Skip to main content

Posts

Blog number 2108. ನಿಮ್ಮ ಜೀವನ ಪರೀಕ್ಷೆ ಪಲಿತಾಂಶಕ್ಕಷ್ಟೇ ಸೀಮಿತಗಾದಿರಲಿ... ಶಿಕ್ಷಕರು ಮತ್ತು ಪೋಷಕರು ಪೇಲ್ ಆದವರಿಗೆ ಹತಾಷರಾಗುವಂತೆ ಮಾಡಬೇಡಿ.

#ಇವತ್ತು_ಎಸ್_ಎಸ್_ಎಲ್_ಸಿ_ಪಲಿತಾಂಶ #ಅನುತ್ತೀರ್ಣರಾದವರು_ಅಸಮರ್ಥರಲ್ಲ #ಪರೀಕ್ಷೆಯಲ್ಲಿ_ಪೇಲ್_ಆಗಿದ_ಸಾದಕರ_ಸಾಧನೆ_ಬಲ್ಲಿರಾ? #ಹೆಚ್ಚು_ಅಂಕ_ಪಡೆದವರನ್ನು_ಪ್ರಶಂಸುವುದು_ಕಡಿಮೆ_ಅಂಕ_ಪಡೆದವರು_ಅವಮಾನ_ಎಂದು_ಬಾವಿಸಬಾರದು #ಅನುತ್ತೀರ್ಣರಾದವರ_ಕಡಿಮೆ_ಅಂಕ_ಪಡೆದವರ_ಶಾಲೆ_ಬಿಟ್ಟವರ_ಸಾಧನೆ_ಗೊತ್ತಾ? #ಶಿಕ್ಷಕರು_ಮತ್ತು_ಪೋಷಕರಿಗೆ_ವಿನಂತಿ_ಏನೆಂದರೆ  #ದಯವಿಟ್ಟು_ಕಡಿಮೆ_ಅಂಕ_ಪಡೆದವರನ್ನ_ತೆಗಳ_ಬೇಡಿ #ಪೇಲ್_ಆದರೆ_ಅವಮಾನ_ಮಾಡಬೇಡಿ_ಈ_ಲೇಖನ_ತೋರಿಸಿ  #ಅವರ_ಭವಿಷ್ಯದ_ಜೀವನ_ಪರೀಕ್ಷೆಯ_ಅಂಕಗಳಿಗೆಸೀಮಿತವಲ್ಲ_ಎಂಬ_ವಾಸ್ತವತಿಳಿಸಿ.    Man of the Day ಎಂಬಂತೆ ಪರೀಕ್ಷೆ ಪಲಿತಾಂಶ ಬಂದ ದಿನ ಅತಿ ಹೆಚ್ಚು ಅಂಕ ಪಡೆದವರನ್ನ ಎಲ್ಲರೂ ಪ್ರಶಂಸೆ ಮಾಡುತ್ತಾರೆ ಇದರಿಂದ ಕಡಿಮೆ ಅಂಕ ಪಡೆದ ಮತ್ತು ಅನುತ್ತೀರ್ಣರಾದ ವಿದ್ಯಾರ್ಥಿಗಳು ಇದು ತಮಗಾದ ಅವಮಾನ ಎಂದು ಭಾವಿಸಬೇಕಾಗಿಲ್ಲ.    ಕಡಿಮೆ ಅಂಕ ಪಡೆದವರನ್ನ ಅನುತ್ತೀರ್ಣರಾದವರನ್ನು ಪೋಷಕರಾಗಲಿ ಅವರ ಶಿಕ್ಷಕರಾಗಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹೋಲಿಸಿ ಅವಮಾನ ಗೇಲಿ ಯಾವ ಕಾರಣಕ್ಕೂ ಮಾಡಬಾರದು.    ಶಿಕ್ಷಣದ ಅಂಕಗಳು ಜೀವನದ ಭವಿಷ್ಯ ನಿರ್ಧರಿಸುವುದಿಲ್ಲ, ಇವತ್ತಿನ ಪರೀಕ್ಷೆಯೇ ಜೀವನದ ಅಂತಿಮ ಪರೀಕ್ಷೆ ಅಲ್ಲ.   ಪ್ರಪಂಚದಲ್ಲಿ ನಾವು ಆರಾದಿಸುವ ಯಶಸ್ವಿ ವ್ಯಕ್ತಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿ ಆದವರಲ್ಲ ಅವರೆಲ್ಲ ಅನುತ್ತೀರ್ಣರಾದವರು ಶಾಲೆ ಬಿಟ್ಟವರು ಆಗಿದ್ದಾರೆ
Recent posts

