# ಜನಾದ೯ನ ಪೂಜಾರರ ಆತ್ಮ ಚರಿತ್ರೆ#
ಬಾಲ್ಯದಲ್ಲಿ ಈ ಬಾಲಕ ..ಗೆಳೆಯನ ಮನೆಯ ರಸ್ತೆಯಲ್ಲಿ ಇರುವ ಬಾವಿಕಟ್ಟಿಗೆ ಕೈ ಸವರಿ ಕೊಂಡು ಹೋದದ್ದು ನೋಡಿ ಆ ಮನೆಯವರು ಆಳದಲ್ಲಿ ನೀರು ಇದ್ದ ಆ ಬಾವಿಯ ನೀರು ತೆಗೆದು ಹೊರ ಚೆಲ್ಲುತ್ತಾರೆ.
ಒಮ್ಮೆ ಇವರ ತಂದೆ ಜೊತೆ ಹೋಟೆಲ್ಗೆ ಹೋದಾಗ ಹೋಟೆಲ್ ಮಾಲಿಕ ಚಹಾ ಗೆರೆಟೆ ಚಿಪ್ಪಿನಲ್ಲಿ ನೀಡುತ್ತಾನೆ.
ಮಂಗಳೂರಿನ ಪ್ರಸಿದ್ದ ದೇವಾಲಯದಲ್ಲಿನ ಚಿಲುಮೆ ನೀರು ತರಲು ಹೋದಾಗ ಅಲ್ಲಿನ ಏಳು ಕೊಳಗಳಲ್ಲಿ ಮಿಂದು ದೇವರಿಗೆ ಕೈ ಮುಗಿಯುವಾಗ ಅಲ್ಲಿನ ಅಚ೯ಕ ವೃಂದ ಕುತ್ತಿಗೆ ಹಿಡಿದು ಹೊರದಬ್ಬುತ್ತಾರೆ.
ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ಹಂತದಲ್ಲಿ ಈತನಿಗೆ ದರಿಸಲು ಅಂಗಿ ಇಲ್ಲ, ಒಂದೇ ಒಂದು ಚೆಡ್ಡಿ ಮಾತ್ರ ಇದ್ದಿದ್ದು.
ಬಿಲ್ಲವರಿಗೆ ದೇವರಿಲ್ಲ, ಅವರು ದೇವರನ್ನು ನೋಡಬಾರದು ಎಂಬುದು ಅವತ್ತಿನ ಪದ್ದತಿ ಆಗಿತ್ತು.
ಮುಂದೆ ಈ ಬಾಲಕ ಮುಂಬೈನಲ್ಲಿ ವಕೀಲಿ ಕಲಿತು ಮಂಗಳೂರಿನ ಖ್ಯಾತ ವಕೀಲರಾಗಿ ಕಾಂಗ್ರೇಸ್ ಪಕ್ಷದಿಂದ ಸಂಸದರಾಗಿ ಪೈನಾನ್ಸ್ ಮಂತ್ರಿ ಆಗಿ ದೇಶದಾದ್ಯ೦ತ ಬಡವರಿಗೆ ಸಾಲ ಮೇಳ ಮಾಡಿ ಪ್ರಖ್ಯಾತರಾದ ಜನಾದ೯ನ ಪೂಜಾರರ ಆತ್ಮಚರಿತ್ರೆ ಭಾರತದ ಬಡ ಹಿಂದುಳಿದ ಶೂದ್ರನ ದೀಘ೯ ಸಂಘಷ೯ ಜೀವನದ ಕಥೆ.
ಆಗ ಭಾರತದ ಬ್ಯಾಂಕುಗಳು ಬಡವರು, ಪರಿಶಿಷ್ಟ ಜಾತಿಯವರು, ಅಲ್ಪಸಂಖ್ಯಾತರು ಮತ್ತು ಮುಸ್ಲಿಂರಿಗೆ ಸಾಲ ನೀಡಿದರೆ ಬ್ಯಾಂಕ್ ದಿವಾಳಿ ಆಗುತ್ತೆ ಎಂದು ಬಾವಿಸಿದ ದಿನಗಳು, ಆಗ ಬ್ಯಾಂಕ್ ಗಳಿಗೆ ಶ್ರೀಮಂತರು ಪಾವತಿ ಮಾಡದ ಬಾಕಿ ಒಂದು ಲಕ್ಷದ ಇಪ್ಪತೈದು ಸಾವಿರ ಕೋಟಿ ಆದರೆ ಅದರ ವಸೂಲಾತಿಗೆ ಕ್ರಮ ಕೈಗೊಳ್ಳದ ಬ್ಯಾಂಕು ಬಡವರಿಗೆ ಮಾತ್ರ ಸಾಲ ನೀಡಲು ತಯಾರಿರಲಿಲ್ಲ.
