Skip to main content

Posts

3510. ಡಾಕ್ಟರ್ ಶಂಕರ್ ಲಾಲ್ ಗಾರ್ಗ್ ಇಂದೋರ್

#ಶಿವಮೊಗ್ಗ_ಜಿಲ್ಲೆಯ_ಈ_ರಾಷ್ಟ್ರೀಯ_ಪ್ರಶಸ್ತಿ #ಪ್ರತಿ_ವರ್ಷ_ನವರಾತ್ರಿಯಲ್ಲಿ #ಒಂದು_ಲಕ್ಷ_ನಗದು_ಮತ್ತು_ಪಾರಿತೋಷಕ #ಶಿವಮೊಗ್ಗದ_ಪತ್ರಕರ್ತ_ಸಿದ್ದಪ್ಪರ_ದೊಡ್ಡಮ್ಮ_ದೇವಿ_ಚಾರಿಟೇಬಲ್_ಟ್ರಸ್ಟ್_ನಿಂದ. #ಮೂರನೇ_ವರ್ಷದ_ಪ್ರಶಸ್ತಿ_ಮಧ್ಯಪ್ರದೇಶದ_ಡಾಕ್ಟರ್_ಶಂಕರ್_ಲಾಲ್_ಗರ್ಗ್_ಅವರಿಗೆ. #ಈ_ಪ್ರಶಸ್ತಿ_ಆಯ್ಕೆ_ಸಮಿತಿ_ಅಧ್ಯಕ್ಷರು_ಸುಂದರ್_ರಾಜ್ #ಇವರಿಬ್ಬರೂ_ನನ್ನ_ಅತಿಥಿಗಳು #shivamogga #siddappa #press #doddammacharitabletrust #nationalaward #sunderraj #karnatakasanga #Drshankarlalgarge #idore #MP     ಪ್ರತಿ ವರ್ಷ ಶಿವಮೊಗ್ಗದ #ದೊಡ್ಡಮ್ಮ_ದೇವಿ_ಚಾರಿಟೇಬಲ್_ಟ್ರಸ್ಟ್ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಕಳೆದ ಮೂರು ವರ್ಷದಿಂದ ನೀಡುತ್ತಿದೆ.     ಈ ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಮತ್ತು ಪಾರಿತೋಷಕ ಇರುತ್ತದೆ.     ಈ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಪ್ರತಿಭಾವಂತರ ಸಮಿತಿ ಇದೆ ಈ ಆಯ್ಕೆ ಸಮಿತಿ ಅಧ್ಯಕ್ಷರು #ಎಂ_ಎನ್_ಸುಂದರ್_ರಾಜ್ ಇವರು ಶಿವಮೊಗ್ಗದ ಪ್ರತಿಷ್ಠಿತ #ಕರ್ನಾಟಕ_ಸಂಘದ ಮಾಜಿ ಅಧ್ಯಕ್ಷರು ಮತ್ತು ಸಾಹಿತಿಗಳು.     ಈ ವರ್ಷದ ರಾಷ್ಟ್ರೀಯ ಪ್ರಶಸ್ತಿ ಮಧ್ಯಪ್ರದೇಶದ ಇಂದೋರಿನ ಡಾಕ್ಟರ್ #ಶಂಕರ್_ಲಾಲ್_ಗರ್ಗೆ ಅವರನ್ನ ಪ್ರಶಸ್ತಿ ಸಮಿತಿ ಆಯ್ಕೆ ಮಾಡಿದೆ.    ಇವರು ಇಂದೋರ್ ಸಮೀಪದ #ಕೇಶರ್_ಪರ್ವತ ಪ್ರದೇಶದಲ...
Recent posts