Blog number 2107. ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆಯ ನಿಡುಗೋಡಿ ದಟ್ಟ ಅರಣ್ಯದ ಮಧ್ಯದಲ್ಲಿರುವ ನಿಗೂಡ ಜಲಪಾತ ಕುಂಚಿಕಲ್ ಪಾಲ್ಸ್ ನಮ್ಮ ದೇಶದ ಅತಿ ಎತ್ತರದ ಜಲಪಾತವೆಂದು ದಾಖಲೆ ಆಗಿರುವ ಹಿಮಾಚಲ ಪ್ರದೇಶದ ನೋಹಾಕಾಲಿಕೈ ಜಲಪಾತಕ್ಕಿಂತ ದೊಡ್ಡದೆಂದು ಹರಡಿರುವ ಸುದ್ದಿ ಸತ್ಯವಾ?

#ನನ್ನ_ಆತ್ಮೀಯ_ಗೆಳೆಯ_ಕುಣುಬಿ_ಈರಪ್ಪಣ್ಣರ_ಸಹೋದರ #ಮಾಸ್ತಿಕಟ್ಟೆ_ಕೆಪಿಸಿ_ದೇವೇಂದ್ರ_ನನ್ನ_ಅತಿಥಿ #ಕುಣುಬಿ_ಸಮಾಜ_ಸಂಘಟನೆಗೆ_ಈರಪ್ಪಣ್ಣರ_ಅಡಿಪಾಯ #ವರಾಹಿ_ಡ್ಯಾಂ_ಇವರ_ಜಮೀನಿನ_ಮೇಲೆ_ನಿರ್ಮಾಣವಾಗಿದೆ #ನಮ್ಮ_ಗ್ರಾಮ_ಪಂಚಾಯಿತಿ_ಘಂಟಿನಕೊಪ್ಪದಲ್ಲಿ_ಕೃಷಿ_ಮಾಡುತ್ತಿರುವ_ಕುಟುಂಬ #ದೇವೇಂದ್ರರಿಗೆ_ಕೆಪಿಸಿ_ಕೆಲಸ_ಕೊಡಿಸಿದ_ಆರಗ_ಜ್ಞಾನೇಂದ್ರ #ಈರಪ್ಪಣ್ಣ_ನೇತೃತ್ವದಲ್ಲಿ_ದೇಶದ_ಅತಿ_ದೊಡ್ಡ_ಜಲಪಾತ_ಕುಂಚಿಕಲ್_ಪಾಲ್ಸ್_ಅನ್ವೇಷಣೆ_ವಿಫಲವಾಗಿದ್ದು #ಈಗಲೂ_ನಿಗೂಡವಾಗಿರುವ_ಪಾಲ್ಸ್_ನೋಡಿದವರು_ಯಾರು? #ಅದನ್ನು_ಅಳೆದವರು_ಯಾರು? #ಈ_ಬಗ್ಗೆ_ಸರ್ಕಾರ_ಸ್ಪಷ್ಟ_ಉತ್ತರ_ನೀಡೀತಾ?   ಇವತ್ತು ಮಾದರಿ ಶಿಕ್ಷಕ ಮಿತ್ರ ಮಂಜುನಾಥ್ ಆರ್. ಸಿ. ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡಿನ ದಟ್ಟ ಅರಣ್ಯದ ಮಧ್ಯೆ ನಿಗೂಡವಾಗಿರುವ ಕುಂಚಿಕಲ್ ಪಾಲ್ಸ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ಸುದ್ದಿ ವಿಡಿಯೋ ಹಂಚಿಕೊಂಡಿದ್ದರು. https://www.facebook.com/share/v/3QUhXA3vswQfxBVc/?mibextid=qi2Omg   ಈ ನಿಗೂಡ ಪಾಲ್ಸ್ ನೋಡಿದ್ದ ಕುಣುಬಿ ಈರಪ್ಪಣ್ಣ ಈ ಬಗ್ಗೆ ಆಸಕ್ತರಾಗಿದ್ದ ನಮ್ಮನ್ನು ಅಲ್ಲಿಗೆ ಕರೆದೊಯ್ಯುವ ತಂಡದ ನಾಯಕತ್ವ ವಹಿಸಿಕೊಂಡಿದ್ದರು ಇದಕ್ಕಾಗಿ ನಾವು ನಮ್ಮದೇ ಒಂದು ತಂಡದೊಂದಿಗೆ ಸಜ್ಜಾಗಿದ್ದೆವು.   ದುರ್ಗಮ ಮಾಗ೯ದಲ್ಲಿ ನಮ್ಮ ತಂಡ ಕರೆದೊಯ್ಯಲು ದಾರಿ ಮಾಡಿ ಕೊಡಲ

