#ಡಾಕ್ಟರ್_ಅಂಜನಪ್ಪ
#ಸಮಾಜದಲ್ಲಿ_ಉತ್ತುಂಗಕ್ಕೆೇರಿದರೂ
#ಬಾಲ್ಯದ_ಅವರ_ಕನಸು_ಓದಿ_ಶಿಕ್ಷಕನಾಗಬೇಕು
#ಒಳ್ಳೆ_ಉಡುಗೆ_ತೊಡುಗೆ_ತೊಡಬೇಕು
#ಆದರೆ_ಅವರು_ತಲುಪಿದ್ದು_ಅಂತರಾಷ್ಟ್ರೀಯ_ಶ್ರೇಷ್ಟ_ಸರ್ಜನ್_ಸಾಲಿಗೆ
#ಕೆಂಪೆಗೌಡ_ಇನ್ಸ್ಟಿಟ್ಯೂಟ್_ಆಫ್_ಮೆಡಿಕಲ್_ಸೈನ್ಸ್_ಚೇರ್ಮನ್_ಹುದ್ದೆ_ತನಕ_ಸಾಧನೆ.
#HulikalNataraj #DrAnjanappa #Vtswamy #bdravi #kimshospital #bangalore #hnnarasimhaia #pavadabayalu
ಶ್ರೀಮಂತಿಕೆ, ಅಧಿಕಾರ ಮತ್ತು ಪ್ರಖ್ಯಾತಿ ಪಡೆದ ನಂತರ ಅನೇಕರಿಗೆ ತಮ್ಮ ಅಕ್ಕಪಕ್ಕದವರ ಮತ್ತು ಜೊತೆಗಾರರ ಗುರುತು ಸಿಗವುದಿಲ್ಲ.
ಇಂತಹ ಕಾಲದಲ್ಲಿ ರಾಜ್ಯದ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆ ಆಗಿರುವ #ಕೆಂಪೇಗೌಡ_ಇನ್ಸ್ಟಿಟ್ಯೂಟ್_ಆಫ್_ಮೆಡಿಕಲ್_ಸೈನ್ಸ್ ಸಂಸ್ಥೆಯ #ಚೇರ್ಮನ್ ಆಗಿರುವ #ಡಾಕ್ಟರ್_ಅಂಜನಪ್ಪ ಅವರದ್ದು ವಿಭಿನ್ನ ಮತ್ತು ಜನಸಾಮಾನ್ಯರ ಜೊತೆಯ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡಿದ್ದಾರೆ.
ತಾನು ಹುಟ್ಟಿದ ಮಣ್ಣು ಮರೆಯದ ಸಾಧಕರು ಇವರು, ವಿಚಾರವಾದಿ ಹೆಚ್ ಎನ್ ನರಸಿಂಹಯ್ಯ ಅವರ ವಿದ್ಯಾರ್ಥಿ ಆಗಿದ್ದವರು.
ಬಾಲ್ಯದಲ್ಲಿ ಅತ್ಯಂತ ಬಡತನದಲ್ಲಿ ಬೆಳೆದವರು ಬಾಲ್ಯದ ಅವರ ಕನಸು ಓದಿ ದೊಡ್ಡವನಾದ ಮೇಲೆ ಶಿಕ್ಷಕನಾಗಬೇಕು, ಒಳ್ಳೆಯ ಉಡುಪು ಧರಿಸಬೇಕು ಹಾಗು ಅಂತದ್ದನ್ನ ಖರೀದಿಸಬೇಕು ಅನ್ನುವುದಾಗಿತ್ತಂತೆ.
ಆದರೆ ಅವರ ನಯ -ವಿನಯ- ವಿಧೇಯತೆಗಳು, ಅವರ ಕಷ್ಟದ ದಿನಗಳನ್ನು ಮರೆಯದ ಅವರ ಮಾನವೀಯತೆ ಗುಣಗಳು ಅವರನ್ನು ಈಗ ಅಂತರರಾಷ್ಟ್ರೀಯ ಮಟ್ಟದ ಶಸ್ತ್ರ ವೈದ್ಯರನ್ನಾಗಿಸಿದೆ.