3509. ನನ್ನ ಅತಿಥಿಗಳು

#ನನ್ನ_ಅತಿಥಿಗಳು #ಇತಿಹಾಸ_ಸಂಶೋದಕರು #myguest #historian #radio #sudeendra #dilipnadig     ಶಿವಮೊಗ್ಗದಿಂದ ಸಾಗರ ತಾಲೂಕಿನ ಇಕ್ಕೇರಿ ಅಘೋರೇಶ್ವರ ದೇವಾಲಯ ಮತ್ತು ಕಲ್ಸೆ ದೇವಾಲಯಗಳ ಶಿಲ್ಪ ರಚನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹೋಗಿ ವಾಪಾಸು ಬರುವಾಗ ಇವರೆಲ್ಲ ನನ್ನ ಕಛೇರಿಗೆ ಬಂದಿದ್ದರು.    ಇತಿಹಾಸ ಸಂಶೋಧಕರಾದ #ದಿಲೀಪ್_ನಾಡಿಗ್, ಆಕಾಶವಾಣಿಯ ನಿವೃತ್ತ ಕ್ರಿಯಾಶೀಲ ಅಧಿಕಾರಿ #ಸುದೀಂದ್ರ , ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಯೋಜನ ವಿಭಾಗ #ಶಂಕರಮಿತ್ರ #ಡಾ_ಚಂದ್ರಕಾಂತ್.ವೈದ್ಯಾಧಿಕಾರಿಗಳು ಶಿಕಾರಿಪುರ ತಾಲ್ಲೂಕಿನ ಚಿಕ್ಕಜೋಗಿಹಳ್ಳಿ ಸರಕಾರಿ ಆಸ್ಪತ್ರೆ ಮತ್ತು  ಶಿವಮೊಗ್ಗದ ತೋಟಗಾರಿಕಾ ಇಲಾಖಾ ಅಧಿಕಾರಿ #ಮದುಗೌಡರು ಬಂದಿದ್ದರು.     ಇವರೆಲ್ಲರ ಆಸಕ್ತಿ ಮತ್ತು ಉತ್ಸಾಹಕ್ಕೆ ಅಭಿನಂದನೆಗಳು.

3508. ವರ್ಷಗಳ ಪೋಟೋ

#ವರ್ಷಗಳ_ಹಿಂದಿನ_ಫೋಟೋ #ಅವತ್ತು_ನನ್ನ_ವಯಸ್ಸು_ಹದಿನೆಂಟು_ಇಪ್ಪತ್ನಾಲ್ಕು_ಇದ್ದಾಗಿನದ್ದು #ಈಗಿನ_60ನೇ_ವಯಸ್ಸಿನದ್ದೂ_ಇಲ್ಲಿದೆ. #Age #face #personality #experience #youngage #oldage  "ನಲವತ್ತರವರೆಗೆ ನಿಮ್ಮ ಮುಖದಲ್ಲಿ ನಿಮ್ಮ ಬದುಕನ್ನು ಧರಿಸುತ್ತೀರಿ...". 'ಐವತ್ತಕ್ಕೆ ನಿಮ್ಮ  ಬದುಕೇ ನಿಮ್ಮ ಮುಖವನ್ನು ಧರಿಸುತ್ತದೆ..."     ಹೀಗೆ ತರಹಾವಾರಿ ಅನುಭವಿಗಳ ಮಾತುಗಳಿದೆ ಅದರ ದಾರಿಯಲ್ಲೇ ಹೆಜ್ಜೆ ಹಾಕುತ್ತಾ ಬಂದು ತಿರುಗಿ ನೋಡಿದಾಗ ಈ ಫೋಟೋಗಳು ಸಿಕ್ಕಿದ್ದಾವೆ.