ಬಡವರಿಗೆ ಸಾಲ ನೀಡಿದರೆ ಲಕ್ಷಾ೦ತರ ಎಂಟ್ರಿ ಮಾಡಬೇಕು ಅದೇ 500 ಕೋಟಿ ಒಬ್ಬನಿಗೆ ಸಾಲ ನೀಡಿದರೆ ಒಂದೇ ಎಂಟ್ರಿ ಸಾಕು ಎಂಬುದು ಸಿಬ್ಬ೦ದಿಗಳ ಮಾತಾಗಿತ್ತು.
ಪೂಜಾರರ ಸಾಲ ಮೇಳವನ್ನ ಇವತ್ತು ಅನ್ನ ಬಾಗ್ಯ ವಿರೋಧಿಸಿದಂತೆ ಬಾರೀ ವಿರೋದ ವಿರೋದ ಪಕ್ಷಗಳಿಂದ ಎದುರಾದರೂ ಪೂಜಾರರು ದೃತಿಗೆಡಲಿಲ್ಲ, ಆಂದ್ರ ಪ್ರದೇಶದ ಮೆಹಬೂಬನಗರದಲ್ಲಿ ಸಾಲ ಮೇಳ ವಿರೋಧೀಸಿದವರು ಇವರಿಗೆ ಹಿಂದಿನಿಂದ ಚಾಕುವಿನಿಂದ ಇರಿದಿದ್ದರು.
ಪಾಲಿ೯ ಮೆಂಟ್ನಲ್ಲಿ ಬಾರಿ ವಿರೋದ ವ್ಯಕ್ತವಾಯಿತು ಆದರೆ ಪೂಜಾರರ ಉತ್ತರ ಅವತ್ತು ಪ್ರದಾನ ಮಂತ್ರಿ ಇಂದಿರಾ ಗಾಂಧಿಯಿಂದ ಮೇಜು ತಟ್ಟಿ ಬೆಂಬಲ ವ್ಯಕ್ತವಾಗಿತ್ತು.
ಒಂದು ರೂಪಾಯಿ ಸಾಲ ನೀಡಿದರೆ ಶೇಖಡ 54% ಜನ ನೋಟಿಸ್ ಕೊಡದೆ ಸಾಲ ಕಟ್ಟುತ್ತಾರೆ, ಶೇಕಡ 20 % ಜನ ನೋಟಿಸ್ ಕೊಟ್ಟ ಕೂಡಲೆ ಹಣ ಪಾವತಿ ಮಾಡುತ್ತಾರೆ, ಶೇಕಡ 20 % ಜನರದ್ದು ರೆವಿನ್ಯೂ ಮಸೂಲಿ ಮಾಡಿದ ಹಾಗೆ ಜಪ್ತಿ ಮಾಡುತ್ತಾರೆ, ಶೇಕಡ 6% ಗ್ಯಾರOಟಿ ಸ್ಕಿಂ ಗೆ ಬರುತ್ತೆ. ಶ್ರೀಮಂತರಿಗಾದರೆ ಕೇಸ್ ಹಾಕುವುದುಂಟು, ಬಡವರಿಗೆ ಏನಿಲ್ಲ ಹೋಗಿ ಸಾಮಾನು ಎಳೆದುಕೊಂಡು ಬರುವುದು ಉಳಿದ ಶೇಕಡ 10% ಇನ್ಷೂ ರೆನ್ಸ್ ಗ್ಯಾರOಟಿ ಸ್ಕಿO ಪ್ರೀಮಿಯಮ್ ಅವರೆ ಕಟ್ಟಿರುತ್ತಾರೆ ಹಾಗಾಗಿ ಬಡವರಿಗೆ 1 ರೂಪಾಯಿ ಸಾಲ ನೀಡಿದರೆ ಒಂದು ಪೈಸೆಯೂ ನಷ್ಟವಿಲ್ಲ ಎಂಬುದು ಪೂಜಾರರ ಅಂಕಿ ಅಂಶದ ಸಂಸತ್ತಿನ ಆ ದಿನದ ಬಾಷಣ.
ನಂತರ ರಾಜೀವ್ ಗಾಂಧಿ ಸಂಪುಟದಲ್ಲಿ ಗ್ರಾಮೀಣಬಿವೃದ್ದಿ ಸಚಿವರಾಗಿ ಪಂಚಾಯತ್ ರಾಜ್ ಕಾಯ್ದೆ ಮಸೂದೆ ಮಂಡನೆ ಸಂಸತ್ನಲ್ಲಿ ಅನುಮೊದನೆಗೊಂಡು ರಾಜ್ಯ ಸಭೆಯಲ್ಲಿ ಒಂದು ಮತದಲ್ಲಿ ತಿರಸ್ಕರಿಸಲಾಯಿತು ನಂತರ ನರಸಿಂಹ ರಾವ್ ಸಕಾ೯ರದಲ್ಲಿ ಮಂಡನೆ ಆಗಿ ಜಾರಿ ಆಯಿತು.