Blog number 2106. ಶಿವಮೊಗ್ಗದ ದರಣೇಂದ್ರ ದಿನಕರ್ ಕುಟುಂಬದ ಹಿನ್ನೆಲೆ ರಕ್ತದಾನದಲ್ಲಿ ಶತಕ ಪೂರೈಸಿದ ಮಾಹಿತಿ

#ಶಿವಮೊಗ್ಗ_ಜಿಲ್ಲೆಯ_ಅತಿಹೆಚ್ಚು_ರಕ್ತದಾನದ_ದಾಖಲೆ #ದರಣೇಂದ್ರ_ದಿನಕರ್_ಅವರದ್ದು_ನಂತರದ್ದು_ಯಜ್ಞನಾರಾಯಣ್_106_ಬಾರಿ_ಮದುಸೂದನ್_103_ಬಾರಿ #ರಮೇಶ್_ಅವರದ್ದು #ಧರಣೇಂದ್ರ_ದಿನಕರ್_ವಂಶವೃಕ್ಷ #ಶಿವಮೊಗ್ಗ_ಜೈನ_ಸಮಾಜದ_ಪ್ರತಿಷ್ಟಿತ_ದಿನಕರ್_ಮನೆತನ https://youtu.be/PvUH7gw9mUk?feature=shared

Blog number 2105. ಶಿವಮೊಗ್ಗ ಜಿಲ್ಲೆಯ ನಮಗೆ ಗೊತ್ತಿಲ್ಲದ ಅಥವ ಅಸ್ಪಷ್ಟ ಮಾಹಿತಿ ಕೇಳಿದ್ದ ಶಿವಮೊಗ್ಗ ಜಿಲ್ಲೆಯ ಇತಿಹಾಸವನ್ನು ಸ್ಥಳಿಯ ಎಲೆಮರೆಯ ಕಾಯಿಯಂತಿರುವ ಪ್ರತಿಭಾವಂತ ಇತಿಹಾಸ ಸಂಶೋಧಕರ ಮೂಲಕ ಡಿಜಿಟಲ್ ಮಾಧ್ಯಮದಲ್ಲಿ ದಾಖಲಿಸುತ್ತಿರುವ ಆಕರ್ಷ ನಂದಿನಿ ದಂಪತಿಗಳ ಅಮೂಲ್ಯ ಇತಿಹಾಸ ಸಂರಕ್ಷಣ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆ ಗಳು.

