲ್ಲ ಏಕೆಂದರೆ ಇದು ಜೀವ ತೆಗೆಯುವ ಭೂತ ಅಲ್ಲ ಅಂತ. ಹಳೆ ಮನೆಗಳಲ್ಲಿ ಕೆಲವು ಕೋಣೆಗಳಲ್ಲಿ ಈಗಲೂ ಯಾರೂ ಮಲಗುವುದಿಲ್ಲ, ಮಲಗಿದರೆ ಯಾರೋ ಬಂದು ಕುತ್ತಿಗೆ ಹಿಚುಕಿ ಉಸಿರುಗಟ್ಟಿಸುತ್ತಾರೆ ಅಂತಾರೆ. ಈಗೆಲ್ಲ ಮಲೆನಾಡಿನಲ್ಲಿ ಮರ ಹೋಗಿ ಕಾಂಕ್ರಿಟ್ ಬಿಲ್ಡಿಂಗ್ ಬ೦ದಿದೆ ಹಾಗಾಗಿ ಹತ್ತುಗ ಕೂಡ ನಾಪತ್ತೆ ಆಗಿದೆ. ಇದಕ್ಕೆ ಹತ್ತುಗ ಅ೦ತ ಹೆಸರು ಹೇಗೆ ಬಂತು ಅಂದರೆ ಇದು ಮನೆಯ ಮರದ ಜಂತಿಯಲ್ಲಿ ಇರುತ್ತೆ ಯಾರಾದರು ಈ ಜಂತಿ ಕೆಳಗೆ ಮಲಗಿದರೆ ಅವರ ಮೇಲೆ ಹತ್ತಿ ಕುತ್ತಿಗೆ ಹಿಚುಕುತ್ತೆ ಅದಕ್ಕೆ ಹತ್ತುಗ ಅಂತ ಹೆಸರಾಗಿದೆ. ಇದರ ಆಕೃತಿ ನೋಡಿದವರಿಲ್ಲ, ಮಲೆನಾಡಿನ ಮೇಲ್ವಗ೯, ಕೆಳ ವಗ೯...