ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿನ ಶ್ರೀ ರಾಮ ಚಂದ್ರಾಪುರ ಮಠ ಹವ್ಯಕ ಬ್ರಾಹ್ಮಣರ ಮಠ ಇಲ್ಲಿನ ಹಾಲಿ ಸ್ವಾಮಿಗಳ ಮೇಲೆ ಅಪಾದನೆಗಳು ಅನೇಕ, ನ್ಯಾಯಾಲಯಗಳಲ್ಲಿ ಪರ ವಿರೋದದ ಅನೇಕ ವ್ಯಾಜ್ಯಗಳಿವೆ. ರಾಜ್ಯ ಮಟ್ಟದ ಪತ್ರಿಕೆ, ಟೀವಿ ಮಾಧ್ಯಮಗಳಲ್ಲಿ ಈ ಮಠದ ಸ್ವಾಮಿಗಳ ಬಗ್ಗೆ ಅನೇಕ ವರದಿ ಪ್ರಕಟವಾಗಿದೆ, ಇಲ್ಲೂ ಪರ ವಿರೋದ ಗುಂಪುಗಾರಿಕೆ ಇದೆ. ಭಕ್ತರಲ್ಲೂ ಪರ ವಿರೋದ ಜೊತೆ ಅನೇಕ ಶಂಕೆಗಳಿವೆ, ಇಷ್ಟೆಲ್ಲ ಅಪಾದನೆ ಸತ್ಯವೇ? ಸತ್ಯ ಆಗಿದ್ದಲ್ಲಿ ಪೀಠ ತ್ಯಾಗ ಮಾಡಲಿ ಎಂದು ಒಂದು ಗುಂಪು ಪ್ರತಿಪಾದಿಸಿದರೆ ಇನ್ನೊಂದು ಇದೆಲ್ಲ ಸುಳ್ಳು ಅನ್ನುತ್ತೆ ಸತ್ಯ ಶೋದ ಮಂಡಳಿ ಎಂಬ ಈ ಮಠದ ಭಕ್ತರು ಅನೇಕ ಸಾಕ್ಷಿ, ಪೋಟೋಗಳನ್ನ ಪೇಸ್ ಬುಕ್ ಗಳಲ್ಲಿ ಹಾಕಿದ್ದಾರೆ, ಒಂದು ಬ್ರಹ್ಮಚಾರಿ ಸ್ವಾಮಿಜಿ ಮಹಿಳೆಯರನ್ನ ಮೈ ಮುಟ್ಟುವುದು ಅಕ್ಷಮ್ಯ ಅಪರಾದ, ಇದರಿಂದ ಇವರು ಪೀಠದಲ್ಲಿ ಇರಲು ಅಹ೯ರಲ್ಲ ಎಂಬ ವಾದ ಮಂಡಿಸಿದ್ದಾರೆ. ಅನೇಕ ಧಮ೯ ಗ್ರಂಥಗಳನ್ನ ಉಲ್ಲೇಖಿಸಿದ್ದಾರೆ, ಇವೆಲ್ಲ ವಾದ ವಿವಾದ ಹವ್ಯಕ ಬ್ರಾಹ್ಮಣರಲ್ಲೇ ಚಚೆ೯ ಆಗುತ್ತಿತ್ತು ಹಾಗಾಗಿ ಶೂದ್ರರಲ್ಲಿ ಸರಿಯಾದ ಮಾಹಿತಿ ಇರಲಿಲ್ಲ ಈಗ ಅನೇಕ ಶೂದ್ರರು ಈ ಬಗ್ಗೆ ಆಸಕ್ತಿ ವಹಿಸಿ ಏನು ಇಲ್ಲಿನ ವಿದ್ಯಾಮಾನ ಅನ್ನುವ ಕುತೂಹಲಿಗಳಿಗಾಗಿ ಇದನ್ನ ಬರೆಯಲಾಗಿದೆ, ವಿವಾದ ಸಾಕ್ಷಿಯಾಗಿ ಅವರುಗಳಲ್ಲಿ ಹರಿದಾಡುತ್ತಿರುವ ಪೋಟೋ ಇಲ್...