ಸಕಾ೯ ರ ದ ಕೃಷಿ ಇಲಾಖೆಯ ಸಾವಿ ರಾರು ಕೋ ಟಿ ಹಣದ ಲೂ ಟಿ ಬಯ ಲಾದ ನನ್ನ ಹೋರಾಟ. ಹೊಸದಾಗಿ ಜಿಲ್ಲಾ ಪಂಚಾಯತ ಸದಸ್ಯನಾದ ಹುಮ್ಮಸ್ಸು, ಗ್ರಾಮ ಪಂಚಾಯತನಲ್ಲಿ ಉಪಾಧ್ಯಕ್ಷನಾಗಿದ್ದಾಗ ರಾಜ್ಯದ ಮೊದಲ ಬಗರ ಹುಕುಂ ಹಕ್ಕು ಪತ್ರ ವಿತರಣೆಗೆ ಕಾರಣ ಕತ೯ನಾಗಿ ಕಾಗೋಡು ತಿಮ್ಮಪ್ಪರಿಂದ ಸದಾ ಹೊಗಳಿಕೆಗಳಿಂದ ನನ್ನ ಕಾಲು ನೆಲದ ಮೇಲೆ ಇರಲಿಲ್ಲ. ಇದೇ ಸಂದಭ೯ದಲ್ಲಿ ಕಾಗೋಡು ಜೊತೆ ಹಳ್ಳಿ ಬೇಟೆಗಳಲ್ಲಿ ಎಲ್ಲಿ ಹೋದರೂ ಕೃಷಿ ಇಲಾಖೆ, ಭೂ ಸಾರ ಸಂರಕ್ಷಣಾ ಇಲಾಖೆಯ ಮೇಲೆ ರೈತರ ದೂರು ಆದರೆ ಸ್ಥಳಿಯ ಪಕ್ಷದ ಮುಖಂಡರು ಮಾತ್ರ ಕಾಗೋಡು ಹತ್ತಿರ ದೂರು ನೀಡಿದವರ ಮೇಲೆಯೇ ಆಪಾದನೆ ಮಾಡಿ ಇದು ಸುಳ್ಳು ಎನ್ನುತ್ತಿದ್ದರು. ಒಂದು ದಿನಾ ಆಚಾಪುರ ಗ್ರಾಮ ಪಂಚಾಯತ ಭೇಟಿಯಲ್ಲಿ ಪುನಃ ಇದೇ ವಿಚಾರ ಮರುಕಳಿಸಿದಾಗ ಕಾಗೋಡು ನನಗೆ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಬೇಗ್ ಗೆ ಈ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ನೀಡಲು ಹೇಳಿದ್ದರು. ಈ ಬಗ್ಗೆ ಕಾಯ೯ ನಿರತರಾದ ನಾವು ಇಲಾಖೆಯಿಂದ ನಿಮಿ೯ಸಲ್ಪಟ್ಟ ಪಿಕ್ ಅಪ್ ಗಳು ಎಷ್ಟು ಅಂತ ಮಾಹಿತಿ ಕೇಳಿದಾಗ ತಾಲ್ಲೂಕಿನಲ್ಲಿ 5 ವಷ೯ದಲ್ಲಿ ಸುಮಾರು 220 ನಿಮಿ೯ಸಿದ್ದನ್ನ ತಿಳಿಸಿದರು, ಈ ಬಗ್ಗೆ ತುಂಬಾ ಒತ್ತಾಯ ಮಾಡಿದ ನಂತರ ನಕ್ಷೆ ನೀಡಿದರು ಸದರಿ ನಕ್ಷೆ ಹಿಡಿದು ಸ್ಥಳಕ್ಕೆ ಹೋದರೆ ಅಲ್ಲಿ ಪಿಕ್ ಅಪ್ ಗಳೆ ಇಲ್ಲ!? ಒಂದೆರಡು ಕಡೆ ಇದ್ದರು ಕಳಪೆ. ಈ ಸಂದಭ೯ದಲ್ಲೇ ಸಾಗರದ ಕೃಷಿ ಇಲಾಖೆ ...