3507. ಸಾಹಿತ್ಯಾಸಕ್ತ ಕಿರಣ್ ಬೀಸು ವಿಮರ್ಷೆ

#ತೀರ್ಥಹಳ್ಳಿ_ಕಿರಣ್_ಬೀಸು #ಬಿಲಾಲಿ_ಬಿಲ್ಲಿ_ಅಭ್ಯಂಜನ #ನನ್ನ_ಕಥಾ_ಸಂಕಲನ_ಓದಿ_ಬರೆದ_ವಿಮರ್ಶೆ #ಸಾಹಿತ್ಯ_ರಾಜಕೀಯ_ಕೃಷಿ_ಕ್ಷೇತ್ರದಲ್ಲಿ_ವಿಶೇಷ_ಆಸಕ್ತಿ_ಹೊಂದಿದ_ಯುವಕರು. #ಸೋಷಿಯಲ್_ಎಕ್ಸ್ಪೆರಿಮೆಂಟ್_ಇವರ_ಹವ್ಯಾಸ #kiranbeesu #thirthahalli #Bilalibilliabyanjana  #patamakkirarnakar #besthararanichampaka    ಕಿರಣ್ ಬೀಸು ಸಾಹಿತ್ಯಾಸಕ್ತರು ಬಹುಶಃ ಕನ್ನಡದ ಬಹುತೇಕ ಪುಸ್ತಕ ಓದಿದ್ದಾರೆ ಬರಿ ಓದು ಅಲ್ಲ ಅದನ್ನು ಸಂದರ್ಭ ಬಂದಾಗ ನೆನಪಿನಿಂದ ಅದರ ಹೂರಣ ತೆಗೆದು ಹೊರಗಿಡುವ ಅಪಾರ ನೆನಪಿನ ಶಕ್ತಿ ಇವರದ್ದು.     ಸಮಾಜವಾದಿ ಹೊರಾಟಗಾರರನ್ನು ಬರಹಗಾರರನ್ನು ಪ್ರತ್ಯಕ್ಷ ಬೇಟಿ ಮಾಡಿದ್ದಾರೆ ಇನ್ನೊಂದು ವಿಶೇಷ ಅಂದರೆ ಇವರಿಗೆ ಇಷ್ಟವಾದ ವ್ಯಕ್ತಿ ಮತ್ತು ಸ್ಥಳಕ್ಕೆ ಎಷ್ಟೇ ದೂರ ಇದ್ದರು ಪ್ರಯಾಣ ಮಾಡಿ ಬೇಟಿ ಮಾಡುವ Social experiment ಇವರ ಹವ್ಯಾಸ.    ಇವರ ತಂದೆ ಮತ್ತು ತಾಯಿ ಕೂಡ ಕನ್ನಡ ಸಾಹಿತ್ಯದ ಓದುಗರು ಇವರು ಓದುವ ಪುಸ್ತಕ ಅವರೂ ಓದುತ್ತಾರೆ ಬಹುಶಃ ಅವರ ಓದಿನ ಆಸಕ್ತಿ ಮಗನಿಗೆ ಬಂದ ಬಳವಳಿ ಇರಬಹುದು.    ಖ್ಯಾತ ಚಲನ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ನೇರ ಸಂಪರ್ಕ ಇವರಿಗಿದೆ.    #ಕಿರಣ್_ಬೀಸು_ಬರೆದ_ವಿಮರ್ಶೆ_ಇಲ್ಲಿದೆ_ಓದಿ...    ದಿನ ಪತ್ರಿಕೆವೊಂದರಲ್ಲಿ ನಮ್ಮ‌ ಕ್ಷೇತ್ರದ ಮಾಜಿ ಶಾಸಕರಾಗಿದ್ದ ದಿವಂಗ...

3506. ಡಾಕ್ಟರ್ ಎಂ.ಸಿ.ಮೋದಿ ಅವರ 109ನೇ ಹುಟ್ಟು ಹಬ್ಬ

#ಡಾಕ್ಟರ್_ಎಂ_ಸಿ_ಮೋದಿ_ಅವರ_106ನೆ_ಹುಟ್ಟು_ಹಬ್ಬ. #ಮುರಿಗೆಪ್ಪ_ಚೆನ್ನಬಸಪ್ಪ_ಮೋದಿ #ಹಳ್ಳಿ_ಹಳ್ಳಿಗಳಲ್ಲಿ_ಉಚಿತ_ನೇತ್ರ_ಚಿಕಿತ್ಸಾ_ಶಿಭಿರ_ಏರ್ಪಡಿಸಿ_ಚಿಕಿತ್ಸೆ_ನೀಡಿದವರು.   #ನಮ್ಮೂರಲ್ಲಿ_ಅವರ_ಎರೆಡು_ನೇತ್ರ_ಚಿಕಿತ್ಸಾ_ಶಿಬಿರ #ಸ್ಥಳಿಯ_ಕನ್ನಡ_ಸಂಘ_ಏರ್ಪಡಿಸಿತ್ತು.   #DrMCModi #eyesurgeon #mahatmaghandi #birthanniversery #modihospital     ಇವತ್ತು ದಿನಾಂಕ 4-ಅಕ್ಟೋಬರ್ ಉಚಿತ ಕಣ್ಣಿನ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಭಿರ ಏರ್ಪಡಿಸಿ ಸುಮಾರು 40 ವರ್ಷ ಕಣ್ಣಿನ ಪೊರೆಯಿಂದ ದೃಷ್ಟಿ ಕಳೆದುಕೊಂಡವರಿಗೆ ಪುನಃ ದೃಷ್ಟಿ ಬರುವಂತೆ ಮಾಡುತ್ತಿದ್ದ ಡಾಕ್ಟರ್ ಎಂ.ಸಿ. ಮೋದಿ ಅವರ 109ನೇ ಹುಟ್ಟುಹಬ್ಬ.    ಡಾಕ್ಟರ್ ಎಂ.ಸಿ. ಮೋದಿ ಮಹಾತ್ಮಾ ಗಾಂದೀಜಿಯಿಂದ ಪ್ರೇರಿತರಾಗಿ ಕುಗ್ರಾಮಗಳಲ್ಲಿ ಉಚಿತವಾಗಿ ಮಾಡಿರುವ ಕಣ್ಣಿನ ಆಪರೇಷನ್ ಗಳು ಯಾರೂ ಅಳಿಸಲಾರದ ವಿಶ್ವ ದಾಖಲೆ.   ಡಾ.ಎಂ.ಸಿ. ಮೋದಿಯವರ ಕಣ್ಣಿನ ಶಸ್ತ್ರ ಚಿಕಿತ್ಸೆಯ ದಾಖಲೆ ಯಾರೂ ಮುರಿಯಲು ಸಾಧ್ಯವಿಲ್ಲ ಅದು ಸರ್ವಕಾಲಿಕ ವಿಶ್ವ ದಾಖಲೆ.    1968 ರಲ್ಲಿ ತಿರುಪತಿಯಲ್ಲಿ ಸತತ 14 ಗಂಟೆ ಕಣ್ಣಿನ ಚಿಕಿತ್ಸೆ ಮಾಡಿದ್ದರು.   ಒಂದೇ ದಿನ 833 ಜನರ ನೇತೃ ಶಸ್ತ್ರಚಿಕಿತ್ಸೆಗಾಗಿ1986 ರಲ್ಲಿ ಇವರ ಹೆಸರು ಗಿನ್ನೆಸ್ ದಾಖಲೆಯಲ್ಲಿದೆ.   ಒಮ್ಮೆಗೆ 4 ಜನರ೦ತೆ ಗ೦ಟೆಗೆ 40 ಶಸ್ತ್ರಚಿ...

3505. ನಮ್ಮೂರ ಶಾಂತಮ್ಮ ಸುಶೀಲಪ್ಪರ ಕುಟುಂಬದ ವಸಂತ್

#ನಿನ್ನೆಯ_ಘಟನೆ_ಮರೆಯಲಾರದ್ದು. #ಅವರು_ನಮ್ಮ_ಊರು_ಬಿಟ್ಟಿದ್ದು_1967 . #ನಾನು_ಹುಟ್ಟಿದ್ದು_1965. #ನಿನ್ನೆ_ನನ್ನ_ಆಫೀಸಿಗೆ_ಬಂದು_ನಾನ್ಯಾರು_ಗೊತ್ತಾ_ಅಂದಾಗ_ನೀವು_ವಸಂತಣ್ಣ_ಅಂದಾಗ #ನನ್ನ_ಮೆದುಳಿನ_ನೆನಪಿನ_ಕೋಶಗಳ_ಸಾಮರ್ಥ್ಯ_ನನಗೆ_ಅಚ್ಚರಿ. https://arunprasadhombuja.blogspot.com/2023/10/blog-number-1773-56.html    ನನಗೆ ನನ್ನ ನೆನಪಿನ ಶಕ್ತಿ ಬಗ್ಗೆ ಅಂತಹ ನಿರ್ಧಿಷ್ಟ ಸಾಮರ್ಥ್ಯ ಗೊತ್ತಿಲ್ಲ ಮತ್ತು ಕೆಲ ಸಂದರ್ಭದಲ್ಲಿ ಅದು ಬೆಳಕಿಗೆ ಬಂದಾಗ ನನಗೆ ಆಶ್ಚರ್ಯ.   ನಿನ್ನೆ ಬೆಳಿಗ್ಗೆ ನಮ್ಮ ಆನಂದಪುರ೦ನ ನಾಡ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ತಾವರೇಹಳ್ಳಿ ಗೋವಿಂದ ಮೂರ್ತಿ ಬಂದು ಈ ಹಿಂದೆ ಆನಂದಪುರಂನ ರೆವಿನ್ಯೂ ಇನ್ಸ್ಪೆಕ್ಟರ್ ಆಗಿದ್ದ ಈಗ ನಿವೃತ್ತರಾದ ಚೌಡಪ್ಪರ ಮಗ ಬಂದಿದ್ದಾರೆ ನಿಮ್ಮನ್ನು ಬೇಟಿ ಆಗಲು ಅಂದಾಗ 5-6 ಜನ ನನ್ನ ಅಪೀಸ್ ಒಳಗೆ ಬಂದರು.    ಅವರಲ್ಲಿ ಒಬ್ಬರು "ನಾನ್ಯಾರು ಗೊತ್ತಾಯಿತಾ?" ಅಂದರು ತಕ್ಷಣ ಬನ್ನಿ ಬನ್ನಿ ಅಂತ ಅನ್ನುತ್ತಾ ಅವರ ಪ್ರಶ್ನೆಗೆ ಉತ್ತರಿಸಲು ನನ್ನ ಮೆದುಳಿನ ನೆನಪಿನ ಕೋಶಗಳು ನೆನಪನ್ನು   ಹೊರಹಾಕಿತು.. "ವಸಂತಣ್ಣ.. ಶಾಂತಮ್ಮರ ಮಗ... ನಿಮ್ಮ ತಂದೆ ಪಾರೆಸ್ಟರ್ ಸುಶೀಲಪ್ಪ ಅವರ ಹ್ಯಾಟ್ ಬ್ರಿಟಿಷ ಕಾಲದ್ದು ... ನಿಮ್ಮ ತಂಗಿಯಂದಿರು ವಿಮಲಕ್ಕ ಮತ್ತು ಪ್ರೇಮಕ್ಕ" ಅಂದಾಗ ಅವರಿಗೆ ಒಂದು ಕ್ಷಣ ಶಾಕ್ ಆಯಿತು. ...

