# ತುಮರಿ ಸೇತುವೆ, ಶಿವಮೊಗ ತಾಳಗುಪ್ಪ ರೈಲು ಮಾಗ೯ ಬ್ರಾಡ್ ಗೇಜ್ ಗೆ ಹಣ ಬಿಡುಗಡೆ, ಹಂದಿಗೋಡು ಕಾಯಿಲೆ ಪೀಡಿತರಿಗೆ ಪುನರ್ ವಸತಿ ಮತ್ತು ಜೋಗ ಜಲಪಾತ ಪ್ರವಾಸಿ ತಾಣದ ಅಭಿವೃದ್ದಿಗಾಗಿ 2004ರಲ್ಲಿ ನಾನು ನಡೆಸಿದ ಪಾದಯಾತ್ರೆ.# 21- ಜನವರಿ -2004ರಿಂದ 31- ಜನವರಿ -2004 ರ ವರೆಗೆ 11 ದಿನಗಳ ಕಾಲ ಸಾಗರ ತಾಲ್ಲೂಕಿನಾದ್ಯ೦ತ ಮೇಲಿನ ಬೇಡಿಕೆಗಳ ಇಟ್ಟುಕೊಂಡು ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಿದ್ದು ಇವರೆಗೆ ಯಾರು ಮುರಿಯದ ದಾಖಲೆ ಆಗಿ ಉಳಿದಿದೆ. ಸುಮಾರು 360 ಕಿ.ಮಿ. ಆನಂದಪುರಂನ ಮೂರುಘ ಮಠದಿOದ (ಆಚಾಪುರ ಗ್ರಾಮ ಪಂಚಾಯತನಿಂದ)ಪ್ರಾರ೦ಬಿಸಿ ಯಡೇಹಳ್ಳಿ, ಆನಂದಪುರಂ, ಹೊಸೂರು ಗ್ರಾಮ ಪಂಚಾಯತ ನಿಂದ ಗೌತಮಪುರ ಗ್ರಾಮ ಪಂಚಾಯತ, ಅಲ್ಲಿ೦ದ ಹಿರೇಬಿಲ ಗುಂಜಿ ತ್ಯಾಗತಿ೯, ಪಡಗೋಡು, ಕೆಳದಿ, ಮಾಸೂರು, ಹಿರೇ ನೆಲ್ಲೂರು, ಕಾಗೋಡು, ಸೈ ದೂರು,ಕಾನ್ಲೆ, ಶಿರವಂತೆ, ಯಡ ಜಿಗಳೆಮನೆ, ಖಂಡಿಕ, ತಾಳಗುಪ, ತಲವಾಟ, ಕಾಗ೯ಲ್, ಜೋಗ, ಅರಲ ಗೋಡು, ಕೋಗಾರ್, ಸಂಕಣ್ಣ ಶಾನು ಬೋಗ, ಹೊಸ ಕೊಪ್ಪ, ತುಮರಿ, ಹುಲಿ ದೇವರ ಬನ, ಬೇಸೂರು, ಆವಿನಳ್ಳಿ, ಹಳೆ ಇಕ್ಕೆ ರಿ, ಬೀಮನ ಕೋಣೆ, ಹೆಗ್ಗೋಡು, ಉಳ್ಳುರು ಮಾಗ೯ವಾಗಿ ಸಾಗರ ತಹಸಿಲ್ದಾರ್ ಕಚೇರಿ ತಲುಪಿ ಮನವಿ ನೀಡಿದ ಕಾಯ೯ಕ್ರಮ ಇದಾಗಿತ್ತು. ಈ ಪಾದ ಯಾತ್ರೆಗೆ ಪ್ರೇರಣೆ ಮಾಜಿ ಶಾಸಕರಾಗಿದ್ದ ಎಲ್.ಟಿ.ಹೆಗ್ಗಡೆಯವರು ಒಮ್ಮೆ ಅವರ ಮನೆಯಲ್ಲಿ ಅವರನ್ನ ಬೇಟಿ ಆದಾಗ ಅವರು ಅವರ ಹದಿ ವಯಸಲ್ಲ...