#ಬೆಂಜಮಿನ್_ಲೂವಿಸ್_ರೈಸ್_ನಂತರ_125_ವರ್ಷಗಳ_ನಂತರ #ಶಿವಮೊಗ್ಗ_ಜಿಲ್ಲೆಯ_ಇತಿಹಾಸದ_ಕುರುಹು_ಹುಡುಕಿಕೊಂಡು_ಬಂದು #ತಮ್ಮ_ಡಿಜಿಟಲ್_ಮಾಧ್ಯಮದಲ್ಲಿ_ದಾಖಲಿಸುತ್ತಿರುವ_ಆಕರ್ಷ_ನಂದಿನಿ_ದಂಪತಿಗಳು #ಇವರಿಗೆ_ಸಹಕರಿಸುತ್ತಿರುವ_ಇತಿಹಾಸ_ಸಂಶೋಧಕರಾದ #ಲೋಕರಾಜ_ಜೈನ್_ರಮೇಶ್_ಹಿರೇಜಂಬೂರ್_ಶಿರಾಳಕೊಪ್ಪದ_ಪತ್ರಕರ್ತ_ನವೀನ್ #ಪ್ರತಿಯೊಂದು_ಭಾಗವೂ_ಉಪಯುಕ್ತ_ಮಾಹಿತಿ_ಒಳಗೊಂಡಿದೆ #ಶಿವಮೊಗ್ಗ_ಜಿಲ್ಲೆಯ_ಸಮಗ್ರಇತಿಹಾಸ_ಹೊಸ_ತಲೆಮಾರಿನ_ದೃಶ್ಯ_ಮಾಧ್ಯಮದಲ್ಲಿ #ಮುಂದಿನ_ತಲೆಮಾರಿಗೆ_ಸಂರಕ್ಷಿಸಲಾಗುತ್ತಿದೆ.   ಶರಾವತಿ ನದಿಯ ದಂಡೆಯ ಬಲಿಷ್ಟವಾದ ಏಕೈಕ ಜೈನ ರಾಜರ ಆಡಳಿತದ ಕಥೆ ಭಾರತೀಯರೆಲ್ಲರಿಗೂ ಮುಖ್ಯವಾದ ಇತಿಹಾಸ ಆದರೂ ಸಾಗರ ತಾಲೂಕಿನ ಜನತೆಗೆ ಬಹುಮುಖ್ಯ ಇತಿಹಾಸ ಇದನ್ನು ನಾಡಿನ ಪ್ರಖ್ಯಾತ #ಡಿಜಿಟಲ್_ಮಾಧ್ಯಮದ ಮೂಲಕ ನಮ್ಮ ತಾಲ್ಲೂಕಿನ ಇತಿಹಾಸ ಸಂಶೋದಕರು ಈ ರಾಣಿಯ ವಂಶಸ್ಥರೂ ಆಗಿರುವ #ಲೋಕರಾಜ್_ಜೈನ್ ತುಂಬಾ ಸ್ಟಾರಸ್ಯವಾಗಿ ಜನತೆಗೆ ವಿವರಿಸುತ್ತಿದ್ದಾರೆ.   ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ https://youtu.be/kOk6J1zx6to?feature=shared    ಈ ರಾಣಿಯ ಆಡಳಿತಕ್ಕೆ ನಮ್ಮ ಸಾಗರ ತಾಲೂಕಿನ ಅರ್ದ ಬಾಗ ಸೇರಿತ್ತು ತಾಲ್ಲೂಕಿನ ಪಶ್ಚಿಮ ಭಾಗದ ಆವಿನಹಳ್ಳಿಯಿಂದ, ತಾಳಗುಪ್ಪದ ಗಮಟೆ ಘಟ್ಟದಿಂದ ಅರಬೀ ಸಮುದ್ರದ ತನಕ ರಾಣಿ ಚಿನ್ನ ಬೈರಾದೇವಿ ವ್ಯಾಪ್ತಿಗೆ ಸೇರಲ್ಪಟ್ಟ ಪ್ರದೇಶವಾಗಿತ್ತು.   ಚೆನ್ನಭೈರಾದೇವಿಯು ಸಾಳುವ

Blog number 2104. ಹದಿನೆಂಟನೆ ಲೋಕ ಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರತಿನಿದಿ ಯಾರು?

