# ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯# ವಿಶ್ವವಿಖ್ಯಾತ ಜೋಗ ಜಲಪಾತ, ಲಿಂಗನ ಮಕ್ಕಿ ಆಣೆಕಟ್ಟು, ಮಹಾತ್ಮ ಗಾಂಧಿ ಜಲ ವಿದ್ಯುದಾಗರ ಇವೆಲ್ಲ ಶಿವಮೊಗ್ಗ ಜಿಲ್ಲೆಯ ತೀಥ೯ಹಳ್ಳಿ ಸಮೀಪದ ಆರಗ ದಿಂದ ಸುಮಾರು 10 ಕಿ.ಮಿ ದೂರದ ಅಂಬು ತೀಥ೯ ಎಂಬಲ್ಲಿ ಉಗಮವಾಗುವ ಶರಾವತಿ ನದಿ ಕಾರಣ . ರಾಮೇಶ್ವರ ದೇವರ ವಿಗ್ರಹದ ಎದುರು ಸಣ್ಣ ಜರಿ ಹುಟ್ಟಿ ಅಲ್ಲೇ ಸ್ವಲ್ಪ ದೂರದಲ್ಲಿ ದೊಡ್ಡ ಕೊಳವಾಗಿ ಅಲ್ಲಿ೦ದ ತು೦ಬಿ ತುಳುಕಿ ಹಳ್ಳ ಹೊಳೆಯಾಗಿ ನದಿಯಾಗಿ ತೀಥ೯ಳ್ಳಿ, ಹೊಸನಗರ ಮತ್ತು ಸಾಗರ ತಾಲ್ಲೂಕಿನ ಬಹುಭೂಭಾಗ ಆಣೆಕಟ್ಟಿಂದ ಮುಳುಗಡೆ ಆಗಿ ರಾಜ್ಯಕ್ಕೆ ಪ್ರಮುಖ ಜಲ ವಿದ್ಯುತ್ ಉತ್ಪಾದಿಸಿ ನೀಡುವ ಈ ನದಿ ವಿಶ್ವವಿಖ್ಯಾತ ಜೋಗ ಜಲಪಾತವಾಗಿ ಶರಾವತಿ ಕಣಿವೆಯಲ್ಲಿ ಹರಿದು ಹೊನ್ನಾವರ ತಾಲ್ಲೂಕಿನಲ್ಲಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಪ್ರಸಿದ್ದ ಪ್ರವಾಸಿ ಕೇಂದ್ರವಾಗುವ೦ತ ಇತಿಹಾಸ ಮತ್ತು ರಾಜ್ಯಕ್ಕೆ ಆಥಿ೯ಕ ಲಾಭ ತರುವ ಈ ನದಿಯ ಉಗಮ ಸ್ಥಾನ ಯಾವುದೇ ಅಭಿವೃದ್ಧಿ ಕಾಣದಿರುವುದು ಬೇಸರದ ವಿಷಯ, ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು ಲಿಂಗನಮಕ್ಕಿ ಆಣೆಕಟ್ಟು ರಾಜ್ಯಕ್ಕೆ ಅಪಿ೯ಸುವ ಸಂದಭ೯ದಲ್ಲಿ ಇಲ್ಲಿ ಒಂದು ಪ್ರವಾಸಿಗಳಿಗಾಗಿ ಕೊಠಡಿ ನಿಮಿ೯ಸಿದ್ದು ಬಿಟ್ಟರೆ ಈ ವರೆಗೆ ಇಲ್ಲಿ ಈ ನದಿಯ ಬಗ್ಗೆ, ಜೋಗ ಜಲಪಾತದ ಬಗ್ಗೆ, ಲಿಂಗನಮಕ್ಕಿ ಆಣೆಕಟ್ಟು ವಿದ್ಯುತ್ ಉತ್ಪಾದನೆ ಬಗ್ಗೆ ಒಂದೇ ಒಂದು ಮಾಹಿತಿ ಫಲಕವಿಲ್ಲ. 1970ರ ದಶಕದಲ್ಲಿ ಜಿಲ್ಲೆಯ ಶಾಲಾ ಶ...