ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಇರುವಕಿ ಒಂದು ಸಣ್ಣ ಗ್ರಾಮ, ಇದು ಸಾಗರ ತಾಲ್ಲೂಕಿನ ಯಡೇಹಳ್ಳಿ ಗ್ರಾಮ ಪಂಚಾಯತ್ ಗೆ ಸೇರಿದೆ.
ಇಲ್ಲಿ 1993ರಲ್ಲಿ ಸುಮಾರು 60 ಕುಂಬಾರರ ಕುಟುಂಬ ಇತ್ತು ಅವರಿಗೆಲ್ಲ ಸಾಗುವಳಿ ಮಾಡಿದ ಜಮೀನಿಗೆ ಹಕ್ಕು ಪತ್ರ ಇರಲಿಲ್ಲ, ಇವರುಗಳು ಅಲೆಮಾರಿಗಳ0ತೆ ಆನಂದಪುರದ ಜೇಡಿಸರ ನಂತರ ಹೆಬೋಡಿ, ಕೆಂಜಿಗಾಪುರದ ಕುಂಬಾರಗುಂಡಿ ನ೦ತರ ಈ ಇರುವಕ್ಕೆಗೆ ಬಂದು ನೆಲೆಸಿದ ಇತಿಹಾಸ ಇವರದ್ದು.
1993ರಲ್ಲಿ ಇವರಿಗೆಲ್ಲ ಬಗರ್ ಹುಕುಂ ಹಕ್ಕು ಪತ್ರ ಸಿಕ್ಕಿತು.
ಕನಾ೯ಟಕ ರಾಜ್ಯದಲ್ಲೆ ಮೊದಲ ಬಗರ್ ಹುಕುಂ ಪಡೆದ ಗ್ರಾಮ ಪಂಚಾಯತ್ ಯಡೇಹಳ್ಳಿ, ಆಗೆಲ್ಲ ಕಾನೂನು ಜಟಿಲವಾಗಿತ್ತು ಹಣ ಪಾವತಿ ಮಾಡದೆ ಹಕ್ಕು ಪತ್ರ ಸಿಗುತ್ತಿರಲಿಲ್ಲ.
ರೈತ ಸಂಘಷ೯ ಸಮಿತಿ ನೇತೃತ್ವದಲ್ಲಿ ಸಾಗರದ AC ಕಛೇರಿ ಎದುರು 43 ದಿನಗಳ ಕಾಲ ನಡೆದ 1984 ರಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ 20ಕ್ಕೂ ಹೆಚ್ಚು ದಿನ ಭಾಗವಹಿಸಿದವರು ಈ ಹೋಬಳಿಯವರೆ.
ಸನ್ಮಾನ್ಯ ಬೈರೇಗೌಡರು ಕೃಷಿ ಸಚಿವರಾಗಿದ್ದಾಗ ಕೃಷಿ ಇಲಾಖೆಯ ಅಂಗ ಸಂಸ್ಥೆ ಭೂಸಂರಕ್ಷಣಾ ಇಲಾಖೆಯಲ್ಲಿ ನಡೆಯುತ್ತಿದ್ದ ಸಾವಿರಾರು ಕೋಟಿ ಹಗರಣ ಬಯಲಿಗೆ ಬಂದದ್ದೇ ಈ ಗ್ರಾಮ ಪಂಚಾಯಿತಿ ಇಂದ, ಅವತ್ತು 7 ಜನ ಕೃಷಿ ಅಧಿಕಾರಿಿಗಳು ಜೈಲಿಗೆ ಹೋಗಿದ್ದು ಇತಿಹಾಸ.
ನೂತನ ವಿಶ್ವವಿದ್ಯಾಲಯದ ಶಂಕು ಸ್ಥಾಪನೆ ಮಾಡುತ್ತಿರುವವರು ಬೈರೇಗೌಡರ ಪುತ್ರ ಕೃಷಿ ಸಚಿವ ಕೃಷ್ಣ ಬೈರೇಗೌಡರು.
ಹಾಗಾಗಿ ಈ ಗ್ರಾಮ ಪಂಚಾಯತ್ ಗೆ ವಿಶೇಷತೆ ಇದೆ.
