‘ಸಮಾಚಾರ ಪತ್ರಿಕೆಯ ಕೃಪೆಯಿಂದ. ಇದು ದಶಕದ ಹೋರಾಟ’: ರಾಘವೇಶ್ವರ ಸ್ವಾಮಿಯಿಂದ ಗೋಕರ್ಣ ಕೈತಪ್ಪಿದ್ದು ಹೇಗೆ? COVER STORY ‘ಇದು ದಶಕದ ಹೋರಾಟ’: ರಾಘವೇಶ್ವರ ಸ್ವಾಮಿಯಿಂದ ಗೋಕರ್ಣ ಕೈತಪ್ಪಿದ್ದು ಹೇಗೆ? ದಶಕದ ಹೋರಾಟ ಫಲ ನೀಡಿದ್ದು ಜಿಲ್ಲಾಧಿಕಾರಿ ಒಳಗೊಂಡ ಸಮಿತಿಯ ಕೈಗೆ ಗೋಕರ್ಣ ದೇವಸ್ಥಾನದ ಚುಕ್ಕಾಣಿಯನ್ನು ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಇಷ್ಟಕ್ಕೂ ಹೋರಾಟ ಹಾದಿ ಹೇಗಿತ್ತು? .. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಇತಿಹಾಸ ಪ್ರಸಿದ್ಧ 'ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತ ರಾಘವೇಶ್ವರ ಸ್ವಾಮಿ ಪೀಠಾಧಿಪತಿಯಾಗಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದ ಕೈಗೆ ಬಂದಿತ್ತು. ಇದೀಗ 10 ವರ್ಷ ತುಂಬಲು ಎರಡು ದಿನಗಳಿರುವಾಗ ಮತ್ತೆ ದೇವಸ್ಥಾನದ ಆಡಳಿತ ಸಾರ್ವಜನಿಕರ ಕೈಗೆ ವಾಪಸ್ ಬಂದಿದೆ. ಹಸ್ತಾಂತರ ವಿವಾದ ಸದರಿ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು, 'ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ಉಪಾಧಿವಂತ ಮಂಡಳಿ' ನಡೆಸಿಕೊಂಡು ಬರುತ್ತಿತ್ತು. ಈ ಮಂಡಳಿ ‘ಬಾಂಬೆ ಪಬ್ಲಿಕ್ ಟ್ರಸ್ಟ್ ಆಕ್ಟ್’ ಅಡಿಯಲ್ಲಿ ನೋಂದಾವಣೆಯಾಗಿತ್ತು. ಆದರೆ ಈ ಟ್ರಸ್ಟಿನಲ್ಲಿದ್ದ ಐವರಲ್ಲಿ ನಾಲ್ವರು ಕಾಲಾನಂತರ ತೀರಿಕೊಂಡರು. ಕೊನೆಗೆ ಪರಂಪರಾಗತವಾಗಿ ದೇವಾಲಯದ ಆಡಳಿತ ನೋಡಿಕೊಂಡು ಬಂದ ಶ್ರೀ ವಿ.ಡಿ ದೀಕ್ಷಿತರು ಮಾತ್ರ ಉಳಿದುಕೊಂಡಿದ್ದರು. ಮುಂದೆ 2004ರಲ್ಲಿ ದೀಕ್ಷಿತರು ತೀರ...