3504. ಹುಲಿ ವೇಷ

#ಹುಲಿ_ವೇಷ #ಹುಲಿ_ನರ್ತನ #ಹುಲಿ_ವೇಷದ_ಮೂಲ_ಎಲ್ಲಿ ? #ದಸರಾ_ಕೃಷ್ಣಜನ್ಮಾಷ್ಟಮಿ_ಗಣೇಶಚತುರ್ಥಿ_ಓಣಂಗಳಲ್ಲಿ_ಹುಲಿವೇಷ #ದುರ್ಗಾದೇವಿಯ_ವಾಹನ_ಹುಲಿ #ಮನುಷ್ಯ_ಹುಲಿಯಾಗಿ_ಬದಲಾಗಿ_ದೇವರ_ಸೇವೆಯ_ಹುಲಿವೇಷ, #ಕರಾವಳಿಯ_ಹುಲಿವೇಷ_ಕೇರಳದ_ಪುಲಿಕಲಿ  #hulivesh #pulinalike #bhagnach #durgadevi #dussara #tiger    ದಸರಾ ಮಹೋತ್ಸವದಲ್ಲಿ ಹುಲಿ ವೇಷ ಹೆಚ್ಚು ಪ್ರಸಿದ್ಧಿ ಪಡೆದಿದೆ ಇದಕ್ಕೆ ಕಾರಣ ದುಗಾ೯ ದೇವಿ ವಾಹನ ಹುಲಿ ಕೂಡ ಆಗಿರುವುದು.    ಕರಾವಳಿಯ ಹುಲಿ ವೇಷ, ಕೇರಳದ ಪುಲಿ ನಲಿಕೆ, ಒಡಿಷಾದ ಬಾಗ್ ನಾಚ್, ನಾಗಪುರದ ಮಾನವೀ ವಾಗ್, ತಮಿಳುನಾಡಿನ ಪುಲಿಯಟ್ಟಮ್ ಗಳು ಮನುಷ್ಯ ಹುಲಿಯಾಗಿ ಬದಲಾಗಿ ದೇವಿಯ ಸೇವೆ ಮಾಡುವುದು ಆಗಿದೆ. ನಮ್ಮ ಆನಂದಪುರಂನಲ್ಲಿ ಪ್ರತಿ ದಸರಾದಲ್ಲಿ ಹುಲಿ ವೇಷ ಹಾಕುತ್ತಿದ್ದವರು ಸ್ಕೂಲ್ ಜಗನಾಥಣ್ಣ ಅದೂ ಆಯಿಲ್ ಪೇಯಿಂಟ್ ನಲ್ಲಿ ಹುಲಿಯಾಗಿ ಕುಣಿಯುತ್ತಿದ್ದರು ಜೊತೆಗೆ ಕುಪ್ಪಣ್ಣನ ಹಲಿಗೆಯ ನಕ್ಕ-ಚಕ್ಕ ಆಕರ್ಷಣೆ ಊರಿಗೆಲ್ಲ ಮನೋರಂಜನೆ ಆಗಿರುತ್ತಿತ್ತು. ಈ ಹುಲಿ ವೇಷ ಏಕೆ? ಅದರ ಮೂಲ ಎಲ್ಲಿ? ಎಂಬ ಪ್ರಶ್ನೆಗಳಿಗೆ ಉತ್ತರ ಕೂಡ ಆಸಕ್ತಿದಾಯಕವಾಗಿದೆ. ಕರಾವಳಿಯಲ್ಲಿ ನವರಾತ್ರಿಯಲ್ಲಿ ಮನುಷ್ಯ ಹುಲಿಯಾಗಿ ಬದಲಾಗಿ ದೇವಿ ಸೇವೆ ಮಾಡುವುದೇ ಹುಲಿ ವೇಷ ಮತ್ತು ದುರ್ಗಾ ದೇವಿಯ ವಾಹನ ಹುಲಿ ಎಂಬುದು ಇಲ್ಲಿ ಗಮನಾರ್ಹ ವಿಷಯವಾಗಿದೆ.    200 ವರ್ಷದ ಹಿಂದೆ ಕೇರಳದ ಮಹಾರ...