#ಹದಿನೆಂಟನೆ_ಲೋಕಸಭಾ_ಚುನಾವಣೆ #ಜೆ_ಹೆಚ್_ಪಟೇಲ್_ಬಂಗಾರಪ್ಪ_ಯಡೂರಪ್ಪ_ಸಂಸದರಾಗಿ_ಆಯ್ಕೆ_ಆಗಿದ್ದ #ಶಿವಮೊಗ್ಗ_ಲೋಕಸಬಾ_ಕ್ಷೇತ್ರದಿಂದ_ಈ_ಬಾರಿ_ಯಾರು_ಆಯ್ಕೆ_ಆಗಲಿದ್ದಾರೆ.   ದಿನಾಂಕ 7 ಮೇ 2024ರ ಮಂಗಳವಾರ ಶಿವಮೊಗ್ಗ ಲೋಕ ಸಭಾ ಚುನಾವಣೆಯಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಸ್ಪರ್ಧೆ ಮಾಡಿದ್ದಾರೆ, ಯಡೂರಪ್ಪರ ಪುತ್ರ ಹಾಲಿ ಸಂಸದ ರಾಘವೇಂದ್ರ BJP ಯಿಂದ ಮತ್ತು ಬಂಗಾರಪ್ಪರ ಪುತ್ರಿ ವರನಟ ರಾಜಕುಮಾರ್ ಸೊಸೆ ಗೀತಾ ಶಿವರಾಜ್ ಕುಮಾರ್ ಕಾಂಗ್ರೇಸನಿಂದ ಸ್ವರ್ದಿಸಿದ್ದಾರೆ ಇವರಿಬ್ಬರ ಮಧ್ಯದಲ್ಲಿ BJP ಬಂಡಾಯ ಅಭ್ಯರ್ಥಿ ಆಗಿ ಮಾಜಿ ಮುಖ್ಯಮಂತ್ರಿ ಈಶ್ವರಪ್ಪ ಪ್ರಧಾನಿ ಮೋದಿ ಭಾವಚಿತ್ರದೊಂದಿಗೆ ಪ್ರಚಾರದ ಮುಂಚೂಣಿಯಲ್ಲಿದ್ದಾರೆ.  2005ರಲ್ಲಿ ಸಮಾಜವಾದಿ ಪಕ್ಷದಿಂದ ಬಂಗಾರಪ್ಪನವರು ಕಾಂಗ್ರೇಸ್ ನಿಂದ ಸ್ಪರ್ದಿಸಿದ್ದ ಅಯನೂರು ಮಂಜುನಾಥರನ್ನ 16ಸಾವಿರದ ಆರುನೂರು ಮತಗಳಿಂದ ಸೋಲಿಸಿ ಸಂಸದರಾಗಿದ್ದರು ಆಗ BJP ಭಾನುಪ್ರಕಾಶ್ ಮೂರನೆ ಸ್ಥಾನ ಪಡೆದರು.   2009ರಲ್ಲಿ ಕಾಂಗ್ರೇಸಿನಿಂದ ಸ್ವರ್ಧಿಸಿದ್ದ ಬಂಗಾರಪ್ಪನವರು ಬಿಜೆಪಿಯಿಂದ ಸ್ಪರ್ದಿಸಿದ್ದ ಬಿ.ವೈ.ರಾಘವೇಂದ್ರರ ಎದರು 52 ಸಾವಿರದ 893 ಮತದಿಂದ ಸೋಲು ಅನುಭವಿಸಿದ್ದರು ಆಗ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು ಮತ್ತು ಹರತಾಳು ಹಾಲಪ್ಪ ಬಂಗಾರಪ್ಪರ ವಿರುದ್ದ ಪಾಳೆಯದಲ್ಲಿದ್ದರು.   2014ರಲ್ಲಿ ಬಿಜೆಪಿಗೆ ತಾವು ಕಟ್ಟಿದ ಕೆಜೆಪಿಯಿಂದ ವಾಪಾಸು ಬ

Blog number 2103. ಕನ್ನಡದ ಮೊದಲ ಶಾಸನ ತಾಳಗುಂದ ಶಾಸನ ಇದರ ಉತ್ಕನನ ಸಂಶೋದನೆಗೆ ಕಾರಣವಾದ ನವೀನ್ ಕುಮಾರ್ ನಡೆಸಿದ 2012ರ ತಾಳಗುಂದ ಉತ್ಸವ