ಬಾಲ್ಯದ ಜಾತಿ ನಿಂದನೆಯ ಕೆಟ್ಟ ಅನುಭವವೇ ಮುಂದೆ ಮಂಗಳೂರಿನ ಗೋಕಾಣ೯ನಾಥ ದೇವಸ್ಥಾನ ನಿಮಾ೯ಣಕ್ಕೆ ಪ್ರೇರಣೆ ಆಗಿರಬಹುದು, ಕುದ್ರೋಳಿ ಗೋಕಣ೯ನಾಥ ದೇವಸ್ಥಾನ 1908ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಮೃತ ಹಸ್ತದಿಂದ ಶಂಕುಸ್ಥಾಪನೆಗೊಂಡು ಅವರಿಂದಲೇ ಉದ್ಘಾಟನೆಗೊಳಪಟ್ಟ ಕನಾ೯ಟಕದ ಏಕೈಕ ದೇವಾಲಯ ಇವರ ಶ್ರಮದಿಂದ ಈಗ ಮಂಗಳೂರಿನ ಪ್ರಸಿದ್ದ ಯಾತ್ರ ಸ್ಥಳವಾಗಿದೆ.
ಇಲ್ಲಿ ಜಾತಿಯತೆ ಇಲ್ಲ, ಮೂಡನಂಬಿಕೆ ಆಚರಣೆ ಇಲ್ಲ, ವಿದವೆಯರೇ ಅಚ೯ಕರು.
ಮಂತ್ರಿ ಆಗಿದ್ದರು ತಮ್ಮ ಮಕ್ಕಳನ್ನ ತಾವು ಓದಿದ ಮOಗಳೂರಿನ ಬೊಕ್ಕ ಪಟ್ಟಣದ ಸಕಾ೯ರಿ ಮುನಿಸಿಪಾಲಿಟಿ ಶಾಲೆಯಲ್ಲೇ ವಿದ್ಯಾಭ್ಯಾಸ ನೀಡಿದರು ಅಲ್ಲಿ ಬಡವರ ಮಕ್ಕಳೆ ಇರುವುದು, ಎಲ್ಲಾ ಜಾತಿ ದಮ೯ದವರಿದ್ದಾರೆ ತಮ್ಮ ಮಕ್ಕಳಿಗೆ ಬಡತನ ಗೊತ್ತಾಗಲಿ ಎನ್ನುವ ಉದ್ದೇಶ ಅವರದ್ದು.
ಈ ಆತ್ಮಚರಿತ್ರೆ ಬರೆಯಲು ನಮ್ಮ ಜಿಲ್ಲೆಯವರೇ ಆದ ಪ್ರಜಾವಾಣಿ ಹಿರಿಯ ವರದಿಗಾರರಾದ ಶ್ರೀ ಲಕ್ಷಮಣ ಕೊಡಸೆ ಪ್ರಮುಖ ಪಾತ್ರವಹಿಸಿದ್ದಾರೆ.
ರಾಜಕೀಯ ಘಟನೆಗಳನ್ನ ಉಲ್ಲೇಖಿಸಿದ್ದಾರೆ ಅದಕ್ಕೆ ಪರ ವಿರೋದಗಳ ಅನೇಕ ಚಚೆ೯ ಉಂಟಾಗಿದೆ .
ಒಂದೇ ತಿಂಗಳಲ್ಲಿ ಮರು ಮುದ್ರಣಗೊಂಡಿರುವ ಈ ಆತ್ಮಚರಿತ್ರೆ ಓದಿದದವರಿಗೆ ಪೂಜಾರರ ಸಾಥ೯ಕ ಜೀವನ, ಹಠಮಾರಿತನ ಮತ್ತು ಸಿದ್ದಾ೦ತಕ್ಕಾಗಿ ರಾಜಿ ಆಗದಿದ್ದಕ್ಕಾಗಿ ರಾಜಕೀಯ ದುರಂತಕ್ಕೆ ಈಡಾದರೂ ಸುಖ ಮತ್ತು ಶಾಂತಿಯ ನೆಮ್ಮದಿಯ ಆರೋಗ್ಯವಂತ ನಿವೃತ್ತ ಜೀವನ ಅವರದ್ದಾಗಿದೆ.
Comments
Post a Comment