#ಡಾಕ್ಟರ್_ಅಂಜನಪ್ಪ #ಸಮಾಜದಲ್ಲಿ_ಉತ್ತುಂಗಕ್ಕೆೇರಿದರೂ #ತಳ_ಮರೆಯದ_ಅಪರೂಪದ_ವಿಶೇಷ_ವ್ಯಕ್ತಿ #ಬಾಲ್ಯದ_ಅವರ_ಕನಸು_ಓದಿ_ಶಿಕ್ಷಕನಾಗಬೇಕು #ಒಳ್ಳೆ_ಉಡುಗೆ_ತೊಡುಗೆ_ತೊಡಬೇಕು #ಆದರೆ_ಅವರು_ತಲುಪಿದ್ದು_ಅಂತರಾಷ್ಟ್ರೀಯ_ಶ್ರೇಷ್ಟ_ಸರ್ಜನ್_ಸಾಲಿಗೆ #ಕೆಂಪೆಗೌಡ_ಇನ್ಸ್ಟಿಟ್ಯೂಟ್_ಆಫ್_ಮೆಡಿಕಲ್_ಸೈನ್ಸ್_ಚೇರ್ಮನ್_ಹುದ್ದೆ_ತನಕ_ಸಾಧನೆ. #HulikalNataraj #DrAnjanappa #Vtswamy #bdravi #kimshospital #bangalore #hnnarasimhaia #pavadabayalu ಶ್ರೀಮಂತಿಕೆ, ಅಧಿಕಾರ ಮತ್ತು ಪ್ರಖ್ಯಾತಿ ಪಡೆದ ನಂತರ ಅನೇಕರಿಗೆ ತಮ್ಮ ಅಕ್ಕಪಕ್ಕದವರ ಮತ್ತು ಜೊತೆಗಾರರ ಗುರುತು ಸಿಗವುದಿಲ್ಲ. ಇಂತಹ ಕಾಲದಲ್ಲಿ ರಾಜ್ಯದ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆ ಆಗಿರುವ #ಕೆಂಪೇಗೌಡ_ಇನ್ಸ್ಟಿಟ್ಯೂಟ್_ಆಫ್_ಮೆಡಿಕಲ್_ಸೈನ್ಸ್ ಸಂಸ್ಥೆಯ #ಚೇರ್ಮನ್ ಆಗಿರುವ #ಡಾಕ್ಟರ್_ಅಂಜನಪ್ಪ ಅವರದ್ದು ವಿಭಿನ್ನ ಮತ್ತು ಜನಸಾಮಾನ್ಯರ ಜೊತೆಯ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ತಾನು ಹುಟ್ಟಿದ ಮಣ್ಣು ಮರೆಯದ ಸಾಧಕರು ಇವರು, ವಿಚಾರವಾದಿ ಹೆಚ್ ಎನ್ ನರಸಿಂಹಯ್ಯ ಅವರ ವಿದ್ಯಾರ್ಥಿ ಆಗಿದ್ದವರು. ಬಾಲ್ಯದಲ್ಲಿ ಅತ್ಯಂತ ಬಡತನದಲ್ಲಿ ಬೆಳೆದವರು ಬಾಲ್ಯದ ಅವರ ಕನಸು ಓದಿ ದೊಡ್ಡವನಾದ ಮೇಲೆ ಶಿಕ್ಷಕನಾಗಬೇಕು, ಒಳ್ಳೆಯ ಉಡುಪು ಧರಿಸಬೇಕು ಹಾಗು ಅಂತದ್ದನ್ನ ಖರೀದಿಸಬೇಕು ಅನ್ನುವುದಾಗಿತ್ತಂತೆ. ...