Skip to main content

Posts

Showing posts from June, 2017

ಇರುವಕಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಆದ ಕಥೆ .

  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಇರುವಕಿ ಒಂದು ಸಣ್ಣ ಗ್ರಾಮ, ಇದು ಸಾಗರ ತಾಲ್ಲೂಕಿನ ಯಡೇಹಳ್ಳಿ ಗ್ರಾಮ ಪಂಚಾಯತ್ ಗೆ  ಸೇರಿದೆ.    ಇಲ್ಲಿ 1993ರಲ್ಲಿ ಸುಮಾರು 60 ಕುಂಬಾರರ ಕುಟುಂಬ ಇತ್ತು ಅವರಿಗೆಲ್ಲ ಸಾಗುವಳಿ ಮಾಡಿದ ಜಮೀನಿಗೆ ಹಕ್ಕು ಪತ್ರ ಇರಲಿಲ್ಲ, ಇವರುಗಳು ಅಲೆಮಾರಿಗಳ0ತೆ ಆನಂದಪುರದ  ಜೇಡಿಸರ ನಂತರ ಹೆಬೋಡಿ, ಕೆಂಜಿಗಾಪುರದ ಕುಂಬಾರಗುಂಡಿ ನ೦ತರ ಈ ಇರುವಕ್ಕೆಗೆ ಬಂದು ನೆಲೆಸಿದ ಇತಿಹಾಸ ಇವರದ್ದು.    1993ರಲ್ಲಿ ಇವರಿಗೆಲ್ಲ ಬಗರ್ ಹುಕುಂ ಹಕ್ಕು ಪತ್ರ ಸಿಕ್ಕಿತು.      ಕನಾ೯ಟಕ ರಾಜ್ಯದಲ್ಲೆ ಮೊದಲ ಬಗರ್ ಹುಕುಂ ಪಡೆದ ಗ್ರಾಮ ಪಂಚಾಯತ್ ಯಡೇಹಳ್ಳಿ, ಆಗೆಲ್ಲ ಕಾನೂನು ಜಟಿಲವಾಗಿತ್ತು ಹಣ ಪಾವತಿ ಮಾಡದೆ ಹಕ್ಕು ಪತ್ರ ಸಿಗುತ್ತಿರಲಿಲ್ಲ.    ರೈತ ಸಂಘಷ೯ ಸಮಿತಿ ನೇತೃತ್ವದಲ್ಲಿ ಸಾಗರದ AC ಕಛೇರಿ ಎದುರು 43 ದಿನಗಳ ಕಾಲ ನಡೆದ 1984 ರಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ 20ಕ್ಕೂ ಹೆಚ್ಚು ದಿನ ಭಾಗವಹಿಸಿದವರು ಈ ಹೋಬಳಿಯವರೆ.    ಸನ್ಮಾನ್ಯ ಬೈರೇಗೌಡರು ಕೃಷಿ ಸಚಿವರಾಗಿದ್ದಾಗ ಕೃಷಿ ಇಲಾಖೆಯ ಅಂಗ ಸಂಸ್ಥೆ ಭೂಸಂರಕ್ಷಣಾ ಇಲಾಖೆಯಲ್ಲಿ ನಡೆಯುತ್ತಿದ್ದ ಸಾವಿರಾರು ಕೋಟಿ ಹಗರಣ ಬಯಲಿಗೆ ಬಂದದ್ದೇ ಈ ಗ್ರಾಮ ಪಂಚಾಯಿತಿ ಇಂದ, ಅವತ್ತು 7 ಜನ ಕೃಷಿ ಅಧಿಕಾರಿಿಗಳು ಜೈಲಿಗೆ ಹೋಗಿದ್ದು ಇತಿಹಾಸ.    ನೂತನ ವ...