ತೀರ್ಥಹಳ್ಳಿಯ ಖ್ಯಾತ ಲಕ್ಷ್ಮೀಶ್ ವಾರ ಪತ್ರಿಕೆ ಸಂಪಾದಕರಾದ ಲಕ್ಷ್ಮೀಷ್ ಹೊಸ ವರ್ಷದ ಹಿಂದಿನ ದಿನ ಇಹ ಲೋಕ ತ್ಯಜಿಸಿದರು ಅವರ ಶ್ರದ್ದಾಂಜಲಿ ಲೇಖನ ನೋಡಿದವರು ಲಕ್ಷೀಷರು ಮತ್ತು ನನ್ನ ಬೇಟಿ ಬಗ್ಗೆ ಅವರು ಬರೆದ ಲೇಖನದ ಪೂಣ೯ ಬಾಗ ಹಾಕಲು ಗೆಳೆಯರು ಕೋರಿದ್ದಾರೆ.... #June_11_2022. #ಮಿತ್ರ_ಅರುಣ್_ಪ್ರಸಾದ್ #ಸ್ಮೃತಿ_ಲಕ್ಷ್ಮೀಶಪತ್ರಿಕೆ_ತೀರ್ಥಹಳ್ಳಿ #shivamogga #thirthahalli #koppa #sringeri #press #PressClub #weekly #laxmish #laxmishvarapatrike #chalagara #Journalism #hibengalore #sringesh #janahorat #tungariver 1996 ನೇ ಇಸವಿಯ ಒಂದು ದಿನ ಮತ್ತು ಒಂದು ತಿಂಗಳು, ತೀರಾ ಖಚಿತವಾಗಿ ನೆನಪಿಲ್ಲ ಅನ್ನುವಾಗ ಅರುಣ್ ಪ್ರಸಾದ್ ಎಂಬ ಜಿಲ್ಲಾ ಪಂಚಾಯತಿ ಸದಸ್ಯರ ಬಗ್ಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ, ಕುತೂಹಲಕಾರಿ ಸುದ್ದಿ ಪ್ರಕಟವಾಗಿದ್ದವು. ನಾನು ಪತ್ರಿಕೆ ಆರಂಭಿಸಿ ಎರಡು ವರ್ಷ ಕಳೆದಿತ್ತಷ್ಟೇ, ಸ್ಥಳೀಯ ಲಕ್ಷ್ಮೀ ಮೆಡಿಕಲ್ಸಿನಲ್ಲಿ ಕುಂತು ಲೋಕಾಭಿರಾಮ ಹರಟುತ್ತಾ ಗುರು ಶಿಷ್ಯ ಛಲಗಾರ ಗಣಪತಿ ಮತ್ತು ನಾನು ಇರುವಾಗ, ಗುರುಗಳಿಂದ ಈ #ಅರುಣಪ್ರಸಾದ್ ನನ್ನ ಶಿಷ್ಯ ಕಣೋ ಎಂಬ ಉದ್ಗಾರ ಹೊರಬಿತ್ತು. ಇವನಣ್ಣ ನಾಗರಾಜ್ ಆನಂದಪುರಂ ನಲ್ಲಿ ನನ್ನ ಪತ್ರಿಕೆ ವರದಿಗಾರ ಮತ್ತು ವಿತರಕನಾಗಿದ್ದ, ಇವನು ಅರುಣ ಬೆಳಿಗ್ಗೆ ...