#ಭಾಗ_4. #ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ_ಸಂಶೋದಕರ_ಸರಣಿಗಳು #ಶಿರಾಳಕೊಪ್ಪದ_ಪ್ರಜಾವಾಣಿ_ವರದಿಗಾರ_ನವೀನ್_ಕುಮಾರ್ #ಇವರು_ತಾಳಗುಂದ_ಉತ್ಸವ_2012ರಲ್ಲಿ_ನಡೆಸಿದ್ದರು #ಇದು_ಕನ್ನಡದ_ಮೊದಲ_ಶಾಸನ_ಉತ್ಕನದಲ್ಲಿ_ಸಿಗಲು_ಕಾರಣವಾಯಿತು #ಈ_ಯುವಕನ_ಅಸಾಮಾನ್ಯ_ಕನ್ನಡ_ಸೇವೆ_ಸರ್ಕಾರ_ಗಮನಿಸಲಿ #ಈ_ಬಾರಿಯ_ಸುವರ್ಣ_ಕನ್ನಡ_ರಾಜ್ಯೋತ್ಸವ_ಪ್ರಶಸ್ತಿ_ಇವರಿಗೆ_ನೀಡಲಿ #ಶಿವಮೊಗ್ಗ_ಜಿಲ್ಲೆಯಲ್ಲಿ_ನಡೆಯುವ_ಸುವರ್ಣ_ರಾಜ್ಯೋತ್ಸವದ_ಜ್ಯೋತಿ #ತಾಳಗುಂದದಲ್ಲಿ_ಬೆಳಗಲಿ. #ಕನ್ನಡಾಭಿಮಾನಿಗಳು_ಕನ್ನಡ_ಹೋರಾಟಗಾರರು_ಈ_ಸಂದರ್ಶನ_ನೋಡಲೇಬೇಕು. https://youtu.be/W4JCFiy56Tw?feature=shared   ನಮ್ಮ ಹಳ್ಳಿಗಾಡಿನ ಹಿಂದುಳಿದ ವರ್ಗದ ವಿದ್ಯಾವಂತ ಯುವಕ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ನವೀನ್ ಕುಮಾರ್ ಅವರ ಕನ್ನಡ ಭಾಷೆ - ನೆಲ-ಜಲದ ಬಗ್ಗೆ ಮಾಡಿರುವ ಸಾದನೆ ಸಣ್ಣದಲ್ಲ.   2012 ರಲ್ಲಿ ಅವರು ನಡೆಸಿದ ಮೊದಲ #ತಾಳಗುಂದ_ಉತ್ಸವದ ಯಶಸ್ಸು ತಾಳಗುಂದ ಉತ್ಕನನಕ್ಕೆ ಕಾರಣವಾಯಿತು ಮತ್ತು ಕನ್ನಡದ ಮೊದಲ ಶಾಸನ ಪತ್ತೆ ಆಗಲು ಕಾರಣ ಆಯಿತು.   ಇದೇ ಸಂದರ್ಭದಲ್ಲಿ ಕನ್ನಡಿಗ ಕೇಶವ ಅವರು ಪುರಾತತ್ವ ಇಲಾಖೆ ಮುಖ್ಯಸ್ಥರಾಗಿದ್ದು ಒಂದೂ ಕಾರಣ.   ತಾಳಗುಂದ ಉತ್ಸವ 2012ರಲ್ಲಿ ನಡೆದ ಮೊದಲ ಮತ್ತು ಕೊನೆಯ ಉತ್ಸವ ಆಯಿತು.   ಈ ವರ್ಷ ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವದ ಆಚರಣೆ ನಡೆಯುತ್ತಿದೆ ಆದ್ದರಿಂದ ಜಿಲ್ಲೆಯ ಕನ್ನಡ ಪರ ಹೋರಾಟ

Blog number 2102. ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಪದೋನ್ನತಿ ಹೊಂದಿದ ಮಂಜುಳಮ್ಮನ ವಿದ್ಯಾಬ್ಯಾಸ ಕೇವಲ ಎರಡನೆ ತರಗತಿ.

