# 'ಜನಪರ ಹೋರಾಟಗಾರ, ಪತ್ರಕತ೯ ಹಾಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ್# ಇವರು ಜಾತ್ಯತೀತ ಹಿನ್ನೆಲೆಯವರು, ಬಡತನದಿಂದ ಬಂದವರು ಇವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು, ತಾಯಿ ಮಾದರಿ ಶಿಕ್ಷಕಿಯಾಗಿದ್ದರು, ಇವರು ವಿವಾಹ ಆಗಿರುವುದು ಲಿ೦ಗಾಯಿತರನ್ನ. ಇವರು ಹುಟ್ಟಿದ್ದು ತೀಥ೯ಳ್ಳಿಯ ಛತ್ರ ಕೇರಿಯ ಬಾಡಿಗೆ ಮನೆಯಲ್ಲಿ ಪ್ರೌಡ ಶಿಕ್ಷಣ ಶಿಕಾರಿಪುರದಲ್ಲಿ, ಪದವಿ ಸಾಗರದ ಲಾಲ್ ಬಹುದೂರು ಕಾಲೇಜಿನಲ್ಲಿ, ಇವರ ಹೆಸರ ಮುಂದಿನ ತೀ. ಅಂದರೆ ತೀಥ೯ಹಳ್ಳಿ. ಸಾಗರದಲ್ಲಿ ವಿದ್ಯಾಥಿ೯ ಮುಖಂಡರಾಗಿದ್ದಾಗ ಸಾಗರ ಪೋಲಿಸ್ ಠಾಣೆಯಲ್ಲಿ ರಾಮ ಎಂಬಾತನನ್ನ ಬೀಮನ ಕೋಣೆ ಸಮೀಪದ ಹಳ್ಳಿಯಿಂದ ಕಳ್ಳತನದ ದೂರಿನನ್ವಯ ಕರೆ ತಂದು ಬಾಯಿ ಬಿಡಿಸಲು ಆ ಕಾಲದ ಶಿಕ್ಷೆ ನೀಡಿದಾಗ ರಾಮ ಸತ್ತು ಹೋಗಿದ ಲಾಕ್ಅಪ್ ಡೆತ್ ಪ್ರಕರಣದಲ್ಲಿ ಇಡೀ ವಿದ್ಯಾಥಿ೯ ಸಮುದಾಯವನ್ನ ಚಳವಳಿಗೆ ತಂದು ನ್ಯಾಯಕ್ಕಾಗಿ ಹೋರಾಟ ಮಾಡಿದ ತೀ.ನಾ.ಶ್ರೀನಿವಾಸ್ ಸಾಗರದ ಮನೆ ಮಾತಾದರು ಯುವಕರಿಗೆ ಆದಶ೯ರಾದರು. ನಂತರ ಕಾಗೋಡು ಹೋರಾಟದ ನೇತಾರರಾದ ಹೆಚ್.ಗಣಪತಿಯಪ್ಪರ ನ್ಯಾಯದ ತಕ್ಕಡಿ ದಿನ ಪತ್ರಿಕೆ ಮುಖಾಂತರ ಪತ್ರಕತ೯ ರಾಗಿ ಜನಪ್ರಿಯರಾದರು ನಂತರ ಇದೇ ಪತ್ರಿಕೆ ಇವರ ಸಂಪಾದಕತ್ವದಲ್ಲಿ ತಾಲ್ಲೂಕಿನಲ್ಲಿ ಮನೆ ಮಾತಾಯಿತು, ಎಲ್ಲಾ ಹೋರಾಟಗಾರರಿಗೆ ಇವರ ಕಛೇರಿ ಮನೆ ಆಯಿತು....