# ಪ್ರಖ್ಯಾತ ವ್ಯಂಗ್ಯ ಚಿತ್ರಕಾರ ಮತ್ತು ಹೋರಾಟಗಾರ ನಿರ೦ಜನ ಕುಗ್ವೆ.# ನಾನು ಇವರ ಚಿತ್ರ ಮತ್ತು ಹೋರಾಟಗಳನ್ನ ನೋಡಿ ಇವರ ಅಭಿಮಾನಿ ಆಗಿದ್ದೆ ಆದರೆ ಇವರ ನನ್ನ ಬೇಟಿ ಇವತ್ತಿನವರೆಗೆ ಆಗಿರಲಿಲ್ಲ, ಇವತ್ತು ಸಂಜೆ ಒಂದು ಕೈಯಲ್ಲಿ ಕೆಂಪು ಹೆಲ್ಮೆಟ್ ಹಿಡಿದು ಕೊಂಡು, ಬಗಲಲ್ಲಿ ಚೀಲ ಏರಿಸಿಕೊಂಡು ದಿಡೀರ್ ಆಗಿ ನನ್ನ ಆಪೀಸಿಗೆ ಬಂದು ನನ್ನ ಗುರುತು ಸಿಕ್ಕಿತಾ? ಎಂಬ ಪ್ರಶ್ನೆ ಮಾಡಿದಾಗ ತಕ್ಷಣ ನಿರಂಜನ ಕುಗ್ವೆ ಅಂದೆ. ಇವರು ಸಾಗರ ತಾಲ್ಲೂಕಿನ ಕುಗ್ವೆಯವರು, ಚಿತ್ರಕಲಾ ಶಿಕ್ಷಕರಾಗಿ ಭದ್ರಾವತಿ ತಾಲ್ಲೂಕ್ನಲ್ಲಿ ಕೆಲಸ ಮಾಡುತ್ತಿದ್ದಾರೆ, ಇತ್ತೀಚಿಗೆ ಇವರ ವ್ಯಂಗ್ಯಚಿತ್ರ ಹವ್ಯಕ ಸಮಾಜದಲ್ಲಿ ಭಾರೀ ಹವಾ ಸೃಷ್ಟಿ ಮಾಡಿತ್ತು, ಇವರ ಸಮಾಜದ ಮಠದಲ್ಲಿನ ಕನ್ಯಾ ಸಂಸ್ಕಾರ ಎಂಬ ಅಪ್ರಾಪ್ತ ಹೆಣ್ಣು ಮಕ್ಕಳ ಲೈಂಗಿಕ ಶೋಷಣೆಯನ್ನ ವಿರೋದಿಸಿ ಇವರು ಬರೆದ ವ್ಯಂಗ್ಯಚಿತ್ರಗಳು ಮಠದವರನ್ನ ಕೆರಳಿಸಿತ್ತು ಹಾಗಾಗಿ ಇವರನ್ನ ಸುಳ್ಳು ದೂರಿನಿಂದ ಪೋಲಿಸ್ ಕೇಸ್, ಜೈಲಿಗೆ ಕಳಿಸಿ ಇವರ ಕೈ ಕಟ್ಟಿ ಹಾಕುವ ಪ್ರಯತ್ನ ನಡೆಸಿದ್ದರು. ಈ ಸಂದಭ೯ದಲ್ಲಿ ಈ ಹೋರಾಟಗಾರರನ್ನ ಸುಳ್ಳು ದೂರಿನಿಂದ ಜೈಲಿಗೆ ಕಳಿಸುವುದನ್ನ ವಿರೋದಿಸಿದ್ದೆ, ನಂತರ ಇವರು ಇನ್ನೂ ಹೆಚ್ಚು ಚಿತ್ರ ಬರೆದು ಜನಜಾಗೃತಿ ಮಾಡಲು ಪ್ರಾರಂಬಿಸಿದ್ದರಿಂದ ವಿರೋದಿಗಳಿಗೆ ಸಿಂಹ ಸ್ವಪ್ನ ಆಗಿದ್ದಾರೆ. ಇವರ ಹೋರಾಟಕ್ಕೆ ಈಗ ಹವ್ಯಕ ಸಮಾಜದಲ್ಲೇ ಹೆಚ್ಚು ಬೆಂಬಲ ವ್ಯಕ್ತವಾಗಿದೆ...