ಸಿ.ಜಿ.ಗೋಪಾಲಕೃಷ್ಣರಾಯರನ್ನ ನಾನು 1989ರ ನಂತರದಿಂದ ನೋಡಿದವನು ಅವರು ಸಾತ್ವಿಕ ಮನುಷ್ಯರು, ವ್ಯವಹಾರ ಚತುರರು ಮತ್ತು ನ್ಯಾಯ ನಿಷ್ಟರು.
ಮಾನಸಿಕವಾಗಿ ದೃಡತೆ ಕಳೆದುಕೊಳ್ಳದವರು, ತಮಗೆ ಏನು ಹೇಳಬೇಕು ಅದನ್ನ ಹೇಳಿದವರು, ದುಡಿದು ದಾನ ಮಾಡಿದ ಪುಣ್ಯವಂತರು, ನಾವು ಆನಂದಪುರದಲ್ಲಿ ಡಾಕ್ಟರ್ ಮೊದಿಯವರ ಉಚಿತ ಕಣ್ಣಿನ ಚಿಕಿತ್ಸ ಶಿಭಿರ ಹಮ್ಮಿ ಕೊಂಡಿದ್ದಾಗ ಆಥಿ೯ಕ ಸಹಾಯಕ್ಕೆ ಹೋದಾಗ ವಯಸಲ್ಲಿ ಸಣ್ಣವರಾದ ನಮ್ಮನ್ನೆಲ್ಲ ಗೌರವದಿಂದ ಕಂಡು ದೊಡ್ಡ ಮೊತ್ತ ಸಹಾಯ ಮಾಡಿದ ದೊಡ್ಡ ಮನುಷ್ಯರು ಅವರ ಮೇಲೆ ಹಲ್ಲೆ ಮಾಡಿದವರು, ಅದಕ್ಕೆ ಸಹಕರಿಸಿದವರು ಯಾರೇ ಇದ್ದರು ಅವರು ತಮ್ಮ ಹೆತ್ತವರನ್ನೆ ಹಲ್ಲೆ ಮಾಡಿದ0ತ ಪಾಪ ಕೃತ್ಯಕ್ಕೆ ಸಮನಾದ ಪಾಪದ ಕೆಲಸ ಮಾಡಿದಂತೆ.
ದೇವರು ಸಿಜಿಕೆಯವರಿಗೆ ಅವರ ಕುಟುಂಬಕ್ಕೆ ಆಯುರಾರೋಗ್ಯ, ಆಯುಸ್ಸು ಮತ್ತು ಐಶ್ವಯ೯ ರ ದಯಪಾಲಿಸಲಿ ಎಂದು ದೇವರಲ್ಲಿ ಪ್ರಾಥಿ೯ಸುತ್ತೇನೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment