ಕೆ.ಶಿವರಾಂ ಕನ್ನಡದಲ್ಲಿ ಐಎಎಸ್ ಮಾಡಿದ ಮೊದಲಿಗರು.
ಇವರ ಜೀವನ ಒಂದು ಹೊರಾಟ ಯಾಕೆಂದರೆ ಇವರ ಬಾಲ್ಯ ಅತ್ಯಂತ ಬಡತನದ್ದು, ದಲಿತ ಕುಟುಂಬದಲ್ಲಿ ಜನಿಸಿದ ಇವರು ಎಲ್ಲಾ ಸವಾಲುಗಳನ್ನ ಎದುರಿಸಿ ದೊಡ್ಡ ಹುದ್ದೆ ಪಡೆದ ಕಥೆ ಎಲ್ಲರಿಗೂ ಒಂದು ಪ್ರೇರಣೆ ಆಗುತ್ತದೆ.
ಶಿವಮೊಗ್ಗದ ಜಿಲ್ಲಾ ಪಂಚಾಯತ್ ಗೆ ಮುಖ್ಯ ಕಾಯ೯ ನಿವಾ೯ಹಕ ಅಧಿಕಾರಿಯಾಗಿ ಇವರು ಬಂದಾಗ ಜಿಲ್ಲಾ ಪಂಚಾಯತ್ ಸದಸ್ಯರಾದ ನಮಗೆಲ್ಲ ಕುತೂಹಲ ಆಗಷ್ಟೆ ಇವರ ಬಾ ನಲ್ಲೆ ಮದು ಚಂದ್ರಕೆ ಎಂಬ ಸಿನಿಮಾದಿಂದ ಇವರು ಖ್ಯಾತರಾಗಿದ್ದರು, ಬೆಂಗಳೂರು ಬಿಡಿಎ ಅಧಿಕಾರಿ ಆಗಿದ್ದಾಗ ಬೆಂಗಳೂರಲ್ಲಿ ಬಡವರಿಗೆ ಆಶ್ರಯ ನಿವೇಶನ ನೀಡಿ ದಾಖಲೆ ಮಾಡಿದ್ದರು, ಮೈಸೂರಿನಲ್ಲಿ ಕೂಡ ಅಭಿವೃದ್ಧಿ ಮಾಡಿ ಖ್ಯಾತರಾಗಿದ್ದರು.
ಇವರು ಶಿವಮೊಗ್ಗ ಬಂದಾಗಲೇ ನಮ್ಮ ಊರಾದ ಆನಂದಪುರಂನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಆನಂದಪುರಂನ ಕನ್ನಡ ಸಂಘದ ಆಗಿನ ಅದ್ಯಕ್ಷರಾಗಿದ್ದ ಹಾ.ಮೊ.ಬಾಷ ನೇತೃತ್ವದಲ್ಲಿ ಹಮ್ಮಿಕೊಂಡಿದ್ದೆವು. ಉದ್ಘಾಟನೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಿಂದ, ಕಾಗೋಡು ತಿಮ್ಮಪ್ಪ, ಕುಮಾರ್ ಬಂಗಾರಪ್ಪಾ, ಆಗಿನ ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಬಲ್ಕಿಶ್ ಬಾನು ಮುಂತಾದವರೆಲ್ಲ ಭಾಗವಹಿಸಿದ್ದರು,.
ಈ ಅದ್ದೂರಿ ಮತ್ತು ಯಶಸ್ವಿ ಯುವಜನ ಮೇಳ ಅತ್ಯಂತ ವಣ೯ಮಯವಾಗಿ ನಡೆಯಲು ಅವತ್ತು ಜಿಲ್ಲಾ ಪಂಚಾಯತ್ ಅಧಿಕಾರಿಯಾಗಿದ್ದ ಕೆ.ಶಿವರಾಂ ಕಾರಣ ಕತ೯ರು.
ಅವರ ಮತ್ತು ನನ್ನ ಗೆಳೆತನ ಅಪೂವ೯, ಅವರ ಜೀವನದ ಬಗ್ಗೆ ಕೇಳಿದಾಗ ಅವರಾಡಿದ ಮಾತುಗಳು .....
ವಾರದ ಮುದ್ದೆ ಊಟದಲ್ಲಿ ವಿದ್ಯಾಭ್ಯಾಸ ಮಾಡಿ ಬೆಂಗಳೂರಿನ ಸೆಂಟ್ರಲ್ ಜೈಲ್ನಲ್ಲಿ FDC ಯಾಗಿ ಕೆಲಸಕ್ಕೆ ಸೇರುತ್ತಾರೆ ಸ್ವಲ್ಪ ದಿನದಲ್ಲಿ ಅವರಿಗೆ ಅಲ್ಲಿನ ಪೋಲಿಸ್ ಅಧಿಕಾರಿಗಳ ನೋಡಿ ತಾನೂ ಡಿವೈಎಸ್ಪಿ ಆಗಬೇಕು ಅಂತ ಅನ್ನಿಸುತ್ತದೆ ಯಾಕೆಂದರೆ ಅವರಿಗೆ ಸಿಗುವ ಗೌರವ, ನಂತರ ಓದಿ ಪರೀಕ್ಷೆ ಬರೆದು Dy SP ಆಗುತ್ತಾರೆ ಮಿರಿ ಮಿರಿ ಮಿಂಚುವ ಕೆಂಪು ಬೂಟಿನಲ್ಲಿ ಜೀಪಿನಲ್ಲಿ ಬಂದಿಳಿಯುತ್ತಾರೆ ಆದರೆ ಸ್ವಲ್ಪ ದಿನದಲ್ಲೇ ಅವರಿಗೆ ಭ್ರಮನಿರಸನ ಆಗುತ್ತೆ IAS ಅಥವ IPS ಆಗಲೇ ಬೇಕು ಅನ್ನುವ ಮಹತ್ವಾಕಾಂಕ್ಷೆ ಮೂಡುತ್ತದೆ.
ಕೊನೆಗೂ ಅದನ್ನ ಸಾದಿಸುತ್ತಾರೆ ಅದು ನಮ್ಮ ರಾಜ್ಯದ ಕನ್ನಡ ಬಾಷೆಯಲ್ಲಿ ಐಎಎಸ್ ಪರೀಕ್ಷೆ ಬರೆದು ಪಾಸು ಮಾಡಿದ ಮೊದಲಿಗರೆಂಬ ದಾಖಲೆಯಲ್ಲಿ.
ಇವರ ಮನೆಯಲ್ಲಿ ರಾಗಿ ಮುದ್ದೆ ಉಪ್ಪು ಸಾರು ಊಟ ಮಾಡಿದ್ದೆ ಇವತ್ತು ನನ್ನ ಅತಿಥಿ ಆಗಿ ಬಿರಿಯಾನಿ ತಿಂದದ್ದು ನನಗೆ ಅತ್ಯಂತ ಸಂತೋಷವಾಯಿತು.
ಇವರ ಜೀವನ ಒಂದು ಸಾದನೆ ಯುವ ಜನರಿಗೆ ಪ್ರೇರಣೆ ಕೂಡ ಪ್ರಯತ್ನ ಮಾಡಿದರೆ ಏನನ್ನು ಸಾದಿಸಬಹುದು ಎಂಬುದಕ್ಕೆ ಒಂದು ಉದಾಹರಣೆ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment