#ನನ್ನ ಇವತ್ತಿನ ಅತಿಥಿ ಸುವಣ೯ ತ್ರಿಭುಜ ಬೋಟಿನ ನಾಪತ್ತೆಯ ಪ್ರಕರಣದ ತನಿಖಾಧಿಕಾರಿ ಉಡುಪಿ ಸಕ೯ಲ್ ಇನ್ಸ್ಪೆಕ್ಟರ್ ಮಂಜುನಾಥ್# ಒಂದು ಕಾಲದ ಶಿವಮೊಗ್ಗ ದೊಡ್ಡ ಪೇಟೆ ಠಾಣೆಯ ಪ್ರಖ್ಯಾತ ಟಪ್ ಕಾಪ್ ಎಂದೇ ಪ್ರಖ್ಯಾತರಾಗಿದ್ದ ಮಂಜುನಾಥ್ ನಂತರ ಮಂಗಳೂರು ಟವನ್ನಲ್ಲಿ ಕೆಲಸ ನಿವ೯ಹಿಸಿ ಈಗ ಉಡುಪಿಯಲ್ಲಿದ್ದಾರೆ. ಉಡುಪಿ ಮತ್ತು ಮಲ್ಪೆ ಬಂದರು ಪ್ರದೇಶ ಇವರ ವ್ಯಾಪ್ತಿ (ಉಡುಪಿ ಟ್ರಾಪಿಕ್ ಸೇರಿ). 2018ರ ಡಿಸೆಂಬರ್ 13ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವಣ೯ ತ್ರಿಭುಜ ಬೋಟ್ ಮತ್ತು ಅದರಲ್ಲಿದ್ದ 7 ಜನ ನಾಪತ್ತೆ ಪ್ರಕರಣದ ತನಿಖಾಧಿಕಾರಿಗಳು ಇವರೇ. ಇವರ ತನಿಖಾ ವರದಿ ವಸ್ತುನಿಷ್ಟ ಮತ್ತು ಪ್ರಶಂಸನೀಯ ಕೂಡ ಆಗಿದೆ, ಈ ಘಟನೆ ಇಡೀ ದೇಶದ ಗಮನ ಸೆಳೆದಿದೆ. ಮಂಜುನಾಥ ನಿತ್ಯ ಶಟಲ್ ಬ್ಯಾಡ್ಮಿOಟನ್ ಆಡುತ್ತಾರೆ ಈಗ ಉಡುಪಿಯಲ್ಲಿ ತಮ್ಮ ಪಿಟ್ನೆಸ್ ಗೆ ಟೆನ್ನಿಸ್ ಆಡುತ್ತಾರಂತೆ, ಉಡುಪಿಯ ಮಾಜಿ ಮಂತ್ರಿ ಪ್ರಮೋದ್ ಮದ್ವರಾಜ್ ಒಳ್ಳೆಯ ಟೆನ್ನಿಸ್ ಒಳಾಂಗಣ ಕ್ರೀಡಾOಗಣ ಮಾಡಿದ್ದಾರಂತೆ. ಇವರು ನಮ್ಮ ಸಾಗರ ತಾಲ್ಲೂಕಿನ ಅಳಿಯ, ತ್ಯಾಗತಿ೯ ಸಮೀಪದ ನನ್ನ ಗೆಳೆಯ ಸಹಕಾರಿ ಬಂಧು ಮೈಲಾರಿಕೊಪ್ಪದ ಹೊಳೆಯಪ್ಪರ ಅಳಿಯ. ಇವತ್ತು ಇವರ ಮಾವನ ಹೊಸ ಮನೆ ಗೃಹ ಪ್ರವೇಶ ಮತ್ತು ಮಗಳ ಹುಟ್ಟು ಹಬ್ಬದ ಕಾಯ೯ಕ್ರಮಕ್ಕೆ ಬರುವಾಗ ನನಗೆ ಫೋನಾಯಿಸಿದರು ಮತ್ತು ಬಂದರು , ...