ಈ ವಿಶ್ವ ವಿದ್ಯಾಲಯದ ಮೊದಲ ಉಪ ಕುಲಪತಿ ಆಗಿದವರು ಪಕ್ಕದ ಶಿಕಾರಿಪುರದ ಡಾ.ವಾಸುದೇವಪ್ಪ ಇವರು ಮೀನುಗಾರಿಕೆಯಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.
14 July 2017 Post
# ಇರುವಕೀ ಕೃಷಿ ವಿದ್ಯಾಲಯದ ಮುಖ್ಯ ಕಾರಣ ಕತ೯ರು ಡಾಕ್ಟರ್ ವಿಗ್ನೇಶ್ ಮಂಚಾಲೆ#
ಇವತ್ತು ಆಕಸಿಕವಾಗಿ ಡಾಕ್ಟರ್ ವಿಗ್ನೇಷ್ ಮಂಚಾಲೆ ನನ್ನ ಕಚೇರಿಗೆ ಬಂದಿದ್ದರು, ಇವರು ನಮ್ಮ ಸಾಗರ ತಾಲ್ಲೂಕಿನ ಮಂಚಾಲೆಯವರು, ಇವರಿಗೆ ಕೃಷಿ ವಿದ್ಯಾಲಯದ ಉಪ ಕುಲಪತಿ ಆಗುವ ಎಲ್ಲಾ ಅಹ೯ತೆ ಇದ್ದರೂ ರಾಜಕೀಯ ಬೆಂಬಲ ಇಲ್ಲದ್ದರಿಂದ ಆಗಲಿಲ್ಲ.
ಇವತ್ತು ಸಾಗರ ತಾಲ್ಲೂಕಿನಲ್ಲಿ ಈ ಕೃಷಿ ವಿಶ್ವವಿದ್ಯಾಲಯ ಬರಲು ಕಾರಣ ಕತ೯ರು, ಇವರಿ೦ದಲೇ 777 ಎಕರೆ ಸದರಿ ವಿವಿಗೆ ಭೂಮಿ ಪಡಿಯಲು ಸಾಧ್ಯವಾಯಿತು.
ಮೊನ್ನೆ ನಡೆದ ವಿವಿ ಶಂಕು ಸ್ಥಾಪನೆಯಲ್ಲಿ ಇವರನ್ನ ಗೌರವಿಸಬೇಕಿತ್ತು ಆದರೆ ಸಕಾ೯ರಿ ವ್ಯವಸ್ಥೆಯಲ್ಲಿ ಇದು ನಡೆಯಲಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿಭಟನೆ, ಲಾಠಿ ಚಾಜ್೯ ಇತ್ಯಾದಿ ನಡೆಯದೆ 777 ಎಕರೆ ವಿವಿಗೆ ನೀಡಲಾಯಿತೆಂದರೆ ಒಂದು ರೀತಿ ಪವಾಡವೇ ಅOದಿದ್ದು ಇವರಿಗೆ ದೊರೆತ ದೊಡ್ಡ ಗೌರವ.
ದೊಡ್ಡ ಗುಣದ, ಬುದ್ಧಿವಂತ ಅನುಭವಿ ಆದ ಎಲೆ ಮರಿ ಕಾಯಿಯಂತೆ ಇರುವ ಇವರನ್ನ ನಾವೆಲ್ಲ ಅಭಿನಂದಿಸಲೇ ಬೇಕು.
ಇವರೊಂದಿಗೆ ಒಂದು ಸಂದಶ೯ನ ಮಾಡಿದೆ ಆದರಲ್ಲಿ ವಿವಿ ಆದ ಬಗ್ಗೆ ವಿವರಿಸಿದ್ದಾರೆ, ಈ ಬಗ್ಗೆ ಮೊದಲಿಗೆ ನನ್ನ ಸಂಪಕಿ೯ಸಿ ಸಹಕಾರ ಪಡೆದದ್ದನ್ನ ನೆನಪಿಸಿದ್ದಾರೆ.
http://www.prajavani.net/news/article/2017/06/16/499384.html
https://youtu.be/_Flqase637w
Comments
Post a Comment