# ಹುಳ್ಳಿ ಕಟ್ಟು( ಹುರುಳಿ)# # ಹಳ್ಳಿಮನೆ ಈ ಸತ್ಯನಾರಾಯಣ ಸೀತಾನದಿ ಹೋಟೆಲ್# ತೀಥ೯ಳ್ಳಿ ಮಾಗ೯ವಾಗಿ ಮಣಿಪಾಲ್ ಉಡುಪಿ ಹೋಗುವಾಗ ಆಗುಂಬೆ ಘಾಟಿ ಇಳಿದ ನಂತರ ಸೋಮೆಶ್ವರ ದಾಟಿದ ನಂತರ ಬಲಭಾಗದಲ್ಲಿ ಶ್ರೀ ಸತ್ಯನಾರಾಯಣ ಸೀತಾನದಿ ಎಂಬ ಹೋಟೆಲ್ ಇದೆ ಇಲ್ಲಿ ನೀರು ದೊಸೆ, ಅವಲಕ್ಕಿ ಮೊಸರು, ಬನ್ಸ್ ಇತ್ಯಾದಿ ತಿಂಡಿ ತಿಂದು ಕಾಪಿ ಕುಡಿದ ಮೇಲೆ ನಮ್ಮ ಕಣ್ಣು ಅಲ್ಲಿ ಜೋಡಿಸಿದ ವಸ್ತುಗಳು ಆ ವಸ್ತುಗಳ ಬಗ್ಗೆ ಬರೆದು ಅಂಟಿಸಿದ ವಿವರಣೆ ಮೇಲೆ ಬೀಳಲೇ ಬೇಕು ಆ ರೀತಿ ಜೋಡಿಸಿದ್ದಾರೆ ನಂತರ ನೀವು ಅದನ್ನ ಖರೀದಿಸಿಯೇ ಹೋಗುವುದು ಗ್ಯಾರಂಟಿ ಯಾಕೆಂದರೆ... .... ಎಲ್ಲೂ ಸಿಗದ ಉಪ್ಪಿನ ನೀರಲ್ಲಿ ಸಂರಕ್ಷಿಸಿದ ಕಳಲೆ, ಹಲಸಿನ ಗುಜ್, ಮಾವು. ಮೂರುಗನ ಹುಳಿ ಮತ್ತು ಅದರ ಉತ್ಪನ್ನಗಳು, ಎಲ್ಲಾ ರೀತಿಯ ಮನೇಲಿ ತಯಾರಿಸಿದ ಹಪ್ಪಳಗಳು, ಬಾಯಲ್ಲಿ ನೀರು ತರಿಸುವ ಉಪ್ಪಿನ ಕಾಯಿಗಳು, ಸಂಡಿಗೆಗಳು. ಚಿಪ್ಸಗಳು, ಚಕ್ಕುಲಿ, ಅತ್ರಾಸು,ಹಲ್ವಾ, ವಿವಿದ ರೀತಿಯ ಉಂಡೆಗಳು. ವಿಶೇಷವಾಗಿ ಇವರ ಅತ್ತೆ ತಯಾರಿಸುವ ಹುರುಳಿ ಕಟ್ಟಿನ ಲೇಹ್ಯ ಸಿಗುತ್ತೆ ಇದನ್ನ ತಯಾರಿಸಲು 2ಕೆ.ಜಿ.ಕಪ್ಪು ಹುರುಳಿ ಬೇಕು ಅದನ್ನ ಬೇಯಿಸಲು ಕಟ್ಟಿಗೆ, ಎರಡು ದಿನ ಬೇಯಿಸಿದ ನಂತರ ಅದರಿಂದ 200 ಗ್ರಾಂ ಗಟ್ಟಿ ಲೇಹ್ಯ ಸಿಗುತ್ತೆ ಇದನ್ನ 200 ರೂಪಾಯಿಗೆ ಮಾರುತ್ತಾರೆ. ಮಲೆನಾಡಿನಲ್...