# ಮೈಸೂರಲ್ಲಿ ಜಾವಾ ಬೈಕ್ ಖರೀದಿಸಿದವರು ಶಿವಮೊಗ್ಗಕ್ಕೆ ಇವರನ್ನ ಹುಡುಕಿಕೊಂಡು ಬರುತ್ತಿದ್ದರೆಂದರೆ !? # 1965ರ ಕಾಲದಲ್ಲಿ ಇವರದ್ದು ಅದ್ದೂರಿಯ ಜೀವನ, ಜಾವ ಬೈಕಿಗೆ ಲಗತ್ತಾದ ಸೀಟು ತಯಾರಿಸುವುದರಲ್ಲಿ ಇವರದ್ದು ಎತ್ತಿದ ಕೈ ರಾಜ್ಯದಲ್ಲೇ ಹೆಸರುವಾಸಿ, ಈಗಿನ Sports ಬೈಕ್ ಖರೀದಿಸುವ ಶೋಕಿ ಇರುವ ಯುವ ಜನಾ೦ಗದಂತೆ ಆಗಿನ ಯುವ ಜನಾ೦ಗ ಜಾವಾ ಬೈಕ್ ಗೆ ಫಿದಾ ಆಗಿದ್ದ ಕಾಲ, ಎಡಕಲ್ಲು ಗುಡ್ಡದ೦ತ ಪ್ರಖ್ಯಾತ ಸಿನಿಮಾದ ಹಾಡಿನಲ್ಲಿ ನಾಯಕ ಚಂದ್ರಶೇಖರ್, ನಾಯಕಿ ಜಯಂತಿ ಜಾವಾ ಬೈಕ್ ನಲ್ಲಿ ಪ್ರಣಯಗೀತೆ ಹಾಡುತ್ತಾ ಸಾಗುವುದು ಉದಾಹರಣೆ. ಆ ಬೈಕಿನ ಸೀಟು ತಯಾರಿಸಿದವರು ಶಿವಮೊಗ್ಗದ ಪೂಸ್ವಾಮಿ ಪ್ರಕಾಶ್ & ಬ್ರದರ್ಸ್ ಮಾಲಿಕರು ಮೊದಲಿಗೆ ನೆಹರು ರೋಡಿನ ಚಂದ್ರು ಸ್ಟುಡಿಯೋ ಪಕ್ಕದಲ್ಲಿ ಇದ್ದರು ಈಗ ನೆಹರು ರಸ್ತೆಯ ಮೂರನೆ ತಿರುವಿನ ಸನ್ಮಾನ್ ಹೋಟೆಲ್ ಎದರು ಸ್ವಂತ ಕಟ್ಟಡದಲ್ಲಿ ಸುಪುತ್ರ ಗಿರಿ ಜೊತೆ ಬೆಡ್ ಕುಷ್ ನ್ ಗಳ ದೊಡ್ಡ ಮಟ್ಟದ ವ್ಯವಹಾರ ನಡೆಸಿದ್ದಾರೆ. 1954ರಲ್ಲಿ ಹಾಡ್೯ವೇರ್ ವ್ಯವಹಾರದಿಂದ ಈಗಿನ ಬೆಡ್ ಕುಷ್ ನ್ , ಸೋಪಾ, ಕಿಟಕಿ ಕಟ೯ನ್ಗಳನ್ನ ಗ್ರಾಹಕರ ಆಯ್ಕೆಗೆ ತಕ್ಕ೦ತೆ ತಯಾರಿಸಿ ಕೊಡುತ್ತಾರೆ. ಇವರ ಉದ್ದಿಮೆಯಲ್ಲಿ ನಿತ್ಯವೂ ಹೊಸ ಟ್ರೆಂಡ್ ಬರುತ್ತದೆ ಅದನ್ನ ಇವರ ಮಗ ಗಿರಿ ಮಾರುಕಟ್ಟೆ ಮಾಡುತ್ತಾರೆ. ಇವರಲ್ಲಿ 2500 ರಿಂದ 2 ಲಕ್ಷದ 50 ಸಾವಿರದ ವರೆಗಿನ ಹಾಸಿಗ...