Skip to main content

Posts

Showing posts from June, 2018

# ಕನ್ನಡದಲ್ಲಿ ಐಎಎಸ್ ಪಾಸ್ ಮಾಡಿದ ಮೊದಲ ಕನ್ನಡಿಗ ಕೆ.ಶಿವರಾಂ#

ಕೆ.ಶಿವ ರಾಂ ಕನ್ನಡದಲ್ಲಿ ಐಎ ಎಸ್ ಮಾಡಿದ ಮೊದಲಿಗ ರು. ಇವರ ಜೀವನ ಒಂದು ಹೊ ರಾಟ ಯಾಕೆಂದ ರೆ ಇವರ ಬಾ ಲ್ಯ ಅತ್ಯಂತ ಬಡತನದ್ದು, ದಲಿತ ಕುಟುಂಬ ದಲ್ಲಿ ಜನಿ ಸಿದ ಇವ ರು ಎಲ್ಲಾ ಸ ವಾಲುಗ ಳನ್ನ ಎದು ರಿಸಿ ದೊಡ್ಡ ಹು ದ್ದೆ ಪಡೆದ ಕಥೆ ಎಲ್ಲ ರಿಗೂ ಒಂದು ಪ್ರೇ ರಣೆ ಆಗುತ್ತ ದೆ.   ಶಿವಮೊಗ್ಗದ ಜಿಲ್ಲಾ ಪಂಚಾಯತ್ ಗೆ ಮುಖ್ಯ ಕಾಯ೯ ನಿವಾ೯ಹಕ ಅಧಿಕಾರಿಯಾಗಿ ಇವರು ಬಂದಾಗ ಜಿಲ್ಲಾ ಪಂಚಾಯತ್ ಸದಸ್ಯರಾದ ನಮಗೆಲ್ಲ ಕುತೂಹಲ ಆಗಷ್ಟೆ ಇವರ ಬಾ ನಲ್ಲೆ ಮದು ಚಂದ್ರಕೆ ಎಂಬ ಸಿನಿಮಾದಿಂದ ಇವರು ಖ್ಯಾತರಾಗಿದ್ದರು, ಬೆಂಗಳೂರು ಬಿಡಿಎ ಅಧಿಕಾರಿ ಆಗಿದ್ದಾಗ ಬೆಂಗಳೂರಲ್ಲಿ ಬಡವರಿಗೆ ಆಶ್ರಯ ನಿವೇಶನ ನೀಡಿ ದಾಖಲೆ ಮಾಡಿದ್ದರು, ಮೈಸೂರಿನಲ್ಲಿ ಕೂಡ ಅಭಿವೃದ್ಧಿ ಮಾಡಿ ಖ್ಯಾತರಾಗಿದ್ದರು.    ಇವರು ಶಿವಮೊಗ್ಗ ಬಂದಾಗಲೇ ನಮ್ಮ ಊರಾದ ಆನಂದಪುರಂನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಆನಂದಪುರಂನ ಕನ್ನಡ ಸಂಘದ ಆಗಿನ ಅದ್ಯಕ್ಷರಾಗಿದ್ದ ಹಾ.ಮೊ.ಬಾಷ ನೇತೃತ್ವದಲ್ಲಿ ಹಮ್ಮಿಕೊಂಡಿದ್ದೆವು. ಉದ್ಘಾಟನೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಿಂದ, ಕಾಗೋಡು ತಿಮ್ಮಪ್ಪ, ಕುಮಾರ್ ಬಂಗಾರಪ್ಪಾ, ಆಗಿನ ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಬಲ್ಕಿಶ್ ಬಾನು ಮುಂತಾದವರೆಲ್ಲ ಭಾಗವಹಿಸಿದ್ದರು,.   ಈ ಅದ್ದೂರಿ ಮತ್ತು ಯಶಸ್ವಿ ಯುವಜನ ಮೇಳ ಅತ್ಯಂತ ವಣ೯ಮಯವಾಗಿ ನಡೆಯಲು ಅವತ್ತು ಜಿಲ್ಲಾ ಪಂಚಾಯತ್ ಅಧಿಕಾರಿಯಾಗಿದ್ದ ಕೆ.ಶಿವರಾಂ ಕಾರಣ ಕತ೯ರು. ಅವರ ಮತ್ತು ನನ...