ಇವತ್ತು ರಾಜ್ಯದ ಪ್ರತಿಷ್ಠಿತ ಕೆಂಪೇಗೌಡ ಇನ್ ಸ್ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸ್ ಸಂಸ್ಥೆಯ ಚೇರ್ಮನ್ ಆಗಿದ್ದಾರೆ,ಅವರು ಕೊರೊನಕಾಲದಲ್ಲಿ ಪ್ರಾರಂಭಿಸಿದ ಅವರ ಯೂಟ್ಯೂಬ್ ಕೋಟ್ಯಾಂತರ ಜನರನ್ನು ತಲುಪಿತು ಅದರಲ್ಲಿ ಅವರು ಜನರ ಆರೋಗ್ಯದ ಬಗ್ಗೆ ಮತ್ತು ಸಮಾಜದಲ್ಲಿರುವ ಶೋಷಣೆಯ ವಿರುದ್ಧ ಜನರಿಗೆ ಮಾಹಿತಿ ಕೊಡುತ್ತಾ ಬಂದಿದ್ದಾರೆ.
ಅವರು ಸಾಮಾಜಿಕ ಜಾಲತಾಣದಲ್ಲಿ ಇಷ್ಟೆಲ್ಲ ಪ್ರಸಿದ್ಧಿಯಾಗಿದ್ದರಿಂದ ರಾಜ್ಯ ಒಕ್ಕಲಿಗರ ಮಹಾ ಸಂಘದ ಚುನಾವಣೆಯಲ್ಲಿ ಸುಲಭವಾಗಿ ಗೆದ್ದು ಬಂದರು ಆ ಸಂಸ್ಥೆಯ ನಿರ್ದೇಶಕರೂ ಆದರು.
ಅವರು ಎಲ್ಲೇ ಹೋದರು ಜನ ಅವರನ್ನು ಗುರುತಿಸುತ್ತಾರೆ ಆದರೆ ಪ್ರಸಿದ್ಧಿಯ ಹಮ್ಮು- ಬಿಮ್ಮು ಅವರ ಹತ್ತಿರ ಬಂದಿಲ್ಲ.
ಅವರ ತಂದೆ ಎರಡನೇ ತರಗತಿವರೆಗೆ ಓದಿದವರು, ಇವರ ತಾಯಿ ಶಿಕ್ಷಣ ಪಡೆಯಲಾಗದವರು.
ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ ಉಪಾಧ್ಯಕ್ಷರು ಆಗಿದ್ದಾರೆ, ಈ ಸಂಸ್ಥೆಯ ಅಧ್ಯಕ್ಷರಾದ ಪವಾಡ ಬಯಲು ಖ್ಯಾತಿಯ #ಹುಲಿಕಲ್_ನಟರಾಜ್ ಮತ್ತು ಆ ಸಂಸ್ಥೆಯ ಪದಾಧಿಕಾರಿಗಳ ಜೊತೆ ನನ್ನ ಕಛೇರಿಗೆ ಬಂದಿದ್ದರು.
ತಮ್ಮ ಮುಂದಿನ ಜೀವನದಲ್ಲಿ ರಾಜ್ಯದ ಜನತೆಗೆ ಮೂಡನಂಬಿಕೆಯ ವಿರುದ್ಧ ಜನಜಾಗ್ರತಿ ಮಾಡುವ ಉದ್ದೇಶ ಹೊಂದಿದ್ದಾರೆ ಅದಕ್ಕಾಗಿ ಅವಕಾಶ ನೀಡಿದ ಹುಲಿಕಲ್ ನಟರಾಜ್ ರವರನ್ನು ಅಭಿನಂದಿಸುತ್ತಾರೆ.
ನಮ್ಮ ಸಂಸ್ಥೆಯ ವತಿಯಿಂದ ಅವರಿಗೆ ಶಾಲು ಹೊದಿಸಿ ಗೌರವ ಸಮರ್ಪಿಸಿ ನಮ್ಮ #ಮಲ್ಲಿಕಾ_ವೆಜ್_ರೆಸ್ಟೋರೆಂಟ್ ನ ಉಪಹಾರ ಚಹಾ ದೊಂದಿಗೆ ಅವರನ್ನ ಬೀಳ್ಕೊಟ್ಟೆವು.
Comments
Post a Comment