#ಟಿಪ್ಪೂವಿನ ಬಗ್ಗೆ ನಮ್ಮ ಊರಿನ ಚರಿತ್ರೆ ನೋಡಿ# ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದ ಕೋಟೆಯನ್ನ ಬ್ರಿಟಿಷರು ಟಿಪ್ಪು ವಿನ ಹೈದರ್ ಖಾನ್ ರಿಂದ ವಶಪಡಿಸಿಕೊಂಡು ಅವರ ಧ್ವಜ ಹಾರಿಸುತ್ತಾರೆ ನಂತರ ಸುಂದರವಾದ 300ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಕೋಟೆಯ ಕಂದಕಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ( ಕಾರಣ ಬ್ರಿಟಿಷ್ ಸೈನಿಕರ ಅನಾಚಾರ ) ಈ ವಿಚಾರ ತಡವಾಗಿ ಟಿಪ್ಪೂವಿಗೆ ಗೊತ್ತಾಗುತ್ತದೆ ತಕ್ಷಣ ಶ್ರೀರಂಗಪಟ್ಟಣದಿಂದ ಸೈನ್ಯದ ತುಕಡಿ ಕಳಿಸಿ ಬ್ರಿಟಿಷ್ ಸೈನಿಕರನ್ನ ಹೆಡೆಮುರಿ ಕಟ್ಟಿ ಶ್ರೀರಂಗಪಟ್ಟಣದ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಯಿಂದ ಅವರನ್ನೆಲ್ಲ ಕೊಲ್ಲುತ್ತಾನೆ (ಇದು ಗೆಜೆಟೆಯರ್ ನಲ್ಲಿ ದಾಖಲಾದ ವಿಷಯ) . ಇದೇ ಟಿಪ್ಪು ಆನಂದಪುರದ ಮಾಗ೯ವಾಗಿ ಬಿದನೂರು ಕೋಟೆಗೆ ಸಂಚಾರ ಹೋಗುವಾಗ ಆನಂದಪುರದ ಮಸೀದಿಗೆ ಪ್ರಾಥ೯ನೆ ಸಲ್ಲಿಸುತ್ತಾರೆ ಅಂತ ಹಿಂದಿನ ದಿನ ಸುದ್ದಿಯಾದಾಗ ಆನಂದಪುರದ ಅಗ್ರಹಾರದ ಪುರೋಹಿತರು ಹೆದರುತ್ತಾರೆ, ರಾತ್ರೋರಾತ್ರಿ ಶ್ರೀ ರಾಮ ದೇವರನ್ನ ಶ್ರೀರಂಗನಾಥ ಎಂದು ಮರು ನಾಮಕರಣ ಮಾಡಿ ಮರುದಿನ ಮಸೀದಿಗೆ ಬರುವ ಟಿಪ್ಪುವಿಗೆ ಸ್ವಾಗತ ಮಾಡಿ ತಮ್ಮ ದೇವಾಲಯಕ್ಕೆ ಆಹ್ವಾನಿಸುತ್ತಾರೆ, ಟಿಪ್ಪು ಯಾವ ದೇವರು ಅಂತ ಕೇಳಿದಾಗ ಶ್ರೀರಂಗನಾಥ ಅಂದಾಗ ಅಚ್ಚಾ ಚಲೋ ಅಂತ ಹೇಳಿ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ , ಪುರೋಹಿತರಿಗೆ ಮತ್ತು ಇಡೀ ಅಗ್ರಹಾರಕ್ಕೆ ದೇಣಿಗೆ ನೀಡಿದ ಚರಿ...