#ಇವತ್ತು_ಕಾರ್ಲ್_ಮಾರ್ಕ್ಸ್_ಹುಟ್ಟಿದ_ದಿನ #ಮ್ಯಾಕ್ಸಿಂ_ಗಾರ್ಕಿ_ಬರೆದ_ಪುಸ್ತಕ_ತಾಯಿ_ನನಗೆ_ಪ್ರಭಾವ_ಬೀರಿದ_ಪುಸ್ತಕ #ನಮ್ಮ_ಸಂಸ್ಥೆಯಲ್ಲಿ_14_ವರ್ಷ_ಸೇವೆ_ಸಲ್ಲಿಸಿದ #ಮಹಿಳಾ_ಕಾರ್ಮಿಕಳಿಗೆ_ಅಸಿಸ್ಟಂಟ್_ಮ್ಯಾನೇಜರ್_ಪ್ರಮೋಷನ್ #ನಮ್ಮ_ಸಂಸ್ಥೆಯಲ್ಲಿ_ಅರ್ಹತೆಗೆ_ಹೆಚ್ಚಿನ_ಪ್ರಾಶಸ್ತ್ಯ   ಇವತ್ತು ವಿಶ್ವ ವಿಖ್ಯಾತ ಅರ್ಥಶಾಸ್ತ್ರಜ್ಞ ಕಾರ್ಲ್ ಮಾರ್ಕ್ಸ್ ಹುಟ್ಟಿದ ದಿನ,ನನಗೆ ಕಾರ್ಲ್ಸ್ ಮಾರ್ಕ್ಸ್ ಹೆಚ್ಚು ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಅದನ್ನು ಓದುವಾಗ ಸಣ್ಣ ವಯಸ್ಸಲ್ಲಿ ಅಂತಹ ಪ್ರೌಡಿಮೆ ಇರಲಿಲ್ಲ ಆದರೂ ನನಗೆ ಅರ್ಥವಾಗಿದ್ದು  ಸಾಮಾಜಿಕ ವಿಜ್ಞಾನಕ್ಕೆ ಅವರು ನೀಡಿದ ದೊಡ್ಡ ಕೊಡುಗೆ "ಸಾಮಾಜಿಕ ಸಂಘಟನೆ ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ".    18 ನೆ ವಯಸ್ಸಲ್ಲಿ ಶಿವಮೊಗ್ಗದ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ #ಬಿ_ಕೃಷ್ಣಪ್ಪರ ಒಡನಾಡಿ #ಪ್ರೋ_ರಾಚಪ್ಪ ಪರಿಚಯಿಸಿದ ಕೋಲಾರದ #ಕಾಮ್ರೇಡ್_ನಾರಾಯಣ_ಸ್ವಾಮಿ ನನಗೆ ಅನೇಕ ವಿಚಾರಗಳಿಗೆ ಪ್ರೇರಣೆ ಆದರು ಅವರು ನನಗೆ ನೀಡಿದ ಪುಸ್ತಕ ಮಾಕ್ಸಿಂಗಾರ್ಕಿ ಬರೆದ #ತಾಯಿ (ಕನ್ನಡಕ್ಕೆ ಭಾಷಾಂತರವಾಗಿದ್ದ) ಪುಸ್ತಕ.   1906 ರಲ್ಲಿ  ಗಾರ್ಕಿ ಅಮೇರಿಕಾ ಪ್ರವಾಸದಲ್ಲಿ ಬರೆದ ಪುಸ್ತಕ (ರಷ್ಯಾ ಕ್ರಾಂತಿ 1905 ರಲ್ಲಿ ವಿಫಲವಾದ ಸಂದರ್ಭದಲ್ಲಿ) ರಷ್ಯಾದ ಕಾರ್ಖಾನೆಗಳಲ್ಲಿ ಬರಿಕೈಯಲ್ಲಿ ಕೆಲಸ ಮಾಡುವ ಬಡತನ ಹಸಿವಿನ ವಿರುದ್ಧ ಹೋರಾಡುವ ಮಹಿಳೆಯ ಜೀವನ ಚ