# ಕೆಳದಿ ಅರಸರಾದ ರಾಜಾ ವೆಂಕಟಪ್ಪನಾಯಕರ ಎರಡನೆ ಪತ್ನಿ ರಾಣಿ ಚಂಪಕಳನ್ನ ವೇಶ್ಯೆ ಎಂದು ಬರೆಯುವುದು ಇತಿಹಾಸ ತಿರುಚುವ ಕೆಲಸ#
#ಚಂಪಕ ವೇಶ್ಯೆ ಎಂದು ಬರೆಯುವುದು ಇತಿಹಾಸಕ್ಕೆ ಅಪಚಾರ.#
ಇವತ್ತಿನ ಪತ್ರಿಕೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಕೆಳದಿ ಅರಸರಲ್ಲಿ ದೀಘ೯ ಕಾಲ ಆಡಳಿತ ನಡೆಸಿ ಅನೇಕ ಅಭಿವೃದ್ದಿ ಮಾಡಿದ (ಈ ಬಗ್ಗೆ ಹೆಚ್ಚು ಪ್ರಚಾರ ಆಗಿಲ್ಲ) ರಾಜಾ ವೆಂಕಟಪ್ಪಾ ನಾಯಕ ಆನಂದಪುರಂನ ರಾಜ ಮಾಗ೯ದಲ್ಲಿ ನಿತ್ಯ ಸುಂದರವಾದ ರಂಗೋಲಿ ಹಾಕುತ್ತಿದ್ದ ಸುಂದರಿ ಚಂಪಕಳನ್ನ ಮೊಹಿಸಿ ಎರಡನೆ ಪತ್ನಿಯಾಗಿಸುತ್ತಾರೆ, ಈ ಬಗ್ಗೆ ಇಟಲಿ ಪ್ರವಾಸಿ ಡೆಲೊ ವಲ್ಲೆ ಕೂಡ ಬರೆದಿದ್ದಾರೆ, ಚಂಪಕಳ ವಿವಾಹದಿಂದ ರಾಜಾ ವೆಂಕಟಪ್ಪ ನಾಯಕರ ರಾಣಿ ಭದ್ರಮ್ಮ ಬಹಳ ವಿರೋದ ಮಾಡಿದರು (ಚೆಂಪಕ ಕೆಳಜಾತಿಯವಳು ಎಂಬ ಕಾರಣದಿಂದ) ಎಲ್ಲೂ ಚಂಪಕ ವೇಶ್ಯೆ ಎಂಬ ಉಲ್ಲೇಖ ಯಾವ ದಾಖಲೆಯಲ್ಲು ಇಲ್ಲ ಆದರೂ ಶಿವಮೊಗ್ಗ ಜಿಲ್ಲೆಯ ಕೆಲ ಪತ್ರಕತ೯ರು ಇತಿಹಾಸಕ್ಕೆ ಅಪಚಾರ ಮಾಡುವಂತೆ ಚಂಪಕಳನ್ನ ವೇಶ್ಯೆ ಎಂದು ಬರೆಯುವುದನ್ನ ನಾನು ಪ್ರತಿ ಭಟಿಸುತ್ತೇನೆ ಮತ್ತು ಎಲ್ಲಾ ಪತ್ರಿಕೆಗಳಲ್ಲಿ ವಿನಂತಿಸುತ್ತೇನೆ ಈ ರೀತಿ ಚಂಪಕ ಎಂಬ ಕೆಳದಿ ಅರಸರ ಎರಡನೆ ಪತ್ನಿಯನ್ನ ಇತಿಹಾಸ ತಿರುಚಿ ಅವಮಾನಿಸುವ ವರದಿ ಪ್ರಕಟಿಸ ಬಾರದು ಮತ್ತು ಈ ಬಗ್ಗೆ ಸೃಷ್ಟಿಕರಣ ಪ್ರಕಟಿಸ ಬೇಕಾಗಿ ಪ್ರಾಥಿ೯ಸುತ್ತೇನೆ.
http://arunprasadhombuja.blogspot.in/2016/12/blog-post_20.html?m=1
Comments
Post a Comment